ಅಪ್ರತಿಮ ಹುಲಿವೇಷ ದಾರಿ ಕಾಡುಬೆಟ್ಟು ಅಶೋಕ್ ರಾಜ್ ಆಸ್ಪತ್ರೆಗೆ ದಾಖಲು : ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ : ಬೇಕಾಗಿದೆ ಸಹೃದಯಿಗಳ ನೆರವು –ಕಹಳೆ ನ್ಯೂಸ್
ಸಂಪ್ರಾದಾಯಕ ಹುಲಿವೇಷದಾರಿ, ಹುಲಿಕುಣೆತದಲ್ಲಿ ತನ್ನದೇ ಆದ ಚಾಪುಮೂಡಿಸಿದ ಕಾಡುಬೆಟ್ಟು ಅಶೋಕ್ ರಾಜ್ ಅನಾರೋಗ್ಯಕ್ಕೆ ಒಳಗಾಗಿದ್ದು ಬೆಂಗಳೂರಿನ ಆಸ್ವತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಶಸ್ತç ಚಿಕಿತ್ಸೆಯ ಅವಶ್ಯಕತೆ ಇದ್ದು ಇವರ ಕುಟುಂಬ ಇದೀಗ ಸಹೃದಯ ದಾನಿಗಳ ಸಹಾಯಹಸ್ತದ ನಿರೀಕ್ಷೆಯಲ್ಲಿದೆ. ಚೌತಿಯ ಪ್ರಯುಕ್ತ ಕಳೆದ ಹತ್ತು ದಿನಗಳಿಂದ, ಕೇರಳ, ಹುಬ್ಬಳ್ಳಿ, ತುಮಕೂರು,ಮತ್ತು ಬೆಂಗಳೂರಿನ ಆಯ್ದ ಕಡೆಗಳಲ್ಲಿ ನಿರಂತರವಾಗಿ ತಮ್ಮ ತಂಡದೊAದಿಗೆ ಹುಲಿವೇಷ ಧರಿಸಿದ ಪ್ರದರ್ಶನ ವನ್ನ ನೀಡುತ್ತಿದ್ದರು.
ಕೊನೆಯ ಕಾರ್ಯಕ್ರಮ ಶುಕ್ರವಾರ ನಡೆದಿದ್ದು ಈ ವೇಳೆ ಊಟದ ಸಮಯದಲ್ಲಿ ಅಶೋಕ್ ರಾಜ್ ಕುಸಿದು ಬಿದಿದ್ದಾರೆ. ತಕ್ಷಣ ಅವರನ್ನು ಬೆಂಗಳೂರಿನ ಸ್ವರ್ಶ ಆಸ್ಪತ್ರೆಗೆ ದಾಖಲಿಸಿ. ನಂತರ ತ್ರೀವ್ರ ಉಸಿರಾಟದ ತೊಂದರೆ ಕಂಡುಬAದು, ತೀವ್ರ ಹೃದಯಾಘಾತವಾಗಿ ಕೋಮ ತಲುಪಿದ್ದರು. ಆರೋಗ್ಯದಲ್ಲಿ ಕಂಡುಬರುತ್ತಿರುವ ತೀವ್ರತೆಯನ್ನ ಅರಿತು ತಕ್ಷಣ ಬೆಂಗಳೂರಿನ ದಯಾನಂದ ಸಾಗರ ಆಸ್ವತ್ರೆಗೆ ವರ್ಗಾಯಿಸಲಾಯಿತು.
ಇದೀಗ ತ್ರೀವ್ರ ನೀಗಾ ಘಟಕದಲ್ಲಿ ಹೃದಯಸಂಬAಧಿ ಹಾಗೂ ಮೆದುಳಿಗೆ ಸಂಬAಧಿಸಿದAತೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಶೋಕ್ ರಾಜ್ ಅವರ ಪುತ್ರಿ ಸುಷ್ಮಾ ರಾಜ್ ತಿಳಿಸಿದ್ದಾರೆ. ಇವರು ಕಳೆದ ೩೬ವರುಷದಿಂದ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಉಡುಪಿಯಲ್ಲಿ ಸಾಂಪ್ರದಾಯಿಕ ಹುಲಿವೇಷ ಧರಿಸಿದ್ದರು. ೨೮ವರುಷ ಹುಲಿವೇಷ ತಂಡ ರಚಿಸಿ ಉಬಯ ಜಿಲ್ಲೆಗಳಲ್ಲಿ ತಂಡವವು ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಇವರ ನಾಯಕತ್ವದಲ್ಲಿ ಉಡುಪಿಯ ಹಲವಾರು ಹುಲಿವೇಷಧಾರಿಗಳಿಗೆ ತರಬೇತಿ ನೀಡಲಾಗುತ್ತಿದೆ.. ಕಳೆದ ವರುಷ ಮಣಿಪಾಲದ ಮಾಹೆಯಲ್ಲಿ ಜಾನಪದ ಕಲೆಯಲ್ಲಿ ಹುಲಿವೇಷ ಕುಣಿತ ಹೆಜ್ಜೆ ಹಾಗೂ ನಲಿಕೆಯ ಅಧ್ಯಯನದ ದಾಖಲೀಕರಣವು ಇವರದೆ ತಂಡವಾಗಿತ್ತು. ಅದೇ ರೀತೀ ಇಪ್ಪತ್ತೈದು ವರುಷ ಹಿಂದೆ ಅಂತರಾಷ್ಟ್ರೀಯ ಮಟ್ಟದ ಬಿ.ಬಿ.ಸಿ ವಾಹಿನಿಯ ತಂಡಕ್ಕೆ, ಪ್ರೊಫೆಸರ್ ಎಸ್ ಎ. ಕೃಷ್ಣಯ್ಯರವರ ಮೂಲಕ ಉಡುಪಿಯಲ್ಲಿ ಹುಲಿಕುಣಿತದ ಚಿತ್ರಿಕರಣ ನಡೆದಾಗಲೂ ಅಶೋಕ್ ರಾಜ್ ಅವರ ತಂಡ ಆಯ್ಕೆಯಾಗಿತ್ತು. ಈ ಕಾರ್ಯಕ್ರಮ ಉಡುಪಿಯ ರಾಜಾಂಗಣದಲ್ಲಿ ನಡೆದಿತ್ತು.
ಹುಲಿವೇಷದ ಮೂಲಕವೇ ಹೆಸರುವಾಸಿಯಾಗಿರುವ ಅಶೋಕ್ ರಾಜ್ ಇದೀಗ ಬೆಂಗಳೂರಿನ ಆಸ್ವತ್ರೆಯಲ್ಲಿ ತ್ರೀವ್ರ ನಿಗಾಘಟಕದಲ್ಲಿದ್ದು, ಇನ್ನು ಹತ್ತುದಿನಗಳ ಗಡುವನ್ನ ವೈದ್ಯರು ನೀಡಿದ್ದಾರೆ. ಬೆಂಗಳೂರಿನನಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುತ್ತಿದದ್ದು ದಿನಕ್ಕೆ ಒಂದು ಲಕ್ಷ ವೆಚ್ಚವಾಗುತ್ತಿದೆ. ಈಗಾಗಲೇ ನಾಲ್ಕೈದು ದಿನ ಕಳೆದಿದೆ. ಕಲಾವಿದರು ಹಾಗೂ ಇವರ ಕುಟುಂಬದವರು ಹಣ ಹೊಂದಿಸಲು ಎಲ್ಲಾ ರೀತಿಯ ಪ್ರಯತ್ನವನ್ನ ಮಾಡಿದ್ದಾರೆ. ಆದರೆ ದೊಡ್ಡ ಮೊತ್ತದ ಹಣ ಹೊಂದಿಸಲು ಇದೀಗ ಸಹೃದಯ ದಾನಿಗಳ ಸಹಾಯಹಸ್ತ ಬೇಕಾಗಿದೆ. ಅಶೋಕ್ ರಾಜ್ ಇವರ ಚಿಕಿತ್ಸೆಗೆ ಹಣದ ನೆರವು ನೀಡುವವರು ಇವರ ಬ್ಯಾಂಕ್ ಖಾತೆಗೆ ಹಣ ವರ್ಗಾಹಿಸಬಹುದಾಗಿದೆ.
G pay / phone pay NO 9980250447
Bank name : Canara bank
Name : ashok raj
Branch : Brahmagiri
Account no: 02222200029903
IFSC : CNRB0010222