Thursday, January 23, 2025
ಸುದ್ದಿ

ಕವಾಡಿಗರಹಟ್ಟಿ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ – ಕಹಳೆ ನ್ಯೂಸ್

ಚಿತ್ರದುರ್ಗ : ಕವಾಡಿಗರಹಟ್ಟಿ ಬಡಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.


ಇನ್ನೂ ಇತ್ತೀಚಿಗಷ್ಟೆ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಕುಡಿದು 6 ಮಂದಿ ಮೃತಪಟ್ಟಿದ್ದು 200ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ಧಾಖಲಾಗಿದ್ದು ಅವಾಂತರ ಸೃಷ್ಟಿಯಾಗಿದ್ದ ಘಟನೆ ನಡೆದಿದ್ದು ಈ ಘಟನೆಗೆ ತಿಂಗಳುಗಳೆ ಕಳೆದಿದ್ದು ಹಲವು ಸಚಿವರು ಶಾಸಕರುಗಳು ಹಾಗೂ ಮಠಾದೀಶರು ಬೇಟಿ ಕೊಟ್ಟಿದ್ದು ಸಿಎಂ ಬೇಟಿಗೆ ಕೂಗು ಎದ್ದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅದರಂತೆ ಇಂದು ಹಿರಿಯೂರು ಕಾರ್ಯಕ್ರಮ ನಿಮಿತ್ತ ಚಿತ್ರದುರ್ಗಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕವಾಡಿಗರಹಟ್ಟಿಗೆ ಬೇಟಿ ಕೊಟ್ಟು ಕಲುಷಿತ ನೀರು ಸೇವನೆಯಿಂದ ಮೃತಪಟ್ಟವರ ಕುಟುಂಬಸ್ತರನ್ನ ಬೇಟಿ ಮಾಡಿ ಸಾಂತ್ವಾನ ಹೇಳಿದ್ದು ನಂತರ ಮಾತನಾಡಿದ ಅವರು ಆಗಸ್ಟ್ 1 ರಂದು ಕಲುಷಿತ ನೀರು ಕುಡಿದು 241 ಜನ ಅಸ್ವಸ್ಥಗೊಂಡು ಎಲ್ಲರು ಬಡತನದಲ್ಲಿದ್ದವರೆ ಹೆಚ್ಚಿದ್ದು ಪ್ರತಿಯೊಬ್ಬರಿಗೆ ಒಳ್ಳೆಯ ಕುಡಿಯುವ ನೀರು ಕೊಡುವ ಜವಾಬ್ದಾರಿ ಇದ್ದು ವಿಷಯ ತಿಳಿದ ತಕ್ಷಣ ಅಧಿಕಾರಿಗಳಿಗೆ ಶಾಸಕರಿಗೆ ಪೋನ್ ಮಾಡಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸೂಚಿಸಿದ್ದು ಆದರೂ ಕೂಡ 6 ಜನ ಮೃತಪಟ್ಟಿದ್ದಾರೆ. ಸರಿಯಾದ ರೀತಿ ಕುಡಿಯುವ ನೀರಿನ ಸಮಸ್ಯೆ ಇದ್ದು ಮುಂಚಿತವಾಗಿ ಉತ್ತಮ ನೀರು ಕೊಟ್ಟಿದ್ದರೆ 6 ಜನರ ಪ್ರಾಣ ಉಳಿಯುತ್ತಿತ್ತು. ಕೂಡಲೇ ಸರ್ಕಾದಿಂದ ಪರಿಹಾರ ಸಹ ಘೋಷಣೆ ಮಾಡಿದ್ದು ಹತ್ತು ಲಕ್ಷ ಪರಿಹಾರ ಸಹ ಕೊಟ್ಟಿದ್ದು ಮುಂದಿನ ಜೀವನ ನಿರ್ವಹಣೆಗೆ ಸಹಕಾರಿ ಆಗಲಿದೆ. ಮುಂದಿನ ದಿನಗಳಲ್ಲಿ ಯಾವಿದೇ ಕಾರಣಕ್ಕು ಕಲುಷಿತ ನೀರು ಕೊಡದಂತೆ ಸೂಚನೆ ಕೊಟ್ಟಿದ್ದು ಕಲುಷಿತ ನೀರು ಕೊಟ್ಟರೆ ಅಂತಹ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮಕ್ಕೆ ಮುಂದಾಗುವುದಾಗಿ ಸಿ ಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಶಾಸಕರುಗಳಾದ ಕೆ ಸಿ ವೀರೇಂದ್ರ ಪಪ್ಪಿ, ಟಿ ರಘುಮೂರ್ತಿ, ಗೋವಿಂದಪ್ಪ, ಎನ್ ವೈ ಗೋಪಾಲಕೃಷ್ಣ, ಮಾಜಿ ಸಚಿವ ಹೆಚ್ ಆಂಜನೇಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ ಎನ್ ಚಂದ್ರಪ್ಪ , ಜಿಲ್ಲಾಧಿಕಾರಿ ದಿವ್ಯ ಪ್ರಭು ಸೇರಿದಂತೆ ಅನೇಕರು ಹಾಜರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು