Saturday, January 25, 2025
ಸುದ್ದಿ

ಕಡಬದಲ್ಲಿ ಶೌರ್ಯ ಜಾಗರಣ ರಥಯಾತ್ರೆ : ಹಾರುತ್ತ ಬಂದ ಆಂಜನೇಯನಿಂದ ಬಜರಂಗಿಗೆ ಮಾಲಾರ್ಪಣೆ – ಕಹಳೆ ನ್ಯೂಸ್

ಕಡಬ : ಬಜರಂಗದಳ ಶೌರ್ಯ ಜಾಗರಣ ರಥಯಾತ್ರೆಯೂ ಸುಮಾರು 11 ದಿನಗಳ ತನ್ನ ಸುಧೀರ್ಘ ಪ್ರಯಾಣ ಮುಗಿಸಿ ತುಳುನಾಡಿಗೆ ತಲುಪಿರುವ ಜಾಗರಣ ರಥಯಾತ್ರೆಯನ್ನ ಕಡಬದ ಜನ ಅತ್ಯಂತ ವಿಶೇಷತೆಯಿಂದ ಸ್ವಾಗತಿಸಿದರು.

ರಥಯಾತ್ರೆ ಕಡಬದ ಪೇಟೆಗೆ ಆಗಮನವಾಗುತ್ತಿದ್ದಂತೆ ನೂರಾರು ಕಾರ್ಯಕರ್ತರು ಕೇಸರಿ ಪತಾಕೆ ಹಿಡಿದು, ಪುಷ್ಪಾರ್ಚನೆ ಮಾಡಿ ರಥವನ್ನ ಬರಮಾಡಿಕೊಂಡರು. ರಥಯಾತ್ರೆಗೆ ಚೆಂಡೆ ಸದ್ದು ವಿಶೇಷ ಮೆರುಗು ತುಂಬಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಜರಂಗದಳದ ಶೌರ್ಯ ಜಾಗರಣ ರಥಯಾತ್ರೆಯನ್ನ ಆಂಜನೇಯ ಸ್ವಾಗತಿಸಿದ್ದು ವಿನೂತನವಾಗಿತ್ತು. ಆಂಜನೇಯ ವೇಷಧಾರಿ ಕ್ರೇನ್ ಮೂಲಕ ಹಾರುತ್ತ ಬಂದು ಶೌರ್ಯ ರಥಯಾತ್ರೆಯಲ್ಲಿದ್ದ ಬಜರಂಗಿಯ ಮೂರ್ತಿಗೆ ಮಾಲಾರ್ಪಣೆ ಮಾಡಿದ್ದು ವಿಶೇಷ ಆಕರ್ಷಣೆಯಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು