ಸಂಸತ್ ಭವನದಲ್ಲಿ ಭಾಷಣ ಮಾಡಿ ಕರಾವಳಿಯ ವಿದ್ಯಾರ್ಥಿ ಸೌರವ್ ಸಾಲ್ಯಾನ್ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ; ಶಾಸಕ ವೇದವ್ಯಾಸ್ ಕಾಮತ್ – ಕಹಳೆ ನ್ಯೂಸ್
ಗಾಂಧಿ ಜಯಂತಿ ಪ್ರಯುಕ್ತ ಅಕ್ಟೋಬರ್ 2ರಂದು ದಿಲ್ಲಿಯ ಸಂಸತ್ ಭವನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ಮೂಲಕ ಕರಾವಳಿಯ ವಿದ್ಯಾರ್ಥಿ ಸೌರವ್ ಸಾಲ್ಯಾನ್ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಇವರ ಸಾಧನೆ ನಮ್ಮ ಜಿಲ್ಲೆಗೂ ಹೆಮ್ಮೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದರು.
ಮಂಗಳೂರಿನ ದಡ್ಡಲ್ ಕಾಡ್ ನಿವಾಸಿಯಾಗಿರುವ ಇವರು ಪ್ರಸ್ತುತ ಕೆನರಾ ಕಾಲೇಜಿನಲ್ಲಿ ಓದುತ್ತಿದ್ದು ಕೇಂದ್ರ ಸರ್ಕಾರದ ಯೋಜನೆ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರದ ವತಿಯಿಂದ ಸಂಸತ್ ಭವನದಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರಿ ಜೀವನ ಚರಿತ್ರೆ ಕುರಿತಂತೆ ಭಾಷಣ ಮಾಡಲು ಅವಕಾಶ ಪಡೆದ ಕೆಲವೇ ಕೆಲವು ಮಂದಿಯಲ್ಲಿ ಒಬ್ಬರಾಗಿದ್ದಾರೆ. ಲೋಕಸಭಾ ಸದಸ್ಯರಲ್ಲದಿದ್ದರೂ ಸಂಸತ್ತಿನಲ್ಲಿ ಭಾಷಣ ಮಾಡುವ ಅವಕಾಶ ಸಿಕ್ಕಿರುವುದು ಅಪರೂಪದಲ್ಲೇ ಅಪರೂಪದ ಅವಕಾಶ. ದೇಶದ ಮುಂದಿನ ಪೀಳಿಗೆಯನ್ನು ಗುರುತಿಸಿ ಇಂತಹ ಅವಕಾಶ ಒದಗಿಸಿ ಪ್ರೋತ್ಸಾಹಿಸುವ ಸನ್ಮಾನ್ಯ ನರೇಂದ್ರ ಮೋದೀಜಿ ಯವರಿಗೆ ಧನ್ಯವಾದಗಳು. ಎಂದು ಶಾಸಕರು ಹೇಳಿದರು.
ನಗರದ ಅಟಲ್ ಸೇವಾ ಕೇಂದ್ರದಲ್ಲಿ ಸೌರವ್ ರನ್ನು ಸನ್ಮಾನಿಸುವ ಸಂದರ್ಭದಲ್ಲಿ ಮೋನಪ್ಪ ಭಂಡಾರಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ವಿಜಯ್ ಕುಮಾರ್, ಮೀರಾ ಕರ್ಕೇರ, ರವೀಂದ್ರ ಕುಮಾರ್, ಉಮಾನಾಥ್ ಶೆಟ್ಟಿಗಾರ್, ಜಯಲಕ್ಷ್ಮಿ ಶೆಟ್ಟಿ, ಪಮ್ಮಿ ಕೊಡಿಯಾಲ್ ಬೈಲ್, ದೀಪಕ್ ಪೈ, ಅಮರ್, ಸುರೇಂದ್ರ, ಜೀವನ್, ದೀಕ್ಷಿತ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.