Tuesday, January 21, 2025
ಸುದ್ದಿ

ಕೋಮುಪ್ರಚೋದನೆಗೆ ಕಡಿವಾಣ : ಮೂಡುಬಿದಿರೆ ಇನ್ಸ್ಪೆಕ್ಟರ್ ಕಡಕ್ ಸಂದೇಶ – ಕಹಳೆ ನ್ಯೂಸ್

ಮೂಡುಬಿದಿರೆಯಲ್ಲಿ ಶಾಂತಿ ಭಂಗ ಉಂಟು ಮಾಡುವ ಕೋಮುವಾದಿಗಳ ಯತ್ನಕ್ಕೆ ಮೂಡುಬಿದಿರೆ ಇನ್ಸ್ಪೆಕ್ಟರ್ ಕಡಕ್ ಸಂದೇಶ ರವಾನಿಸಿದ್ದಾರೆ. ಈ ಮೂಲಕ ಶಾಂತಿಪ್ರಿಯ ಜನರ ಪಾಲಿಗೆ ಹೀರೋ ಆಗಿ ಕಂಡಿದ್ದಾರೆ ಇನ್ಸ್ಪೆಕ್ಟರ್. ಕಳೆದ ಎರಡ್ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಇನ್ಸ್ಪೆಕ್ಟರ್ ಸಂದೇಶ್ ಅವರು ಸಾರ್ವಜನಿಕ ಸ್ಥಳದಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದ ಹಸಿರು ಧ್ವಜವೊಂದನ್ನು ತೆರವುಗೊಳಿಸುವ ಮತ್ತು ಕ್ರಮಕೈಗೊಳ್ಳದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುವ ವೀಡಿಯೋ ಸಾಕಷ್ಟು ವೈರಲ್ ಆಗಿದೆ.


ಮೂಡುಬಿದಿರೆ ಸಮೀಪದ ಪುಚ್ಚಮೊಗರಿನ ಶಾಂತಿರಾಜ ಕಾಲನಿಯಲ್ಲಿ ಕಟ್ಟೆಯೊಂದರಲ್ಲಿ ಹಸಿರು ಧ್ವಜ ಹಾಕಿ ಹೋಗಿದ್ದರು. ಈ ಮೂಲಕ ಈ ಭಾಗದ ಶಾಂತಿಪ್ರಿಯ ಜನರ ಶಾಂತಿ ಕೆಡಿಸಲೆತ್ನಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದುಕೊಂಡು ಸ್ಥಳಕ್ಕೆ ಇನ್ಸ್ಪೆಕ್ಟರ್ ಸಂದೇಶ್ ಅವರು ತೆರಳಿದ್ದಾರೆ. ಆ ಧ್ವಜವನ್ನು ತೆರವುಗೊಳಿಸಿದ್ದಾರೆ. ಮಾತ್ರವಲ್ಲದೆ ಕ್ರಮ ಕೈಗೊಳ್ಳದ ಪಿ.ಡಿ.ಒ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿಯೂ ಹಾಕಲಾದ ಕೇಸರಿ ಧ್ವಜವನ್ನು ಪುರಸಭಾ ಸಹಕಾರದೊಂದಿಗೆ ಸಾರ್ವಜನಿಕ ದೂರಿನ ಮೇರೆಗೆ ತೆರವುಗೊಳಿಸಿದ್ದಾರೆ. ಈ ಮೂಲಕ ಸಾರ್ವಜನಿಕ ಸೌಹಾರ್ದತೆಗೆ ಮೆಚ್ಚುಗೆಯ ನಡೆ ತೋರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು