Tuesday, January 21, 2025
ಸುದ್ದಿ

ಶ್ರೀರಾಮ ಪದವಿ ಕಾಲೇಜಿನಲ್ಲಿ ಬಿಕಾಂ ವಿದ್ ಲಾಜಿಸ್ಟಿಕ್ಸ್ ಆಂಡ್ ಸಪ್ಲೈಚೈನ್ ಮ್ಯಾನೇಜ್ಮೆಂಟ್ ಕೋರ್ಸ್ನ ಉದ್ಘಾಟನಾ ಕಾರ್ಯಕ್ರಮ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಪದವಿ ಕಾಲೇಜಿನಲ್ಲಿ ಆಂತರಿಕಗುಣಮಟ್ಟ ಭರವಸಾ ಕೋಶ ಹಾಗೂ ವಾಣಿಜ್ಯ ಸಂಘದ ಸಹಯೋಗದಲ್ಲಿ ಹೊಸದಾಗಿ ಆರಂಭಗೊoಡ ಬಿಕಾಂ ವಿದ್ ಲಾಜಿಸ್ಟಿಕ್ಸ್ ಆಂಡ್ ಸಪ್ಲೈಚೈನ್ ಮ್ಯಾನೇಜ್ಮೆಂಟ್ ಕೋರ್ಸ್ನ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.

ಜಾಹೀರಾತು
ಜಾಹೀರಾತು
ಜಾಹೀರಾತು


ಸರಕಾರಿ ಪ್ರಥಮದರ್ಜೆ ಕಾಲೇಜು ಕಾಪು ಇಲ್ಲಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ರೋಶ್ನಿಯಶವಂತ್ ಉದ್ಘಾಟಿಸಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪದವಿಯ ಜೊತೆಗೆ ಇನ್ನಿತರ ಕೌಶಲ್ಯಾಧಾರಿತ ಕೋರ್ಸುಗಳ ಅಗತ್ಯತೆಯನ್ನು ತಿಳಿಸಿದರು. ಲಾಜಿಸ್ಟಿಕ್ಸ್ ಆಂಡ್ ಸಪ್ಲೈಚೈನ್ ಮ್ಯಾನೇಜ್ಮೆಂಟ್‌ಕೋರ್ಸ್ ಮಾಡುವಉದ್ದೇಶ ಹಾಗೂ ಉದ್ಯೋಗಾವಕಾಶದ ಬಗ್ಗೆ ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ.ಪ್ರಭಾಕರ್ ಭಟ್‌ಕಲ್ಲಡ್ಕ ವಹಿಸಿದ್ದರು. ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಸುಕನ್ಯಾ ಮಾತಾಜಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಾಣಿಜ್ಯ ಸಂಘದ ಸಹಕಾರ್ಯದರ್ಶಿ ಕುಮಾರಿ ಪ್ರತೀಕ್ಷಾ ಕೆ ತೃತೀಯ ಬಿಕಾಂ ನಿರೂಪಿಸಿ, ಕುಮಾರಿ ನಿಶ್ವಿತ ತೃತೀಯ ಬಿಕಾಂ ಸ್ವಾಗತಿಸಿ, ವಿಕಾಸ್‌ತೃತೀಯ ಬಿಕಾಂ ಧನ್ಯವಾದ ತಿಳಿಸಿದರು