Friday, September 20, 2024
ಸಿನಿಮಾಸುದ್ದಿ

‘ನೋ ಫಿಲ್ಟರ್ ನೆಹಾ’ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ ಕತ್ರೀನಾ ಕೈಫ್: ಜೀವನದ ಹಲವು ರಹಸ್ಯ ಬಹಿರಂಗ – ಕಹಳೆ ನ್ಯೂಸ್

ಬೆಂಗಳೂರು: ನಟಿ ಕತ್ರೀನಾ ಕೈಫ್ ಈ ಬಾರಿ ನೆಹಾ ದುಪಿಯಾ ಅವರು ನಡೆಸಿಕೊಡುವ ‘ನೋ ಫಿಲ್ಟರ್ ನೆಹಾ ‘ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕತ್ರೀನಾ ತನ್ನ ಜೀವನದ ಹಲವು ರಹಸ್ಯಗಳನ್ನು ಕೂಡ ಬಹಿರಂಗಪಡಿಸಿದ್ದಾರಂತೆ. ಒಂದು ಮೂಲಗಳ ಪ್ರಕಾರ, ನೆಹಾ ಕೇಳುವ ಪ್ರತಿಯೊಂದು ಪ್ರಶ್ನೆಗೂ ಯಾವುದೇ ಮುಜುಗರವಿಲ್ಲದೆ ಕತ್ರೀನಾ ಕೈಫ್ ಉತ್ತರಿಸಲಿದ್ದಾರಂತೆ. ಈ ಕುರಿತಾದ ವರದಿ ಇಲ್ಲಿದೆ.

ನೆಹಾ ದುಪಿಯಾರ ಶೋ ನೋ ಫಿಲ್ಟರ್ ನೇಹಾದಲ್ಲಿ ಕತ್ರಿನಾ ಕೈಫ್‍ಗೆ ಹಲವಾರು ಪ್ರಶ್ನೆಗಳನ್ನು ಕೇಳಲಾಗಿದೆ. ಹಾಗೇ ಯಾರ ಮೇಲೆ ಅತಿಯಾದ ಪ್ರೀತಿ ಎಂದಿದ್ದಕ್ಕೆ ಕತ್ರೀನಾ ಹಾರಿಕೆಯ ಉತ್ತರ ನೀಡಿದ್ದಾರಂತೆ. ನಿಮಗೆ ಯಾರ ಜೊತೆ ಸದ್ಯಕ್ಕೆ ಉತ್ತಮ ಸಂಬಂಧವಿದೆ ಎಂಬ ಪ್ರಶ್ನೆಗೆ ಹಾಸ್ಯದ ಮೂಲಕ ಉತ್ತರಿಸಿರುವ ಕತ್ರೀನಾ ಕೈಫ್, ನನಗೆ ಸದ್ಯಕ್ಕೆ ಬಟ್ಟೆಯ ಮೇಲೆ ಅತಿಯಾದ ಪ್ರೀತಿ ಇದೆ ಎನ್ನುವ ಹಾರಿಕೆಯ ಉತ್ತರದ ಮೂಲಕ ಪ್ರಶ್ನೆಯಿಂದ ನುಣುಚಿಕೊಳ್ಳಲು ಯತ್ನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ನನಗೆ ಟ್ರ್ಯಾಕ್ ಸೂಟ್, ಸ್ಪೇಟ್ ಪ್ಯಾಂಟ್, ಟ್ರ್ಯಾಕ್ ಪ್ಯಾಂಟ್ ಎಂದರೆ ತುಂಬಾ ಇಷ್ಟ ಎಂದಿರುವ ಕತ್ರೀನಾ ಕೈಫ್, ಕೆಲವರು ನನಗೆ ಇದನ್ನೇ ಉಡುಗೊರೆಯಾಗಿ ಕೊಟ್ಟಿದ್ದು ಇದೆ ಎಂದಿದ್ದಾರೆ. ಇದೇ ವೇಳೆ ಯಾರೂ ಬೇಕಾದರೂ ನನ್ನ ಮನೆ ವಿಳಾಸಕ್ಕೆ ಟ್ರ್ಯಾಕ್ ಸೂಟ್ ಕಳುಹಿಸಿಕೊಡಿ, ನನಗೆ ಇದರೊಂದಿಗೆ ಅತ್ಯಂತ ಹೃದಯಸ್ಪರ್ಶಿ ಸಂಬಂಧ ಇದೆ ಎಂದು ಹೇಳಿಕೊಂಡಿದ್ದಾರೆ. ಒಟ್ಟಾಗಿ ಕತ್ರಿನಾ ಎಸ್ಕೇಪಿಂಗ್ ಉತ್ತರವನ್ನು ನೀಡಿದ್ದಾರೆ.

ಅಂದಹಾಗೆ ಇದೀಗ ಕತ್ರೀನಾ ಮಾಜಿ ಬಾಯ್ ಫ್ರೆಂಡ್ ರಣ್‍ಬೀರ್ ಆಲಿಯಾ ಭಟ್ ಜೊತೆಗೆ ಡೇಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಇವರಿಬ್ಬರ ಒಡನಾಟ ಬಾಲಿವುಡ್‍ನಲ್ಲೇ ಮನೆಮಾತಾಗಿದೆ. ಆಲಿಯಾ, ಕತ್ರೀನಾ ಅವರ ಬೆಸ್ಟ್ ಫ್ರೆಂಡ್ ಕೂಡ ಹೌದು. ಅವಾಗವಾಗ ಈ ತ್ರಿಮೂರ್ತಿಗಳು ಕಾರ್ಯಕ್ರಮಗಳಲ್ಲಿ ಅಥವ ಇನ್ನಿತರೆಡೆ ಜೊತೆಯಾಗಿ ಕಾಣಿಸಿಕೊಳ್ಳುವುದು ಇದೆ. ಆದರೆ ಕತ್ರೀನಾ ತಮ್ಮ ಮಾಜಿ ಗೆಳೆಯನ ಬಗ್ಗೆ ಎಲ್ಲಿಯೂ ತುಟಿ ಪಿಟಿಕ್ ಅನ್ನುತ್ತಿಲ್ಲ ಎಂಬುವುದು ವಿಶೇಷ.

ಇನ್ನೂ ಸಿನಿಮಾ ವಿಚಾರಕ್ಕೆ ಬಂದರೆ ಕತ್ರೀನಾ ಕೈಫ್ ಆಲಿ ಅಬ್ಬಾಸ್ ಜಾಫರ್ ನಿರ್ಮಾಣದ ಭಾರತ್ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್‍ನಲ್ಲೆ ಸದ್ದು ಮಾಡುತ್ತಿರುವ ಭಾರತ್‍ನಲ್ಲಿ ಸಲ್ಮಾನ್ ಖಾನ್ ಜೊತೆ ಕತ್ರಿನಾ ತೆರೆಹಂಚಲಿದ್ದಾರೆ. ಪ್ರಿಯಾಂಕ ಚೋಪ್ರಾ ನಟಿಸಬೇಕಿದ್ದ ಪಾತ್ರದಲ್ಲಿ ಕತ್ರೀನಾ ಕೈಫ್ ನಟಿಸುತ್ತಿದ್ದು, ಪ್ರಿಯಾಂಕ ಅವರ ದಿಢೀರ್ ನಿರ್ಗಮನದಿಂದಾಗಿ ಈ ಪಾತ್ರವನ್ನು ಕತ್ರೀನಾ ನಿರ್ವಹಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಬಾಲಿವುಡ್‍ನ ಬಿಗ್‍ಬಿ ಅಮಿತಾಭ್ ಬಚ್ಚನ್, ಅಮೀರ್ ಖಾನ್ ಅಭಿನಯದ ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದಲ್ಲೂ ಕತ್ರೀನಾ ನಟಿಸುತ್ತಿದ್ದಾರೆ. ಈಗಾಗ್ಲೇ ಟ್ರೈಲರ್‍ನಲ್ಲೇ ಸದ್ದು ಮಾಡ್ತೀರೋ ಥಗ್ಸ್ ಆಫ್ ಹಿಂದೂಸ್ಥಾನ್ ಕತ್ರಿನಾ ಪಾಲಿಗೆ ಹೊಸ ಆಯಾಮವನ್ನೇ ತಂದು ಕೊಡಲಿದೆ.