Friday, January 24, 2025
ಅಂತಾರಾಷ್ಟ್ರೀಯಯಕ್ಷಗಾನ / ಕಲೆಸುದ್ದಿ

ದುಬಾಯಿಯಲ್ಲಿ ತ್ರಿ-ರಂಗ ಮೋಹನ ಸುವರ್ಣ ಸಂಭ್ರಮ ; ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಭಾಗವತಿಕೆಯಲ್ಲಿ ಹೊಸ ಪರಿಕಲ್ಪನೆಯೊಂದಿಗೆ ಯಕ್ಷ ಸಂಭ್ರಮ ; ಪಟ್ಲ, ನಿಹಾರಿಕಾ ಭಟ್, ವಿಂದ್ಯಾ ಆಚಾರ್ಯ ತಂಡಕ್ಕೆ ವಿಮಾನ ನಿಲ್ದಾಣದಲ್ಲಿ ಸ್ವಾಗತ – ಕಹಳೆ ನ್ಯೂಸ್

ದುಬಾಯಿ : ತ್ರಿರಂಗ ಸಂಗಮ ಮುಂಬಯಿ ಸಂಯೋಜನೆಯಲ್ಲಿ ದುಬಾಯಿ ಎಮಿರೇಟ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ಥಿಯೇಟರ್ ನಲ್ಲಿ ಕರ್ನೂರು ಮೋಹನ್ ರೈ ಅವರ ಸಂಘಟನೆಯ ಗಲ್ಫ್ ರಾಷ್ಟ್ರದ 50ನೇ ಕಾರ್ಯಕ್ರಮ ತ್ರಿ-ರಂಗ ಮೋಹನ ಸುವರ್ಣ ಸಂಭ್ರಮ ಯಕ್ಷಗಾನ ನೃತ್ಯ ಹಾಸ್ಯ ಗಾಯನಗಳ ಅಪೂರ್ವ ಸಮ್ಮಿಲನ ಮನೋರಂಜನೆಯ ರಸದೌತಣ ಅ.08 ರಂದು ನಡೆಯಲಿದೆ.

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಭಾಗವತಿಕೆಯಲ್ಲಿ ಹೊಸ ಪರಿಕಲ್ಪನೆಯೊಂದಿಗೆ ಯಕ್ಷ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ಚೆಂಡೆ ಮದ್ದಳೆ ವಿಶೇಷ ಪಾತ್ರದಲ್ಲಿ ಕು. ನಿಹಾರಿಕ ಭಟ್, ಕು. ವಿಂದ್ಯಾ ಆಚಾರ್ಯ ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಮಧ್ಯಾಹ್ನ ಗೀತಾ ಸಾಹಿತ್ಯ ಖ್ಯಾತಿಯ ಕಲ್ಲಡ್ಕ ವಿಠಲ ನಾಯಕ್ ರಿಂದ ಹಾಸ್ಯ ಸಂಭ್ರಮ ತುಳುವಿನಲ್ಲಿ ನಡೆಯಲಿದ್ದು, ತದನಂತರ ಯುಎಇ ಯ ಪ್ರಸಿದ್ಧ ಗಾಯಕರಿಂದ ತುಳು ಕನ್ನಡ ಹಿಂದಿ ಗೀತೆಗಳ ಗಾನ ಸಂಭ್ರಮ ಹಾಗೂ ಯುಎಇಯ ವಿವಿಧ ಸಂಘ ಸಂಸ್ಥೆಗಳ ಸದಸ್ಯರಿಂದ ನಾಟ್ಯ ಸಂಭ್ರಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಕಾರ್ಯಕ್ರಮದ ಟಿಕೇಟ್‍ಗಾಗಿ ಸಂಪರ್ಕಿಸಿ ಜಯಂತ್ ಶೆಟ್ಟಿ : 0506590986, ವಿಜಯ್ ಕುಮಾರ್ ಶೆಟ್ಟಿ : 055 2032097