ದಕ್ಷಿಣ ಕನ್ನಡ ಮೋಗವೀರ ಹಿತಸಾಧನಾ ವೇದಿಕೆ ಉಚ್ಚಿಲ ವತಿಯಿಂದ ಪ್ರತಿಭಾ ಪುರಸ್ಕಾರ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ – ಕಹಳೆ ನ್ಯೂಸ್
ದಕ್ಷಿಣ ಕನ್ನಡ ಮೋಗವೀರ ಹಿತಸಾಧನಾ ವೇದಿಕೆ (ರಿ.) ಉಚ್ಚಿಲ ವತಿಯಿಂದ ಪ್ರತಿ ವರ್ಷ ನಡೆಸುತ್ತಾ ಬಂದಿರುವ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ” ಹಾಗೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಹಮ್ಮಿಕೊಳ್ಳಲಾದ “ಸನ್ಮಾನ ಕಾರ್ಯಕ್ರಮ” ಉಚ್ಚಿಲ ಮಹಾಲಕ್ಷ್ಮಿ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮೋಗವೀರ ಹಿತಸಾಧನಾ ವೇದಿಕೆಯ ಅಧ್ಯಕ್ಷರಾದ ಸರ್ವೊತ್ತಮ್ ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ಸುರತ್ಕಲ್ ಬಿ.ಎ.ಎಸ್.ಎಫ್ ಸೈಟ್ ಎಚ್.ಆರ್ ಸಂತೋಷ್ ಪೈ, ದಕ್ಷಿಣ ಕನ್ನಡ ಮೋಗವೀರ ಹಿತಸಾಧನಾ ವೇದಿಕೆ (ರಿ.) ಉಚ್ಚಿಲ ಸ್ಥಾಪಕ ಸದಸ್ಯರು, ನ್ಯಾಯವಾದಿಗಳಾದ ದಯಾನಾಥ ಕೋಟ್ಯಾನ್,ಉದ್ಯಮಿಗಳಾದ ಶೇಖರ್ ಸಾಲ್ಯಾನ್, ಉಷಾ ಶೇಖರ್ ಸಾಲ್ಯಾನ್, ಉಚ್ಚಿಲ ಮಹಾಲಕ್ಷ್ಮಿ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕರಾದ ಜೋಸೆಫ್ ಪೀಟರ್ ನಸ್ರತ್, ಶಾಲಾ ಸಂಚಾಲಕರಾದ ಹೆಚ್. ಗಂಗಾಧರ ಕರ್ಕೇರ, ದಕ್ಷಿಣ ಕನ್ನಡ ಮೋಗವೀರ ಹಿತಸಾಧನಾ ವೇದಿಕೆ (ರಿ.) ಉಚ್ಚಿಲ ಉಪಾಧ್ಯಕ್ಷರಾದ ಸತೀಶ್ ಆರ್ ಸಾಲ್ಯಾನ್, ಹೆಚ್. ರವಿ ಕುಂದರ್, ಪ್ರಧಾನ ಕಾರ್ಯದರ್ಶಿಗಳಾದ ಸುಧಾಕರ ಕರ್ಕೇರ, ಕೋಶಾಧಿಕಾರಿಗಳಾದ ವೇದವ್ಯಾಸ ಬಂಗೇರ ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.