ಚಿಕ್ಕಮಗಳೂರು: ಮೂರು ತಿಂಗಳ ಹಿಂದೆ ಘಟಿಸಿದ ಬಿಜೆಪಿ ಮುಖಂಡ ಅನ್ವರ್‌ನ ಹತ್ಯೆಯ ಆರೋಪಿಗಳನ್ನು ಬಂದಿಸುವಂತೆ ಚಿಕ್ಕಮಗಳೂರಿನ ತಾಲೂಕು ಕಚೇರಿಯಿಂದ ಅಜಾದ್ ಪಾರ್ಕ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಬಿಜೆಪಿ ಕಾರ್ಯಕರ್ತರು ನಡೆಸಿದ ಈ ಮೆರವಣಿಗೆಯಲ್ಲಿ, ಮೂರು ತಿಂಗಳು ಕಳೆದ್ರು ಆರೋಪಿಗಳ ಬಂಧನವಾಗಿಲ್ಲ ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು. ಕಪ್ಪು ಪಟ್ಟಿಯನ್ನು ಧರಿಸಿ ಮೌನವಾಗಿಯೇ ಪ್ರತಿಭಟನೆ ನಡೆಸಿದ್ರು.
ಈ ವೇಳೆ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹಾಗೂ ಅನ್ವರ್ ಕುಟುಂಬಸ್ಥರು ಭಾಗಿಯಾಗಿದ್ದರು. ಇದೇ ವೇಳೆ ಮಾತನಾಡಿದ ಸಿ ಟಿ ರವಿ ಅನ್ವರ್ ಹತ್ಯೆಯಾಗಿ 112 ದಿನ ಕಳೆದಿದೆ. ರಾಜಕೀಯ ಒತ್ತಡದಿಂದ ಆರೋಪಿಗಳನ್ನ ಬಂಧಿಸೋಕೆ ಆಗ್ತಿಲ್ವ ಅನ್ನೋ ಅನುಮಾನ ನನಗೆ ಮೂಡುತ್ತಿದ್ದು ಒಂದು ತಿಂಗಳಲ್ಲಿ ಆರೋಪಿಗಳನ್ನ ಬಂಧಿಸಿ ಪೊಲೀಸರ ಮೇಲೆ ಇರುವ ನಂಬಿಕೆ ಉಳಿಸಿಕೊಳ್ಳಿ ಎಂದು ಎಚ್ಚರಿಕೆ ಸೂಚನೆಯನ್ನು ನೀಡಿದ್ರು.