Friday, January 24, 2025
ಸುದ್ದಿ

ಬೈಕ್‌ಗೆ ಕಾರು ಡಿಕ್ಕಿ ; ಬೈಕ್ ಸವಾರ ಮೃತ್ಯು – ಕಹಳೆ ನ್ಯೂಸ್

ಬಂಟ್ವಾಳ : ಬೈಕ್‌ಗೆ ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಾಮಾಜೆ ಕ್ರಾಸ್ ಬಳಿ ಇಂದು ನಡೆದಿದೆ.


ವಾಮದಪದವು ಸಮೀಪದ ಪಾಂಗಲ್ಪಾಡಿ ನಿವಾಸಿ ಶ್ರೀನಿವಾಸ (ಬಾಬು) ಉಡುಪ (58) ಮೃತಪಟ್ಟ ವ್ಯಕ್ತಿ.
ವಾಮದಪದವನಿಂದ ಅವರು ಬಿಸಿರೋಡಿಗೆ ಬರುತ್ತಿದ್ದ ವೇಳೆ ಹಿಂಬದಿಯಿoದ ಬರುತ್ತಿದ್ದಕಾರು ಬೈಕಿಗೆ ಡಿಕ್ಕಿಯಾದ ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯವಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಮೃತರು ಪತ್ನಿ, ಪುತ್ರ,ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು