Saturday, November 23, 2024
ಸುದ್ದಿ

ಮಂಗಳೂರು ಬೆಂಗಳೂರು ರೈಲು ಸಂಚಾರ ಆರಂಭ – ಕಹಳೆ ನ್ಯೂಸ್

ಮಂಗಳೂರು: ಬೆಂಗಳೂರು -ಮಂಗಳೂರು ನಡುವೆ ಕೊನೆಗೂ ಸಂಚಾರ ಆರಂಭಗೊಂಡಿದೆ. ರಾಜ್ಯದಲ್ಲಿ ಸುರಿದ ಮಹಾಮಳೆಗೆ ಗುಡ್ಡ ಕುಸಿತ ಉಂಟಾಗಿತ್ತು. ಇದರಿಂದ ರೈಲು ಸಂಚಾರ ಕಳೆದೆರಡು ತಿಂಗಳಿನಿಂದ ಸ್ಥಗಿತಗೊಂಡಿತ್ತು. ಆದರೆ ರೈಲ್ವೆ ಇಲಾಖೆ ಸಮರೋಪಾಧಿಯಲ್ಲಿ ದುರಸ್ತಿ ಕಾರ್ಯ ನಡೆಸಿದ ಕಾರಣ ಒಂದುವರೆ ತಿಂಗಳ ಬಳಿಕ ಮತ್ತೆ ರೈಲು ಸಂಚಾರ ಅರಂಭವಾಗಿದೆ.

ಸಕಲೇಶಪುರ ಘಾಟಿ ಮಾರ್ಗದಲ್ಲಿ ಮಂಗಳೂರು-ಬೆಂಗಳೂರು ರೈಲು ಪುನಾರಂಭಗೊಂಡಿದ್ದು, ಕಾರವಾರ- ಕಣ್ಣೂರು ಕೆಎಸ್‌ಆರ್ ಬೆಂಗಳೂರು ರೈಲು ಇಂದು. ಸಂಚಾರ ಆರಂಭಿಸಲಿದೆ. ಇದೇ 12ರಿಂದ ಯಶವಂತಪುರ-ಕಾರವಾರ ಎಕ್ಸ್ ಪ್ರೆಸ್ ರೈಲು ಯಶವಂತಪುರದಿಂದ ಹೊರಡಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೈಸೂರು ವಿಭಾಗ ಭೂಕುಸಿತವಾದ ಕಡೆಗಳಲ್ಲಿ ರೈಲ್ವೆ ಹಳಿಗಳ ದುರಸ್ತಿ ಕಾರ್ಯ ನಡೆಸಿ, ಈ ಮಾರ್ಗದಲ್ಲಿ ಗೂಡ್ಸ್ ರೈಲು ಓಡಿಸಿ ಪರಿಕ್ಷೆ ನಡೆಸಿತ್ತು. ರೈಲು ಸಂಚಾರಕ್ಕೆ ಈ ಮಾರ್ಗ ಸುರಕ್ಷಿತವಾಗಿರುವ ವರದಿ ಹಿನ್ನೆಲೆಯಲ್ಲಿ ಈಗ ಮಂಗಳೂರು- ಬೆಂಗಳೂರು ನಡುವೆ ಪ್ರಯಾಣಿಕರ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು