Friday, January 24, 2025
ಸುದ್ದಿ

ಕಲ್ಲಡ್ಕ ; ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಭಜನಾ ಕಾರ್ಯಕ್ರಮ ಹಾಗೂ ಸೆಪ್ಟೆಂಬರ್‌ತಿoಗಳಲ್ಲಿ ಹುಟ್ಟಿದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆ – ಕಹಳೆ ನ್ಯೂಸ್

ಕಲ್ಲಡ್ಕ, ; ಇಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಭಜನಾ ಕಾರ್ಯಕ್ರಮ ಹಾಗೂ ಸೆಪ್ಟೆಂಬರ್‌ತಿoಗಳಲ್ಲಿ ಹುಟ್ಟಿದ ಮಕ್ಕಳ ಹುಟ್ಟುಹಬ್ಬವನ್ನು ಸಾಮೂಹಿಕ ಆಚರಿಸಲಾಯಿತು.


2023ನೇ ಸಾಲಿನ ಮಾನ್ಯಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ, ದಕ್ಷಿಣಕನ್ನಡಜಿಲ್ಲೆಯ, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿಯಾದ ಭರತ್‌ಕುಮಾರ್ ಮಾತನಾಡುತ್ತಾ, “ಕತ್ತರಿಸಿ ಆಚರಿಸುವ ಹುಟ್ಟುಹಬ್ಬಕ್ಕಿಂತ ಸಿಹಿ ನೀಡಿ ದೀಪ ಬೆಳಗಿಸಿ ಆಚರಿಸುವ ಹುಟ್ಟುಹಬ್ಬವು ಅರ್ಥಪೂರ್ಣವಾಗಿದೆ.ನಮ್ಮ ಬೇರುಗಳನ್ನು ಕಳೆದುಕೊಳ್ಳದೆ, ನಮ್ಮದೆಆಚಾರ ಪರಂಪರೆಗಳನ್ನು ಅನುಸರಿಸುತ್ತಿದ್ದೀರಿ.ನಮ್ಮ ಸಂಸ್ಕೃತಿಯ ಅಸ್ತಿತ್ವವನ್ನು ನಾವು ಉಳಿಸಿಕೊಳ್ಳಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೇರೆಯವರಲ್ಲಿ ಏನಿದೆ ಎನ್ನುವುದಕ್ಕಿಂತ,ನಿಮ್ಮೊಳಗಿನ ಅಂತಸತ್ವವನ್ನು ಅರಿಯಿರಿ.ಅದರಂತೆಯಾವುದೇ ಕೀಳರಿಮೆವಿಲ್ಲದೆ ಮುನ್ನಡೆಯಿರಿ.ಅದೇ ನಿಮ್ಮನ್ನುಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಈ ವಿದ್ಯಾಸಂಸ್ಥೆಯಲ್ಲಿ ಕಲಿಸುವ ಸಂಸ್ಕಾರಯುತ ಶಿಕ್ಷಣವನ್ನು ನಿಮ್ಮಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಬರುವ ಅವಕಾಶಗಳಲ್ಲಿ ಉತ್ತಮವಾದುದನ್ನುಆಯ್ಕೆ ಮಾಡಿದೇಶಕ್ಕೆ, ಶಾಲೆಗೆ ಕೀರ್ತಿತನ್ನಿ”ಎಂದುತಮ್ಮ ಬಾಲ್ಯದ ನೆನಪನ್ನು ಮೆಲುಕು ಹಾಕುತ್ತ, ಹುಟ್ಟುಹಬ್ಬ ಹಾಗೂ ಭಜನಾಕಾರ್ಯಕ್ರಮದಮಹತ್ವವನ್ನು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲಿಗೆ ತರಗತಿವಾರು ಭಜನಾಕಾರ್ಯಕ್ರಮ ನಡೆಯಿತು.ನಂತರ ಹುಟ್ಟುಹಬ್ಬಆಚರಿಸುವ ಮಕ್ಕಳಿಗೆ ಅಧ್ಯಾಪಕ ವೃಂದದವರುಆರತಿ, ಅಕ್ಷತೆ, ತಿಲಕಧಾರಣೆ ಮಾಡಿ, ಸಿಹಿ ನೀಡಿದರು.ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದಲ್ಲಿ ನಡೆದಕ್ಷೇತ್ರಿಯಜ್ಞಾನ ವಿಜ್ಞಾನ ಮೇಳದಸ್ಪರ್ಧೆಯಲ್ಲಿವಿಜೇತರಾಗಿರಾಷ್ಟçಮಟ್ಟಕ್ಕೆಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಹಾಗೂ ವನ್ಯಜೀವಿ ಸಂರಕ್ಷಣಾ ಸಪ್ತಾಹದ ಅಂಗವಾಗಿ ನಡೆದಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ನಂತರ“ ಪ್ರಗ್ಯಾನ್ ” ಎಂಬ ವಿಜ್ಞಾನ ಸಂಘದ ವಿದ್ಯಾರ್ಥಿಗಳಿಗೆ ಔಷಧೀಯ ಗಿಡಗಳನ್ನು ನೀಡಲಾಯಿತು.

ನಂತರಶ್ರೀರಾಮ ವಿದ್ಯಾಕೇಂದ್ರದ ಹಿರಿಯ ವಿದ್ಯಾರ್ಥಿ, 2023ನೇ ಸಾಲಿನ ಮಾನ್ಯಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ, ದಕ್ಷಿಣಕನ್ನಡಜಿಲ್ಲೆಯ, ಜಿಲ್ಲಾಅಗ್ನಿಶಾಮಕಅಧಿಕಾರಿಯಾದ ಭರತ್‌ಕುಮಾರ್‌ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿಮಾಜಿಜಿಲ್ಲಾ ಪಂಚಾಯತ್ ಸದಸ್ಯಚೆನ್ನಪ್ಪಆರ್‌ಕೋಟ್ಯಾನ್, ತಾಲೂಕು ಪಂಚಾಯತ್‌ನ ಮಾಜಿಉಪಾಧ್ಯಕ್ಷ ದಿನೇಶ್‌ಅಮ್ಟೂರು, ಪುತ್ತೂರುತತ್ವ ಸ್ಕೂಲ್‌ಆಫ್‌ಆರ್ಟ್ಸ್ಇದರ ನಿರ್ದೇಶಕಟೀಲಾಕ್ಷ, ಕರಾಟೆತರಬೇತುದಾರರಾದರಾಜೇಶ್, ಯಕ್ಷಗಾನತರಬೇತುದಾರರಾದಗಣೇಶ್ ಮಾಣಿಲ, ವೇಣುತರಬೇತುದಾರರಾದಉಮೇಶ್‌ಕುಲಕರ್ಣಿ ಹಾಗೂ ಮುಖ್ಯೋಪಾಧ್ಯಾಯರಾದರವಿರಾಜ್‌ಕಣಂತೂರು ಉಪಸ್ಥಿತರಿದ್ದರು.