Sunday, November 24, 2024
ಸುದ್ದಿ

ಅ.29ರಂದು ಜುಮಾದಿಗುಡ್ಡೆ ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದ ಉದ್ಘಾಟನಾ ಕಾರ್ಯಕ್ರಮ – ಕಹಳೆ ನ್ಯೂಸ್

ಕಟೀಲು : ಅ.29ರಂದು ಜುಮಾದಿಗುಡ್ಡೆಯಲ್ಲಿ ಶ್ರೀ ಶಿರ್ಡಿ ಸಾಯಿಬಾಬಾ ಮಂದಿರ ಉದ್ಘಾಟನೆಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸೀತಾರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಂದಿರವನ್ನು ಶ್ರೀಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ವೇ. ಮೂ. ಶ್ರೀ ಲಕ್ಷ್ಮೀ ನಾರಾಯಣ ಅಸ್ರಣ್ಣ ಅವರು ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಧರ್ಮದರ್ಶಿಗಳು ಡಾ. ಹರಿಕೃಷ್ಣ ಪುನರೂರು ಅವರು ಶುಭಾಶೀರ್ವಾದ ನೀಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಮುಖ್ಯ ಅತಿಥಿಗಳಾಗಿ ಯುಗಪುರುಷದ ಪ್ರಧಾನ ಸಂಪಾದಕರಾದ ಶ್ರೀ ಭುವನಾಭಿರಾಮ ಉಡುಪ ಕೊಡೆತ್ತೂರು, ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿ ನಾಗರಾಜ್ ಎಂ.ಎಲ್, ಸಮಾಜ ಸೇವಕರಾದ ಈಶ್ವರ್ ಕಟೀಲು, ಶ್ರೀಕ್ಷೇತ್ರ ಉಲ್ಲಂಜೆಯ ಧರ್ಮದರ್ಶಿಗಳಾದ ಹರೀಶ್ ಪೂಜಾರಿ, ಶ್ರೀಕ್ಷೇತ್ರ ಕಿನ್ನಚ್ಚಿಲ್ ನ ಪ್ರಸಾದ್ ಶೆಟ್ಟಿ, ಕಿನ್ನಿಗೋಳಿ ಮೆಸ್ಕಾಂ ನ ಶಾಖಾಧಿಕಾರಿ ಚಂದ್ರಹಾಸ ಜೆ, ಬಜಪೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಗೋಪಾಲ ಕುಂದರ್, ಅವಿಭಜಿತ ದ.ಕ. ಜಿಲ್ಲಾ ಪದ್ಮಶಾಲಿ ಸಮಾಜದ ಅಧ್ಯಕ್ಷರಾದ ಪುರಂದರ ಶೆಟ್ಟಿಗಾರ್ ಹಾಗೂ ಮತ್ತಿತ್ತರರು ಭಾಗವಹಿಸಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿಠೋಬ ಭಜನಾ ಮಂದಿರ, ಜಾರಂದಾಯ ಯುವಕ ಮಂಡಲ, ಕೊೈಕುಡೆ, ಸುರಗಿರಿ ಯುವಕ ಮಂಡಲದವರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ ಮಹಾಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ತದನಂತರ ಕಿನ್ನಿಗೋಳಿಯ ಜನನಿ ಮೆಲೋಡಿಯಸ್ ನ ಪ್ರಕಾಶ್ ಆಚಾರ್ಯ ತಂಡದವರಿಂದ ಭಕ್ತಿಗೀತೆ ರಸಮಂಜರಿ ಹಾಗೂ ಮೂಡಬಿದ್ರೆ ಯಕ್ಷೋಪಾಸನಂ ಇವರ ಸದಸ್ಯರಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರೀ ವಿರಚಿತ ಭೀಷ್ಮ ಪ್ರತಿಜ್ಞೆ ಎಂಬ ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಳ್ಳಲಿದ್ದು, ಸಂಜೆ ಶ್ರೀ ಕ್ಷೇತ್ರ ಪೊನ್ನಗಿರಿಯ ಯಕ್ಷಲಾಪ ಕಲಾ ತಂಡದ ಬಾಲಕಲಾವಿದರಿಂದ ಗೋವಿಂದ ಗೋಪಾಲ ಯಕ್ಷಗಾನ ಬಯಲಾಟ ನಡೆಯಲಿದೆ.

ಸಂಜೆ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ವೇ. ಮೂ. ಶ್ರೀಹರಿನಾರಾಯಣದಾಸ ಅಸ್ರಣ್ಣರು ಹಾಗೂ ಬೆಂಗಳೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಬೆಂಗಳೂರು ನಿವೃತ್ತ ಲೋಕ ಸೇವಾ ಆಯೋಗದ ಐಎಎಸ್ ಶ್ಯಾಮ್ ಭಟ್, ಎಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೆಸರರಾದ ಸಂತೋಷ್ ಕುಮಾರ್ ಹೆಗ್ಡೆ ಹಾಗೂ ಪಕ್ಷಿಕೆರೆ ಸಾಗರಿಕಾ ಎಂಟರ್ ಪ್ರೈಸಸ್ ನ ಧನಂಜಯ ಶೆಟ್ಟಿಗಾರ್ ಅವರು ಗೌರವ ಸನ್ಮಾನ ಸ್ವೀಕರಿಸಲಿದ್ದಾರೆ.

ಇನ್ನು ಮುಖ್ಯ ಅಭ್ಯಾಗತರಾಗಿ ಶ್ರೀಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅಡಳಿತ ಮಂಡಳಿಯ ಅಧ್ಯಕ್ಷರಾದ ಸನತ್ ಕುಮಾರ್ ಶೆಟ್ಟಿ, ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ಮಿಥನ್ ರೈ, ಮೂಡಬಿದ್ರೆ ಧನಲಕ್ಷ್ಮೀ ಕ್ಯಾಶೋ ಇಂಡಸ್ಟ್ರೀಸ್ ನ ಮಾಲಕರಾದ ಶ್ರೀಪತಿ ಭಟ್, ಮುಲ್ಕಿ ಬಂಟರ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ಧಾರ್ಮಿಕ ಚಿಂತಕರಾದ ಸೌಂದರ್ಯ ರಮೇಶ್, ಭಾಗವತರು ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಹಾಗೂ ಮತ್ತಿತ್ತರ ಗಣ್ಯಾಥಿ ಗಣ್ಯರು ಉಪಸ್ಥಿತರಿರಲಿದ್ದಾರೆ.