Friday, November 22, 2024
ಸುದ್ದಿ

ದೇಂತಡ್ಕ ಮೇಳದಲ್ಲಿ ಮತ್ತೆ ಹುಟ್ಟಿ ಬರಲಿದ್ದಾರೆ ” ಛತ್ರಪತಿ ” ಹಿಂದೂ ಸಾಮ್ರಾಜ್ಯದ ಅಧಿಪತಿ – ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆದಿಲಾ ಗ್ರಾಮದ ದೇಂತಡ್ಕ ವನದುರ್ಗೆಯ ಸನ್ನಿಧಾನದಿಂದ ಕಳೆದ ವರುಷ ನೂತನವಾಗಿ ಹೊರಟಂತಹ *ಶ್ರೀ ವನದುರ್ಗಾ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ದೇಂತಡ್ಕ*
ಈ ಮೇಳವು ಒಂದೇ ವರುಷದ ತಿರುಗಾಟದಲ್ಲಿ ತೆಂಕುತಿಟ್ಟಿನ ಗಜ ಮೇಳಗಳ ಪಟ್ಟಿಗೆ ಕಾಲಿರಿಸಿದೆ.
ಈ ಮೇಳವು ಈ ವರುಷದ ತಿರುಗಾಟದ ನೂತನ ಪ್ರಸಂಗವಾಗಿ
ಪೌರಾಣಿಕ ಹಾಗು ತುಳು ಪ್ರಸಂಗಗಳು ಅಲ್ಲದೆ,
ಹಿರಿಯ ಕಲಾವಿದರು, ಪ್ರಸಂಗ ಕರ್ತರೂ ಆದ *ಶ್ರೀ ಎಂ.ಕೆ ರಮೇಶ ಆಚಾರ್ಯ* ವಿರಚಿತ *ಛತ್ರಪತಿ* ಎನ್ನುವ ಪ್ರಸಂಗವನ್ನು ಆರಿಸಿಕೊಂಡಿದ್ದಾರೆ.
ಹೆಸರೇ ಸೂಚಿಸುವಂತೆ ಇದು ಹಿಂದೂ ಸಾಮ್ರಾಜ್ಯದ ಅಧಿಪತಿಯಾದ ಶಿವಾಜಿ ಮಹಾರಾಜರ ಜೀವನ ಕಥನವಾಗಿದ್ದು.ಹಿಂದು ಸಂಘಟನೆಯ ಕಾರ್ಯಕರ್ತರನ್ನು ಹಾಗು ಶಿವಾಜಿ ಮಹಾರಾಜರ ಅಭಿಮಾನಿಗಳ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಗಲಿದೆಯೇ ಕಾದು ನೋಡಬೇಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

*ಯಕ್ಷಪ್ರೇಮಿಗಳಲ್ಲಿ ಕಾತುರ*

ಜಾಹೀರಾತು
ಜಾಹೀರಾತು
ಜಾಹೀರಾತು

ದೇಂತಡ್ಕ ಮೇಳವು ಕಳೆದ ತಿರುಗಾಟದಲ್ಲಿ ಪೌರಾಣಿಕ ಪ್ರಸಂಗಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದು ,ಪರಂಪರೆಗೆ ದಕ್ಕೆ ಬಾರದೆ ಪ್ರಸಂಗವನ್ನು ಪ್ರದರ್ಶಿಸಿ ಪೌರಾಣಿಕ ಯಕ್ಷಗಾನ ಪ್ರೇಮಿಗಳ ಮನಸೂರೆಗೊಂಡಿತ್ತು,ಹಳೆಯ ತುಳು ಪ್ರಸಂಗಗಳಲ್ಲು ಉತ್ತೀರ್ಣತೆಯನ್ನು ಪಡೆದಿತ್ತು.
ಈ ವರುಷದ ತಿರುಗಾಟದಲ್ಲಿ ಪೌರಾಟಿಕ,ಹಾಗು ತುಳು ಪ್ರಸಂಗದೊಂದಿಗೆ
ಚಾರಿತ್ರಿಕ ಮಹಾಪುರುಷ, ಕೆಚ್ಚೆದೆಯ ರಾಷ್ಟ್ರ ರಕ್ಷಕ ತರುಣರ ಸ್ಪೂರ್ತಿಯ ಮೂಲ ವಾದ ಶಿವಾಜಿ ಮಹಾರಾಜರ ಜೀವನ ಚರಿತ್ರೆಯನ್ನು ಆಡಿತೋರಿಸಲು ಹೊರಟಿರುವುದನ್ನು ಪೌರಾಣಿಕ ಪ್ರಿಯರು,ಹಾಗು ಯಕ್ಷಗಾನದ ಪರಂಪರೆಯ ವಿಮರ್ಷಕರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ನೋಡಬೇಕಿದೆ.

*ಹಿಂದು ಕಾರ್ಯಕರ್ತರಲ್ಲಿ ಸ್ಪೂರ್ತಿ*
ದೇಂತಡ್ಕ ಮೇಳವು ಈ ವರುಷದ ತಿರುಗಾಟದ ಪಟ್ಟಿಯಲ್ಲಿ ಕೇಸರಿ ಭಗವಾದ್ವಜದ ಚಿತ್ರದ ಮೇಲೆ *ಛತ್ರಪತಿ* ಎನ್ನುವ ಹೆಸರನ್ನು ಪ್ರಕಟಿಸುತ್ತಿದ್ದಂತೆ ಸಂಘ ಪರಿವಾರ ಸಂಘಟನೆಗಳ ಕಾರ್ಯಕರ್ತರು ಹಾಗು ಹಲಾವಾರು ಹಿಂದು ಸಂಘಟನೆಗಳ ಯಕ್ಷಗಾನ ಪ್ರೇಮಿ ಕಾರ್ಯಕರ್ತರ ಮನಸ್ಸಿನಲ್ಲಿ ಹೊಸತನದ ಸ್ಪೂರ್ತಿ ಉದಿಸಿದೆ.
ತಮ್ಮ ಸ್ಪೂರ್ತಿಯ ಸೆಲೆಯಾದ ವೀರ ಶಿವಾಜಿಯನ್ನು ಯಕ್ಷರಂಗಕ್ಕೆ ಸ್ವಾಗತಿಸಲು ತರುಣ ಪಡೆ ಸಜ್ಜಾಗಿದೆ.

*ಯಾರಿಗೆ ಯಾವ ವೇಷ*???
ದೇಂತಡ್ಕ ಮೇಳವು ಛತ್ರಪತಿ ಹೆಸರುನ್ನು ಹೊರ ಹಾಕುತ್ತಿದ್ದಂತೆ ಯಕ್ಷರಸಿಕರ ಮನದಲ್ಲಿ ಯಾವ ಕಲಾವಿದನಿಗೆ ಯಾವ ವೇಷ ಎಂಬ ಪ್ರಶ್ನೆ ಬಹಳ ಕಾತುರತೆಯಿಂದ ತಲೆಯೆತ್ತಿ ನಿಂತಿದೆ.

ಹೇಳಿ ಕೇಳಿ ಕೆದಿಲಾ ಗ್ರಾಮವು ಸಂಘದ(RSS)ಗ್ರಾಮವೆಂದೆ ಹೆಸರು ಪಡೆದ ಗ್ರಾಮ.
ಅಲ್ಲದೆ ದೇಂತಡ್ಕ ಕ್ಷೇತ್ರದಲ್ಲು ಸಂಘ ಬೈಠಕ್ ಗಳು ಉತ್ಸವಗಳು ನಡೆಯುತ್ತಲೆ ಇರುತ್ತದೆ.
ಅಲ್ಲದೆ ಸಂಘ ಹಾಗು ಪರಿವಾರ ಸಂಘಟನೆಗಳಾದ ಹಿಂದು ಜಾಗರಣ ವೇದಿಕೆ,ಬಾರತೀಯ ಜನತಾ ಪಕ್ಷ ಮೊದಲಾದ ಸಂಘಟನೆಗಳು ಭದ್ರವಾಗಿ ನೆಲೆಯೂರಿದೆ.
ಅಲ್ಲದೆ ಈ ಮೇಳದ ಸಂಚಾಲಕರಾ *ಶ್ಯಾಮ ಭಟ್ ಜತ್ತನಕೋಡಿ* ಇವರು ಹಿಂದು ಸಂಘಟನೆಗಳ ಕಾರ್ಯಕರ್ತರು.
ಅಲ್ಲದೆ ಈ ಮೇಳದ ವ್ಯವಸ್ಥಾಪಕರಾದ *ಸತ್ಯಪಾಲ ರೈ ಕಡೆಂಜ* ಇವರು ಸಂಘದ ಪರಿವಾರ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಕಾರ್ಯಕರ್ತರು.
ಇಂತಹ ಸ್ಥಳದಿಂದ ಹಾಗು ದಿಗ್ಗಜರ ಸಂಚಾಲಕತ್ವ ಹಾಗು ವ್ಯವಸ್ಥಾಪಕತ್ವದಲ್ಲಿ ಹೊರಡುತ್ತಿರುವ *ಛತ್ರಪತಿ* ಯ ಬಗೆಗೆ ಕಾರ್ಯಕರ್ತರ ಮನಸ್ಸಿನಲ್ಲಿ ಕಲ್ಪನಾ ಸೌದವೆ ಬೆಳೆಯದೆ ಇರದು.
ಅಲ್ಲದೆ ಪ್ರಖ್ಯಾತ
ಹಿಂದು ಸಂಘಟಕರು,
ಹಿಂ,ಜಾ,ವೇ ಯ ಪ್ರಧಾನ ಕಾರ್ಯದರ್ಶಿಗಳು,
ಪ್ರಖ್ಯಾತ ದಿಕ್ಸೂಚಿ ಭಾಷಣ ಗಾರರು ಹಿಂದು ಸಂಘಟನೆಯ ಕಾರ್ಯಕರ್ತರನ್ನು ತನ್ನ ಮಾತಿನಿಂದು ಹುರಿದುಂಬಿಸಿ ರಾಷ್ಟ್ರ ಕಾರ್ಯದತ್ತ ದುಮುಕಿಸುವ ಮಾತಿನ ಮಲ್ಲ *ಶ್ರೀ ಗಣರಾಜ ಭಟ್ ಕೆದಿಲ* ಇವರು ಮಖ್ಯ ಕಲಾವಿದರಾಗಿ ಈ ಮೇಳದಲ್ಲಿದ್ದು ಇವರು ಯಾವ ವೇಷ ನಿರ್ವಹಿಸ ಬಹುದು ಎನ್ನುವ ಕಾತುರತೆಯಲ್ಲಿ ಇದೆ ಯುವ ಸಮೂಹ.
ಅಲ್ಲದೆ ಬಡಗು ತಿಟ್ಟಿನಲ್ಲಿ ತನ್ನ ಮಾತಿನ ಮೋಡಿಯನ್ನು ಹರಿಸಿ ಈ ವರುಷ ದೇಂತಡ್ಕ ಮೇಳದಲ್ಲಿ ಕಾಣಿಸಿಕೊಳ್ಳಲಿರುವ ಮಾತಿನ ಮಲ್ಲ *ಕೆಕ್ಕಾರು ಆನಂದ ಭಟ್ಟರು* ಈ ಪ್ರಸಂಗದಲ್ಲಿ ನಿರ್ವಹಿಸುವ ಪಾತ್ರ ಯಾವುದೆನ್ನುವುದು ಪ್ರಶ್ನೆ.??

ಅಲ್ಲದೆ ಪೌರಾಣಿಕ ಪ್ರಸಂದ ರಂಗದ ರಾಜರುಗಳಾದ ಶ್ರೀ *ರೆಂಜಾಳ ರಾಮ ಕೃಷ್ಣ ರಾಯರು*,
ಯಕ್ಷಗುರುಗಳಾದ *ಶ್ರೀ ಉಂಡೆಮನೆ ಶ್ರೀ ಕೃಷ್ಣ ಭಟ್ಟರು*,
ಬಣ್ಣದ ಮಲ್ಲ *ನಗ್ರಿ ಮಹಾಭಲ ರೈಗಳು* .
ಯಕ್ಷರಂಗದ ನಾಟ್ಯ ಮಯ್ಯೂರಿ *ಅಂಬಾ ಪ್ರಸಾದ ಪಾತಾಳ*.
ಅಲ್ಲದೆ ತುಳು ಯಕ್ಷರಂಗದ ಚೆನ್ನಯ ಖ್ಯಾತಿಯ *ಜಪ್ಪು ದಯಾನಂದ ಶೆಟ್ಟರು*.
ತುಳು ಯಕ್ಷರಂಗದ ಗರತಿ *ರಮೇಶ ಕುಲಶೇಖರ*.
ಹಾಸ್ಯ ದಿಗ್ಗಜ *ಉಜಿರೆ ನಾರಾಯಣ*.
ಇವರುಗಳು
ಈ ಚಾರಿತ್ರಿಕ ಪ್ರಸಂಗದಲ್ಲಿ ಯಾವ ವೇಷಕ್ಕೆ ಜೀವ ತುಂಬಲಿದ್ದಾರೆ ಎನ್ನುವುದು ಅಭಿಮಾನಿಗಳ ಮನದಲ್ಲಿ ಕಾಡುತ್ತಿರುವ ಪ್ರಶ್ನೆ???

ಈ ಎಲ್ಲ ಪ್ರಶ್ನೆ ಕಾತುರತೆಗಳಿಗೆ ನವೆಂಬರ್ 23 ರಂದು ತನ್ನ ಪ್ರಥಮ ಸೇವೆಯನ್ನು ಪೂರೈಸಿ ದಿಗ್ವಿಜಯಕ್ಕೆ ಹೊರಡುತ್ತಿರುವ ದೇಂತಡ್ಕ ಮೇಳವು ಹೇಗೆ ಉತ್ತರಿಸಲಿದೆ ಕಾದು ನೋಡಬೇಕಿದೆ.