Wednesday, January 22, 2025
ಕ್ರೈಮ್ದಕ್ಷಿಣ ಕನ್ನಡರಾಜ್ಯಸುದ್ದಿಸುಳ್ಯ

KVG ಶಿಕ್ಷಣ ಸಂಸ್ಥೆಗಳ ರಾಮಕೃಷ್ಣ ಕೊಲೆ ಪ್ರಕರಣ : ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿ ಡಾ| ರೇಣುಕಾ ಪ್ರಸಾದ್‌ ಆಸ್ಪತ್ರೆಗೆ – ಕಹಳೆ ನ್ಯೂಸ್

ಮಂಗಳೂರು: ಕೆವಿಜಿ ಶಿಕ್ಷಣ ಸಂಸ್ಥೆಗಳ ಸಮೂಹದ ಕೆವಿಜಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲರಾಗಿದ್ದ ಎ.ಎಸ್‌. ರಾಮಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿ ಡಾ| ರೇಣುಕಾ ಪ್ರಸಾದ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರೇಣುಕಾ ಪ್ರಸಾದ್‌ಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ಕಲ್ಪಿಸಲು ಆತನ ಪರ ವಕೀಲರು ಮಾಡಿದ ಮನವಿಯನ್ನು ಹೈಕೋರ್ಟ್‌ ಪರಿಗಣಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

 

ಪ್ರಕರಣದಲ್ಲಿ ರೇಣುಕಾ ಪ್ರಸಾದ್‌ ಅಲ್ಲದೆ ಮನೋಜ್‌ ರೈ, ಎಚ್‌.ಆರ್‌. ನಾಗೇಶ್‌, ವಾಮನ ಪೂಜಾರಿ ಮತ್ತು ಶಂಕರನಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ರೇಣುಕಾ ಪ್ರಸಾದ್‌ ಹೊರತುಪಡಿಸಿ ಇತರ ಅಪರಾಧಿಗಳು ಮಂಗಳೂರಿನ ಸಬ್‌ಜೈಲಿನಲ್ಲಿದ್ದಾರೆ. ಇನೋರ್ವ ಪ್ರಮುಖ ಆರೋಪಿ ಶರಣ್‌ ಪೂಜಾರಿ ಆಲಿಯಾಸ್‌ ಆಕಾಶಭವನ ಶರಣ್‌ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ.

ಎಚ್‌.ಯು. ನಾಗೇಶ್‌ ಕುಮಾರ್‌ ಅವರನ್ನು ಖುಲಾಸೆಗೊಳಿಸಲಾಗಿತ್ತು. ಆಸ್ತಿ ಮತ್ತು ಶೈಕ್ಷಣಿಕ ಸಂಸ್ಥೆಗಳ ಹೊಣೆಗಾರಿಕೆ ವಿಭಜನೆ ವಿಚಾರದ ದ್ವೇಷದಿಂದ 2011ರ ಎ. 28ರಂದು ರಾಮಕೃಷ್ಣ ಅವರ ಕೊಲೆ ನಡೆದಿತ್ತು.