ಬೆಳ್ತಂಗಡಿ: ಮೂಡಬಿದ್ರೆಯ ಶಿರ್ತಾಡಿ ಗ್ರಾಮದ ಲಕ್ಷ್ಮಣ ಪೂಜಾರಿ (62ವ) ಎಂಬವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಆರೋಪದಡಿ ಮಹಿಳೆ ಸಹಿತ ಇಬ್ಬರ ವಿರುದ್ಧ ವೇಣೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.6ರಂದು ಸಂಜೆ ಶಿರ್ತಾಡಿಯ ಲಕ್ಷ್ಮಣ ಪೂಜಾರಿಯವರು ತನ್ನ ಹೆಂಡತಿಯ ತವರು ಮನೆಯಾದ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ನೆಕ್ಕರೆ ಎಂಬಲ್ಲಿ ತನ್ನ ಪ್ರಾಯಸ್ಥ ಮಾವನೊಂದಿಗೆ ಮನೆಯಂಗಳದಲ್ಲಿದ್ದಾಗ ಉಮೇಶ್ ಎಂಬಾತ ಮರದ ದೊಣ್ಣೆ ಹಿಡಿದುಕೊಂಡು ಜ್ಯೋತಿ ಎಂಬವರೊಂದಿಗೆ ಬಂದು ಅವ್ಯಾಚವಾಗಿ ಬೈದು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಹಲ್ಲೆ ನಡೆಸಿದ್ದಾರೆ.
ಜ್ಯೋತಿ ಅವರು ಲಕ್ಷ್ಮಣ ಪೂಜಾರಿಯವರಿಗೆ ಕೈಯಿಂದ ಹಲ್ಲೆ ನಡೆಸಿದ್ದು, ಈ ವೇಳೆ ಲಕ್ಷ್ಮಣ ಪೂಜಾರಿಯವರ ಹೆಂಡತಿ ಮತ್ತು ಮಕ್ಕಳು ಹಲ್ಲೆ ನಡೆಸದಂತೆ ತಡೆದಾಗ ಉಮೇಶ್ ಅವರು ಲಕ್ಷ್ಮಣ ಪೂಜಾರಿಯವರಿಗೆ ಜೀವ ಬೆದರಿಕೆ ಹಾಕಿ ತೆರಳಿದ್ದಾರೆ
ಹಲ್ಲೆಯಿಂದ ಗಾಯಗೊಂಡ ಲಕ್ಷ್ಮಣ ಪೂಜಾರಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ವೇಣೂರು ಪೆÇಲೀಸ್ ಠಾಣೆಯಲ್ಲಿ 64/2023 ಕಲಂ 504, 323,307 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.