ರಾಷ್ಟçದಾದ್ಯಂತ ಅಕ್ಟೋಬರ್ 2 ರಿಂದ 8ರ ತನಕ ಆಚರಿಸಲ್ಪಡುವ ರಾಷ್ಟ್ರೀಯ ವನ್ಯಜೀವಿ ಸಪ್ತಾಹದ ಅಂಗವಾಗಿ ಇಂದು ನಡೆದ ರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಸಪ್ತಾಹದ ಉದ್ಘಾಟನಾ ಸಮಾರಂಭ ನಡೆಯಿತು.
ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ದೀಪ ಬೆಳಗಿಸಿ ಉದ್ಘಾಟಿಸಿ, “ವನ್ಯಜೀವಿ ಸಂರಕ್ಷಣೆ ಬಗ್ಗೆ ಮೈಸೂರು ಸಂಸ್ಥಾನದಜಯ ಚಾಮರಾಜೇಂದ್ರ ಒಡೆಯರ್, ಕೈಗೊಂಡಕಾರ್ಯ ನಿಜಕ್ಕೂ ಸ್ಮರಣೀಯ.ವೈವಿದ್ಯಮಯ ವನ್ಯಜೀವಿಗಳು ಹಾಗೂ ಅವುಗಳ ಆವಾಸಸ್ಥಾನಗಳಿಗೆ, ಅಷ್ಟೇ ತೊಂದರೆಗಳು ಹಾಗೂ ಒತ್ತಡಗಳಿವೆ. ಕಾಡಿನ ನಾಶದಿಂದಾಗಿ, ವನ್ಯಜೀವಿಗಳ ಆವಾಸಸ್ಥಾನ ವಿನಾಶದಅಂಚಿನಲ್ಲಿದೆ. ಅನೇಕ ಪ್ರಾಣಿ ವೈವಿಧ್ಯಗಳನ್ನು ಹಾಗೂ ಅಳಿವಿನಂಚಿನಲ್ಲಿರುವ ಜೀವಿಗಳನ್ನು ಸಂರಕ್ಷಿಸಲು, ಇಂತಹ ಕಾರ್ಯಕ್ರಮಗಳುಸಹಕಾರಿಯಾಗಿದೆ.” ಎಂದರು.
ಈ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರಕಲೆ, ಕವನ ರಚನೆ, ಚರ್ಚಾ ಸ್ಪರ್ಧೆಯನ್ನು ನಡೆಸಲಾಯಿತು.ಸ್ಪರ್ಧೆಯನ್ನು ಮಾಲತಿ, ಪ್ರೀತಾ ನಿರ್ವಹಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಪಿ.ಕೆ ಪದ್ಮನಾಭ, ಅಧ್ಯಾಪಕರರಾದ ಸುಮಂತ್ ಆಳ್ವ ಎಂ, ವೇದಾವತಿ, ರಾಜೇಶ್ವರಿ ಉಪಸ್ಥಿತರಿದ್ದರು.