Wednesday, January 22, 2025
ಸುದ್ದಿ

ಏಳು ಮೀಟರ್ ನೀರು ಸಂಗ್ರಹದಿoದ ಕೃಷಿ ಭೂಮಿ ಜಲಾವೃತದ ಭೀತಿ-ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಬಂಟ್ವಾಳ ರೈತ ಸಂಘದಿoದ ಸರಕಾರಕ್ಕೆ ಮನವಿ –

ಬಂಟ್ವಾಳ : ಮಂಗಳೂರು ಜನತೆಗೆ ಕುಡಿಯುವ ನೀರು ಪೂರೈಕೆ ಮಾಡಯವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಏಳು ಮೀಟರ್ ನೀರು ಸಂಗ್ರಹ ಮಾಡಲು ಹೊರಟಿದ್ದು, ಇದರಿಂದಾಗಿ ಕೃಷಿಕರ ಭೂಮಿ ಜಲಾವೃತಗೊಳ್ಳಲಿದೆ, ಹಾಗಾಗಿ ರೈತರಿಗೆ ಸೂಕ್ತವಾದ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿ ಬಂಟ್ವಾಳ ರೈತ ಸಂಘ ಸರಕಾರಕ್ಕೆ ಮನವಿ ನೀಡಿದೆ.


ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಇತ್ತೀಚೆಗೆ ಮಂಗಳೂರಿಗೆ ಕುಡಿಯುವ ನೀರಿನ ಸಲುವಾಗಿ ನೇತ್ರಾವತಿಯಲ್ಲಿ 6.50 ಮೀಟರ್ ನೀರು ಸಂಗ್ರಹಿಸಲಾಗಿದ್ದು ಈ ಬಾರಿ ನೀರಿನ ಕೊರತೆ ಆಗದು ಎಂಬುದಾಗಿ ತಿಳಿಸಿರುತ್ತಾರೆ. ಆದರೆ ಜಿಲ್ಲಾಡಳಿತ ಈ ಹಿಂದೆ ನೀರು ಸಂಗ್ರಹದ ನಿಮಿತ್ತ ಸಂತ್ರಸ್ತ ರೈತರಿಗೆ 6 ಮೀಟರ್ ಗೆ ಭೂ ಪರಿಹಾರ ಒದಗಿಸಿದ್ದು, ಅದರಲ್ಲಿ ಎಲ್ಲಾ ರೈತರಿಗೆ ಇನ್ನೂ ಕೂಡ ಪರಿಹಾರ ದೊರೆತಿರುವುದಿಲ್ಲ. ಹಾಗಾಗಿ ಪ್ರಸ್ತುತ ಆರುವರೆ ಮೀಟರ್ ಗೆ ನೀರು ಸಂಗ್ರಹಿಸಿದ್ದು ಕೇಂದ್ರ ಜಲ ಆಯೋಗದ ನಿರ್ದೇಶನದಂತೆ ವರತೆ ಪ್ರದೇಶ ಸೇರಿಸಿನೀರು ಸಂಗ್ರಹಕ್ಕೆ1 ಮೀಟರ್ ಹೆಚ್ಚುರಿಯಾಗಿ ಅಂದರೆ ಏಳುವರೆ ಮೀಟರ್ ಗೆ ಏರಿಸಲು ರೈತರ ಸಮಕ್ಷಮ ಸರ್ವೇ ಮಾಡಿ ರೈತರಿಗೆ ನ್ಯಾಯೋಚಿತ ಸೂಕ್ತ ಪರಿಹಾರ ಜಿಲ್ಲಾ ಆಡಳಿತದ ಮೂಲಕ ಒದಗಿಸಿಕೊಡುವಂತೆ ಸಜಿಪ ಮುನ್ನೂರುಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮಣ್ ಮೂಲಕ ಲಿಖಿತಮನವಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ತಾಲೂಕು ರೈತ ಸಂಘ ಅಧ್ಯಕ್ಷ ಎo ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು ರೈತರ ನಿಯೋಗದಲ್ಲಿ ಎನ್ ಕೆ ಇದಿನ ಬ್ಬ. ಅಬ್ದುಲ್ ಖಾದರ್. ಎನ್ ರಾಮ ಹುಸೇನಾರ್. ಬಿ ಅಣ್ಣಪ್ಪಯ್ಯ. ಅಬ್ಬಾಸ್. ಮೊದಲಾದವರು ಜೊತೆಗಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು