ಉಡುಪಿ : ಮಹಿಷ ದಸರ ಎಂಬ ವಿಕೃತಿಯ ಚಿಂತನೆಯನ್ನು ನಿಲ್ಲಿಸಬೇಕು. ಶ್ರೀಕೃಷ್ಣನ ಊರು, ಕೊಲ್ಲೂರು ಮೂಕಾಂಬಿಕೆ ದೇವಿ ನೆಲೆಸಿರುವ ಉಡುಪಿ ಜಿಲ್ಲೆಯಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರಬೇಡಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ನಮ್ಮ ಧಾರ್ಮಿಕ ನಂಬಿಕೆಯನ್ನು ಪ್ರಶ್ನೆ ಮಾಡುವಂತ ಹಲವಾರು ಶಕ್ತಿಗಳು ಹುಟ್ಟಿಕೊಳ್ಳುತ್ತಿವೆ. ಇಂಥ ವಿಕೃತಿಯ ಮಾನಸಿಕತೆ ಕೊನೆಯಾಗಬೇಕು ಎಂದರು.