Thursday, January 23, 2025
ಸುದ್ದಿ

ಶ್ರೀವಿಷ್ಣುಮೂರ್ತಿ ದೇವಸ್ಥಾನ ಕಳೆಂಜ ದೇಂತಡ್ಕದಲ್ಲಿ ನವರಾತ್ರಿ ಪೂಜೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಶ್ರೀ ಸೋದೆ ಮಠಾಧೀಶರು ಪ್ರತಿಷ್ಠಾಪಿಸಿದ. ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕಳೆಂಜ ದೇಂತಡ್ಕ, ಬಿಳಿಯೂರು ಪೆರ್ನೆ ಇಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿ, ಅಕ್ಟೋಬರ್ 15 ರಿಂದ 24 ರವರೆಗೆ ನವರಾತ್ರಿ ಪೂಜೋತ್ಸವ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆಯನ್ನ ಇಂದು ದೇವಾಲಯದಲ್ಲಿ ಬಿಡುಗಡೆಗೊಳಿಸಲಾಯಿತು. ಇನ್ನು ನವರಾತ್ರಿಯ ಆಯಾ ದಿನ ಊರಿನ ಬೈಲವಾರು ಸಮಿತಿಗಳಿಂದ ನವರಾತ್ರಿಯ ವಿಶೇಷ ಪೂಜೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ದೇವಸ್ಥಾನದ ಪವಿತ್ರಪಾಣಿ, ಶ್ರೀ ಕೃಷ್ಣರಾವ್ ಬಾಗ್ಲೊಡಿ, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಕಾರಂತ ಶಂಕರಯ್ಯ ಪಾಲು, ಕಾರ್ಯದರ್ಶಿಯಾದ ಶ್ರೀಮತಿ ರೇವತಿ ಪಿ, ಉಪಾಧ್ಯಕ್ಷರಾದ ಉಮೇಶ್ ಪೂಜಾರಿ ಬಾಕಿಮಾರ್, ಕೋಶಾಧಿಕಾರಿ ಶ್ರೀ ಚಿದಾನಂದ ಕಳೆಂಜ , ಹಾಗೂ ಉಮಾನಾಥ ಶೆಟ್ಟಿ ಸಂಪಿಗೆಕೋಡಿ, ಸುಂದರ ಮಲ್ಲಡ್ಕ ವಿಜೇತ್ ಕುಮಾರ್, ಪುಷ್ಪರಾಜ್ ಶೆಟ್ಟಿ ಪದಬರಿ, ರವೀಂದ್ರ ಶೆಟ್ಟಿ, ದಿನೇಶ್ ಗುಂಡಿ, ವೇಣುಗೋಪಾಲ್ ಬಟ್ಟೆಜಾಲ್, ಶೀನಪ್ಪ ಪೂಜಾರಿ, ಸುರೇಶ್ ಶೆಟ್ಟಿ, ನೀಲಪ್ಪ ಗೌಡ, ಚಂದ್ರಹಾಸ ಶೆಟ್ಟಿ, ಸಂಜೀವ ಪೂಜಾರಿ, ಐತ್ತಪ್ಪ ಭಂಡಾರಿ, ಪುರಂದರ ಗೌಡ, ವಿದ್ಯಾಪ್ರಸಾದ್, ಕಿರಣ್ ಶೆಟ್ಟಿ,ಪ್ರೀತಮ್ ಕೇದಗೆ, ಗೋಪಾಲ ಶೆಟ್ಟಿ ಸಂಪಿಗೆಕೋಡಿ, ಗಿರೀಶ್ ಭಟ್,ಗಂಗಾಧರ ಶೆಟ್ಟಿ,ಶೀವಪ್ಪ ನಾಯ್ಕ, ನಳಿನಿ ಉಮೇಶ್,ಮಿತ್ರದಾಸ್ ರೈ, ಸದಾಶಿವ ಶೆಟ್ಟಿ,ಗೀರಿಶ್ ಪೂಜಾರಿ,ಚೇತನ್, ಸೀತಾರಾಮ ಸಾಮಾನಿ, ಶೀನಪ್ಪ ಗೌಡ ಕುಂಡಾಜೆ, ಪದ್ಮನಾಭ ಸಾಮಾನಿ, ಮೋಹನ್ ಶೆಟ್ಟಿ, ತನಿಯಪ್ಪ ಪೂಜಾರಿ,ಸತೀಶ್ ಶೆಟ್ಟಿ, ನಾರಾಯಣ ಪೂಜಾರಿ, ಕೊರಗಪ್ಪ ಭಂಡಾರಿ,ಜಯ ಆಚಾರ್ಯ, ದೇವಸ್ಥಾನದ ಅರ್ಚಕರಾದ ನಾರಾಯಣ ಭಟ್ ಹಾಗೂ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.