Thursday, January 23, 2025
ಸುದ್ದಿ

ಡಾ.ರೇಣುಕಾ ಪ್ರಸಾದ್ ಮುಂದಾಳತ್ವದ ಸಂಸ್ಧೆಯ ಮೇಲೆ ಸಹೋದರರ ಹಾಗೂ ಕುಟುಂಬಸ್ಧರ ಕಣ್ಣು..!? : ಡಾ.ರೇಣುಕಾ ಪ್ರಸಾದ್ ಪತ್ನಿ ಹೇಳಿದ್ದೇನು..? – ಕಹಳೆ ನ್ಯೂಸ್

ಸುಳ್ಯದಲ್ಲಿ ಸಂಚಲನ ಮೂಡಿಸಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಡಾ.ರೇಣುಕಾ ಪ್ರಸಾದ್ ಅವರ ಆಡಳಿತದಲ್ಲಿರುವ ಸಂಸ್ಧೆಗಳು, ಇದೀಗ ಕೈ ತಪ್ಪಲಿದೆಯಾ..? ಡಾ.ರೇಣುಕಾ ಪ್ರಸಾದ್ ಅವರ ಕುಟುಂಬಸ್ಧರು ಇವೆಲ್ಲವನ್ನ ತಮ್ಮ ಸುಪರ್ದಿಗೆ ಪಡೆದುಕೊಳ್ಳಲು ಮುಂದಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

12 ವರ್ಷದ ಹಿಂದೆ ನಡೆದಿದ್ದ, ದಕ್ಷಿಣ ಕನ್ನಡ ಜಿಲ್ಲೆಯ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಎ ಎಸ್ ರಾಮಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಡಾ.ರೇಣುಕಾ ಪ್ರಸಾದ್ ಸೇರಿದಂತೆ 6 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕರ್ನಾಟಕ ಹೈಕೋರ್ಟ್ ಗುರುವಾರ ಆದೇಶಿಸಿದೆ. ಡಾ.ರೇಣುಕಾ ಪ್ರಸಾದ್ ಪೊಲೀಸ್ ಕಸ್ಟಡಿಯಲ್ಲಿರುವ ಈ ಸಂದರ್ಭದಲ್ಲಿ, ಇವರ ಸಹೋದರ ಹಾಗೂ ಕುಟುಂಬಸ್ಧರು ಪಾಲಿಟೆಕ್ನಿಕ್ ಕಾಲೇಜು ಹಾಗೂ ಡಾ.ರೇಣುಕಾ ಪ್ರಸಾದ್ ಆಡಳಿತದಲ್ಲಿರುವ ಸಂಸ್ಧೆಗಳನ್ನ ತಮಗೆ ನೀಡುವಂತೆ, ತಮ್ಮ ಸುಪರ್ದಿಗೆ ಪಡೆದುಕೊಳ್ಳಲು ಮುಂದಾಗಿದ್ದಾರೆ ಅನ್ನೋದು ತಿಳಿದು ಬಂದಿದೆ.

ಆದ್ರೆ ಡಾ.ರೇಣುಕಾ ಪ್ರಸಾದ್ ಅವರ ಪತ್ನಿ  ಜ್ಯೋತಿ ಪ್ರಸಾದ್   ಇಂದು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈ ವಿಚಾರದ ಬಗ್ಗೆ ಸ್ಪಷ್ಟನೆಯನ್ನ ನೀಡಿದ್ದಾರೆ. ನಾನು ಸಂಸ್ಧೆಯಲ್ಲಿ ಇಲ್ಲದ ಸಂದರ್ಭ ಪ್ರಾಂಶುಪಾಲರ ಕಛೇರಿಗೆ ಬಂದು ಸಂಸ್ಧೆಯ ಡಾಕ್ಯುಮೆಂಟ್ ಕೇಳಿದ್ದಾರೆ. ಆದ್ರೆ ಇಲ್ಲಿವರೆಗೂ ನಮ್ಮ ಮುಂದಾಳತ್ವದಲ್ಲಿ ನಡೆಯುತ್ತಿದ್ದ ಯಾವುದೇ ಸಂಸ್ಧೆಯನ್ನು ನಾವು ಬಿಟ್ಟು ಕೊಡೋದಿಲ್ಲ. ನಮ್ಮ ನೋವಿನ ಸಂದರ್ಭದಲ್ಲಿ ಸಹೋದರರು ಹಾಗೂ ಕುಟುಂಬಸ್ಧರು ಇಂತಹ ವರ್ತನೆ ತೋರಿಸುತ್ತಿರುವುದು ಸಮಂಜಸವಲ್ಲ.. ನನ್ನ ಪತಿ ನಡೆಸಿಕೊಂಡು ಬರುತ್ತಿದ್ದ ಕೆಲಸ ಕಾರ್ಯಗಳನ್ನ ಮುಂದೆ ನಿಂತು ನಾನು ನೋಡಿಕೊಂಡು ಹೋಗುತ್ತೇನೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ನಮ್ಮ ಮಾತನ್ನ ಕೇಳದೆಯೋ ಅವರು ಮುಂದುವರೆದರೆ ನಾವು ನಮ್ಮ ವಕೀಲರ ಮೂಲಕ ಇದಕ್ಕೆ ಉತ್ತರಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.