Recent Posts

Sunday, January 19, 2025
ಸುದ್ದಿ

ಗಡಿನಾಡ ಬೆಡಗಿ ಶ್ರೀಮತಿ ಅನುಪಮಾಗೆ 19ನೇ ವಾರ್ಷಿಕ ಇಂಡಿಯನ್ ರಾಯಲ್ ಅಕಾಡೆಮಿ ರಾಷ್ಟೀಯ ಪ್ರಶಸ್ತಿ – ಕಹಳೆ ನ್ಯೂಸ್ ಬೆಂಗಳೂರು : ಇತ್ತೀಚಿಗೆ ಕನ್ನಡ ಭವನದಲ್ಲಿ ಇಂಡಿಯನ್ ರಾಯಲ್ ಅಕಾಡೆಮಿ ಓಫ್ ಆರ್ಟ್ ಅಂಡ್ ಕಲ್ಚರ್ ಆಯೋಜಿಸಿದ್ದ 19ನೇ ವಾರ್ಷಿಕ ಇಂಡಿಯನ್ ರಾಯಲ್ ಅಕಾಡೆಮಿ ರಾಷ್ಟೀಯ ಪ್ರಶಸ್ತಿಗೆ ಶ್ರೀಮತಿ ಅನುಪಮಾ ಅವರ ಕೃತಿಯು ಚಿನ್ನದ ಪದಕವನ್ನು ಗೆದಿದ್ದಾರೆ. ಖ್ಯಾತ ಕಾಷ್ಠ ಶಿಲ್ಪಿ ಮತ್ತು ಕಾರ್ಟೂನಿಸ್ಟ್ ಜಿ.ಕೆ.ಭಟ್ ಹಾಗು ಜಯಲಕ್ಷ್ಮಿ ಅವರ ಸುಪುತ್ರಿಯಾಗಿರುವ ಈಕೆ ವಂಶವಾಹಿನಿಯಾಗಿ ಬಂದ ಕಲೆಯ ಪರಿಮಳದ ಜೊತೆಗೆ ತನ್ನ ಸಾಧನೆಯ ಮೆರುಗನ್ನು ಬೆರೆಸಿ “ಕುಂಚದ ಬೆಡಗಿ” ಎಂದು ಗುರುತಿಸಲ್ಪಟ್ಟ ಕಲಾ ಮಾತೆಯ ಮಗಳು. ಬೆಂಗಳೂರಿನ ಅನುಗ್ರಹ ಲೇಔಟ್ ನ ಮನೆಯೊಂದರಲ್ಲಿ ವಾಸಿಸುತ್ತಿರುವ ಇವರ ಮನೆಯೇ ಒಂದು ಕಲಾಮಂದಿರ. ಜನವರಿ 22ರಂದು ಸತ್ಯ ಸಾಯಿ ಕಲ್ಯಾಣ ಮಂಟಪದಲ್ಲಿ ನಡೆದ ಈ ಬಾರಿಯ ಪ್ರತಿಷ್ಠಿತ ಕೊನಸೀಮ ಚಿತ್ರಕಲಾ ಪರಿಷದ್ ಅಮಲಾಪುರಂ ಅಂತರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ಅನುಪಮ ಅವರ ಕಲಾಕೃತಿಯು “ಆರ್ಟ್ ಲೆಜೆಂಡ್ ಗೋಲ್ಡನ್ ಮಯೂರಿ” ಪ್ರಶಸ್ತಿ ಲಭಿಸಿದೆ. ಅವರ ಕಲೆಗೆ ಪ್ರಕೃತಿಯೇ ಸ್ಪೂರ್ತಿ. ಅವರ ಚಿಂತನೆಯ ಸ್ವಾತಂತ್ರ್ಯ ಹಾಗು ಚಿತ್ರಕಲೆಯ ಬಗ್ಗೆ ಇರುವ ಪ್ರೀತಿ ಮತ್ತು ಉತ್ಸಾಹ, ಅವರ ಸುಂದರ ಹಾಗು ದಿಟ್ಟವಾದ ಬಣ್ಣಗಳ ಚಿತ್ತಾರ ಕುಂಚದಲ್ಲಿ ಕಾಣಬಹುದು. ವಿಷಯ ಆಧಾರಿತ (ಥೀಮ್ ಬೇಸ್ಡ್) ಚಿತ್ರಕಲೆ ಮಾಡುವುದರಲ್ಲಿ ಪರಿಣಿತರು. ಇತ್ತೀಚೆಗೆ ಅವರ ಕಲಾಕೃತಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಮತ್ತು ಗುಲ್ಬರ್ಗ ಅಕಾಡೆಮಿ ಆಫ್ ಆಟ್ರ್ಕ, ಕಲ್ಚರ್ ಅಂಡ್ ಲಿಟರೇಚರ್ ಕೊಡಮಾಡುವ ಹತ್ತನೇ ರಾಷ್ಟ್ರಿಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಶಿಕ್ಷಣ ಪಡೆಯುತ್ತಿರುವ ಸಂಧರ್ಭದಲ್ಲಿಯೇ ಚಿತ್ರ ರಚನೆಯಲ್ಲಿ ಹಲವಾರು ಬಹುಮಾನಗಳನ್ನು ಗಿಟ್ಟಿಸಿಕೊಂಡ ಈಕೆ ಎಂ.ಕಾಂನಲ್ಲಿ ಹತ್ತನೇಯ ರಾಂಕ್ ವಿಜೇತೆ ಕೂಡ ಹೌದು. ಶ್ರೀಯುತ ಗಣೇಶ್ ಪ್ರಸಾದ್ ಅವರ ಮಡದಿಯಾದ ನಂತರ ಮನದೊಡೆಯನ ಒತ್ತಾಸೆ ಅವರ ಪ್ರವೃತ್ತಿಗೆ ಗರಿಹುಟ್ಟಿಸಿ ಬಾನೆತ್ತರಕ್ಕೆ ಹಾರುವಂತೆ ಮಾಡಿತು. ಮದುವೆಯಾಗಿ ಬೆಂಗಳೂರಿಗೆ ಬಂದ ಮೇಲೂ ಸಹ ತನ್ನ ಕಲಿಕೆಯನ್ನು ಗುರುವಾದ ಶ್ರೀಮತಿ ಶೈಲಾ ಪ್ರಸಾದ್ , ಶ್ರೀ ಮುನಿಯಪ್ಪ ಪಿಲ್ಲಪ್ಪ ಮತ್ತು ಶ್ರೀ ಶಾಜಿ ಸುಬ್ರಮಣಿಯನ್ ಅವರಲ್ಲಿ ಮುಂದುವರಿಸಿದರು. ತನ್ನ ಕಲಾಕೃತಿಗಳಿಗೆ “ಅನುರೂಪಿಕಾ” ಎಂಬ ವಿಶಿಷ್ಟ ನಾಮಧೇಯವನ್ನು ಇರಿಸಿಕೊಂಡು ಅಲ್ಲೂ ಕೂಡ ಈಕೆ ಯಾರ ಅನುಕರಣೆ ಇಲ್ಲದೇ ತಮ್ಮತನವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಪ್ರತಿಯೊಂದು ಚಿತ್ರವೂ ಆಧ್ಯಾತ್ಮಿಕ ಅರ್ಥ ಬರುವಂತಹ ದೃಶ್ಯಗಳನ್ನು ಕಲಾ ಆರಾಧಕರ ಮನ ಮುಟ್ಟುವಂತೆ ಚಿತ್ರಿಸುವುದು ಈಕೆಯ ವೈಶಿಷ್ಟ್ಯ. ಇಂತಹಾ ನೂರಾರು ಕೃತಿಗಳು ಈಗಾಗಲೇ ಕಲಾಜಗತ್ತಿಗೆ ಸಮರ್ಪಣೆಗೊಂಡಿವೆ. ಇದು ಒಂದು ಕ್ಷಣವೋ ಒಂದು ದಿನವೋ ಮಾಡಿ ಮುಗಿಸುವ ಕೆಲಸವಲ್ಲ. ಈ ಕಲಾವಿದೆ ಕೈಯಲ್ಲಿ ನೋಡುಗನ ಕಣ್ಣಿಗೆ ರಸದೌತಣ ನೀಡುವ ಕಲಾ ಕೌತುಕವಾಗುತ್ತದೆ. ನಿಜ ಅರ್ಥದಲ್ಲಿ ಓರ್ವ ಪ್ರಕೃತಿ ಮಾತೆಯ ಮಡಿಲಿನ ಮಗುವಾಗಿ ಗೋಚರಿಸುವುದು ಶ್ಲಾಘನೀಯ ವಿಚಾರ. ಇವರ ಕಲಾಕೃತಿಯ ಪ್ರದರ್ಶನ ಈಗಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಕಡೆಗಳಲ್ಲಿ ನಡೆದಿದೆ. ಪ್ರಶಸ್ತಿಗಳು ಪ್ರತಿಷ್ಠಿತ ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಬೆಂಗಳೂರಿನ “ಪರಮೇಶ್ವರ ಪುಲಕೇಶಿ ಪ್ರಶಸ್ತಿ 2018”, “ಪೀಪಲ್ಸ್ ಆರ್ಟ ಫೌಂಡೇಶನ್” ನಡೆಸಿರುವ ರಾಷ್ಟ್ರ ಮಟ್ಟದ ಮಹಿಳಾ ಕಲಾ ಸ್ಪರ್ಧೆಯಲ್ಲಿ ಇವರ ಕಲಾಕೃತಿಗಳು ಶ್ರೇಷ್ಠ ದರ್ಜೆಯ ಗೌರವಕ್ಕೆ ಪಾತ್ರವಾಗಿದೆ. “ಕಲಾಸಿರಿ ಪ್ರಶಸ್ತಿ” ಸಾಹಿತ್ಯ ಸಂಭ್ರಮ 2018-19 ಪುತ್ತೂರು ಸಾಹಿತ್ಯ ವೇದಿಕೆ ಯಕ್ಷ ಮಿತ್ರ ಸಾಂಸ್ಕೃತಿಕ ಸಂಘ. “ಸ್ವರ್ಣಶ್ರೀ ಪ್ರಶಸ್ತಿ” 2018-19 ಲವ್ ಇಂಡಿಯಾ ರೀಜನಲ್ ಸಂಸ್ಥೆಯಿಂದ ನೀಡಲಾಗಿದೆ. “ಗೌರವ ಪುರಸ್ಕಾರ” 2018-19 ವಿಶ್ವ ಧರ್ಮ ಮಂದಿರ ಸಂಸ್ಥೆ ನೀಡಿದೆ. “ಸಾಧಕಿಯರಿಗೆ ಸನ್ಮಾನ ಪ್ರಶಸ್ತಿ” 2018-19 ನವ ಬೆಂಗಳೂರು ಕ್ಲಬ್ ನೀಡಿದೆ. “ಸಾಧಕ ಪ್ರಶಸ್ತಿ” 2018-19 ಇxiಜe ಉಡಿouಠಿ ನೀಡಿದೆ. ಕೇರಳದ ಗಡಿಪ್ರದೇಶದ ಕನ್ನಡ ಜನರ ಕಾಸರಗೋಡಿನ ಕಾಟುಕುಕ್ಕೆ ಎಂಬ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದ ಹೆಣ್ಣುಮಗಳೊಬ್ಬಳ ಈ ವಿಶಿಷ್ಠವಾದ ಸಾಧನೆ ಈ ಊರಿಗೆ ಒಂದು ಹೆಮ್ಮೆ ಮತ್ತು ತನ್ನೂರಿನ ಮುಂದಿನ ಪೀಳಿಗೆಗೆ ಒಂದು ಮಾದರಿ ಎಂದು ಗುರುತಿಸಿ ಕಾರ್ತಿಕೇಯ ಚಾರಿಟೆಬಲ್ ಟ್ರಸ್ಟ್ನ “ನಮ್ಮೂರ ಸಾಧಕಿ” ಗೌರವ ಸನ್ಮಾನ ನೀಡಿದೆ. ನವ ಬೆಂಗಳೂರು ಕ್ಲಬ್ ವತಿಯಿಂದ “ಸಾಧಕಿಯರಿಗೆ ಸನ್ಮಾನ 2019 ” ಪ್ರಶಸ್ತಿಯನ್ನು ಕೊಟ್ಟು ವಿಶೇಷ ಗೌರವ ನೀಡಿದ್ದಾರೆ. ಇದೀಗ ಈಕೆ ಮಕ್ಕಳಿಗಾಗಿಯೂ, ಹಿರಿಯರಿಗಾಗಿಯೂ ಚಿತ್ರಕಲಾ ಶಿಬಿರವನ್ನೂ ಕೂಡ ಬೆಂಗಳೂರಿನಲ್ಲಿ ಏರ್ಪಡಿಸುತ್ತಾ ತನ್ನ ಕಲೆಯ ಮೇಲಿನ ಅಭಿಮಾನವನ್ನು ಅಭಿವ್ಯಕ್ತಿಗೊಳಿಸುತ್ತಿದ್ದಾರೆ. ಪತಿ ಗಣೇಶ ಪ್ರಸಾದ್ ಮತ್ತು ಪುತ್ರಿ ಆಕಾಂಕ್ಷಾಳ ಜೊತೆ ಸಂತೃಪ್ತ ಜೀವನ ನಡೆಸುತ್ತಾ ತಮ್ಮ ವಿಶಿಷ್ಟ ಸಾಧನೆಯನ್ನು ಮುಂದುವರಿಸಿದ್ದಾರೆ.

ಬೆಂಗಳೂರು : ಇತ್ತೀಚಿಗೆ ಕನ್ನಡ ಭವನದಲ್ಲಿ ಇಂಡಿಯನ್ ರಾಯಲ್ ಅಕಾಡೆಮಿ ಓಫ್ ಆರ್ಟ್ ಅಂಡ್ ಕಲ್ಚರ್ ಆಯೋಜಿಸಿದ್ದ 19ನೇ ವಾರ್ಷಿಕ ಇಂಡಿಯನ್ ರಾಯಲ್ ಅಕಾಡೆಮಿ ರಾಷ್ಟೀಯ ಪ್ರಶಸ್ತಿಗೆ ಶ್ರೀಮತಿ ಅನುಪಮಾ ಅವರ ಕೃತಿಯು ಚಿನ್ನದ ಪದಕವನ್ನು ಗೆದಿದ್ದಾರೆ.

ಖ್ಯಾತ ಕಾಷ್ಠ ಶಿಲ್ಪಿ ಮತ್ತು ಕಾರ್ಟೂನಿಸ್ಟ್ ಜಿ.ಕೆ.ಭಟ್ ಹಾಗು ಜಯಲಕ್ಷ್ಮಿ ಅವರ ಸುಪುತ್ರಿಯಾಗಿರುವ ಈಕೆ ವಂಶವಾಹಿನಿಯಾಗಿ ಬಂದ ಕಲೆಯ ಪರಿಮಳದ ಜೊತೆಗೆ ತನ್ನ ಸಾಧನೆಯ ಮೆರುಗನ್ನು ಬೆರೆಸಿ “ಕುಂಚದ ಬೆಡಗಿ” ಎಂದು ಗುರುತಿಸಲ್ಪಟ್ಟ ಕಲಾ ಮಾತೆಯ ಮಗಳು. ಬೆಂಗಳೂರಿನ ಅನುಗ್ರಹ ಲೇಔಟ್ ನ ಮನೆಯೊಂದರಲ್ಲಿ ವಾಸಿಸುತ್ತಿರುವ ಇವರ ಮನೆಯೇ ಒಂದು ಕಲಾಮಂದಿರ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜನವರಿ 22ರಂದು ಸತ್ಯ ಸಾಯಿ ಕಲ್ಯಾಣ ಮಂಟಪದಲ್ಲಿ ನಡೆದ ಈ ಬಾರಿಯ ಪ್ರತಿಷ್ಠಿತ ಕೊನಸೀಮ ಚಿತ್ರಕಲಾ ಪರಿಷದ್ ಅಮಲಾಪುರಂ ಅಂತರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ಅನುಪಮ ಅವರ ಕಲಾಕೃತಿಯು “ಆರ್ಟ್ ಲೆಜೆಂಡ್ ಗೋಲ್ಡನ್ ಮಯೂರಿ” ಪ್ರಶಸ್ತಿ ಲಭಿಸಿದೆ.

ಅವರ ಕಲೆಗೆ ಪ್ರಕೃತಿಯೇ ಸ್ಪೂರ್ತಿ. ಅವರ ಚಿಂತನೆಯ ಸ್ವಾತಂತ್ರ್ಯ ಹಾಗು ಚಿತ್ರಕಲೆಯ ಬಗ್ಗೆ ಇರುವ ಪ್ರೀತಿ ಮತ್ತು ಉತ್ಸಾಹ, ಅವರ ಸುಂದರ ಹಾಗು ದಿಟ್ಟವಾದ ಬಣ್ಣಗಳ ಚಿತ್ತಾರ ಕುಂಚದಲ್ಲಿ ಕಾಣಬಹುದು. ವಿಷಯ ಆಧಾರಿತ (ಥೀಮ್ ಬೇಸ್ಡ್) ಚಿತ್ರಕಲೆ ಮಾಡುವುದರಲ್ಲಿ ಪರಿಣಿತರು. ಇತ್ತೀಚೆಗೆ ಅವರ ಕಲಾಕೃತಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಮತ್ತು ಗುಲ್ಬರ್ಗ ಅಕಾಡೆಮಿ ಆಫ್ ಆಟ್ರ್ಕ, ಕಲ್ಚರ್ ಅಂಡ್ ಲಿಟರೇಚರ್ ಕೊಡಮಾಡುವ ಹತ್ತನೇ ರಾಷ್ಟ್ರಿಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಶಿಕ್ಷಣ ಪಡೆಯುತ್ತಿರುವ ಸಂಧರ್ಭದಲ್ಲಿಯೇ ಚಿತ್ರ ರಚನೆಯಲ್ಲಿ ಹಲವಾರು ಬಹುಮಾನಗಳನ್ನು ಗಿಟ್ಟಿಸಿಕೊಂಡ ಈಕೆ ಎಂ.ಕಾಂನಲ್ಲಿ ಹತ್ತನೇಯ ರಾಂಕ್ ವಿಜೇತೆ ಕೂಡ ಹೌದು. ಶ್ರೀಯುತ ಗಣೇಶ್ ಪ್ರಸಾದ್ ಅವರ ಮಡದಿಯಾದ ನಂತರ ಮನದೊಡೆಯನ ಒತ್ತಾಸೆ ಅವರ ಪ್ರವೃತ್ತಿಗೆ ಗರಿಹುಟ್ಟಿಸಿ ಬಾನೆತ್ತರಕ್ಕೆ ಹಾರುವಂತೆ ಮಾಡಿತು. ಮದುವೆಯಾಗಿ ಬೆಂಗಳೂರಿಗೆ ಬಂದ ಮೇಲೂ ಸಹ ತನ್ನ ಕಲಿಕೆಯನ್ನು ಗುರುವಾದ ಶ್ರೀಮತಿ ಶೈಲಾ ಪ್ರಸಾದ್ , ಶ್ರೀ ಮುನಿಯಪ್ಪ ಪಿಲ್ಲಪ್ಪ ಮತ್ತು ಶ್ರೀ ಶಾಜಿ ಸುಬ್ರಮಣಿಯನ್ ಅವರಲ್ಲಿ ಮುಂದುವರಿಸಿದರು. ತನ್ನ ಕಲಾಕೃತಿಗಳಿಗೆ “ಅನುರೂಪಿಕಾ” ಎಂಬ ವಿಶಿಷ್ಟ ನಾಮಧೇಯವನ್ನು ಇರಿಸಿಕೊಂಡು ಅಲ್ಲೂ ಕೂಡ ಈಕೆ ಯಾರ ಅನುಕರಣೆ ಇಲ್ಲದೇ ತಮ್ಮತನವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಪ್ರತಿಯೊಂದು ಚಿತ್ರವೂ ಆಧ್ಯಾತ್ಮಿಕ ಅರ್ಥ ಬರುವಂತಹ ದೃಶ್ಯಗಳನ್ನು ಕಲಾ ಆರಾಧಕರ ಮನ ಮುಟ್ಟುವಂತೆ ಚಿತ್ರಿಸುವುದು ಈಕೆಯ ವೈಶಿಷ್ಟ್ಯ. ಇಂತಹಾ ನೂರಾರು ಕೃತಿಗಳು ಈಗಾಗಲೇ ಕಲಾಜಗತ್ತಿಗೆ ಸಮರ್ಪಣೆಗೊಂಡಿವೆ. ಇದು ಒಂದು ಕ್ಷಣವೋ ಒಂದು ದಿನವೋ ಮಾಡಿ ಮುಗಿಸುವ ಕೆಲಸವಲ್ಲ.

ಈ ಕಲಾವಿದೆ ಕೈಯಲ್ಲಿ ನೋಡುಗನ ಕಣ್ಣಿಗೆ ರಸದೌತಣ ನೀಡುವ ಕಲಾ ಕೌತುಕವಾಗುತ್ತದೆ. ನಿಜ ಅರ್ಥದಲ್ಲಿ ಓರ್ವ ಪ್ರಕೃತಿ ಮಾತೆಯ ಮಡಿಲಿನ ಮಗುವಾಗಿ ಗೋಚರಿಸುವುದು ಶ್ಲಾಘನೀಯ ವಿಚಾರ. ಇವರ ಕಲಾಕೃತಿಯ ಪ್ರದರ್ಶನ ಈಗಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಕಡೆಗಳಲ್ಲಿ ನಡೆದಿದೆ.

ಪ್ರಶಸ್ತಿಗಳು
ಪ್ರತಿಷ್ಠಿತ ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಬೆಂಗಳೂರಿನ “ಪರಮೇಶ್ವರ ಪುಲಕೇಶಿ ಪ್ರಶಸ್ತಿ 2018”, “ಪೀಪಲ್ಸ್ ಆರ್ಟ ಫೌಂಡೇಶನ್” ನಡೆಸಿರುವ ರಾಷ್ಟ್ರ ಮಟ್ಟದ ಮಹಿಳಾ ಕಲಾ ಸ್ಪರ್ಧೆಯಲ್ಲಿ ಇವರ ಕಲಾಕೃತಿಗಳು ಶ್ರೇಷ್ಠ ದರ್ಜೆಯ ಗೌರವಕ್ಕೆ ಪಾತ್ರವಾಗಿದೆ.

“ಕಲಾಸಿರಿ ಪ್ರಶಸ್ತಿ” ಸಾಹಿತ್ಯ ಸಂಭ್ರಮ 2018-19 ಪುತ್ತೂರು ಸಾಹಿತ್ಯ ವೇದಿಕೆ ಯಕ್ಷ ಮಿತ್ರ ಸಾಂಸ್ಕೃತಿಕ ಸಂಘ. “ಸ್ವರ್ಣಶ್ರೀ ಪ್ರಶಸ್ತಿ” 2018-19 ಲವ್ ಇಂಡಿಯಾ ರೀಜನಲ್ ಸಂಸ್ಥೆಯಿಂದ ನೀಡಲಾಗಿದೆ. “ಗೌರವ ಪುರಸ್ಕಾರ” 2018-19 ವಿಶ್ವ ಧರ್ಮ ಮಂದಿರ ಸಂಸ್ಥೆ ನೀಡಿದೆ. “ಸಾಧಕಿಯರಿಗೆ ಸನ್ಮಾನ ಪ್ರಶಸ್ತಿ” 2018-19 ನವ ಬೆಂಗಳೂರು ಕ್ಲಬ್ ನೀಡಿದೆ.

“ಸಾಧಕ ಪ್ರಶಸ್ತಿ” 2018-19 Exide Group ನೀಡಿದೆ. ಕೇರಳದ ಗಡಿಪ್ರದೇಶದ ಕನ್ನಡ ಜನರ ಕಾಸರಗೋಡಿನ ಕಾಟುಕುಕ್ಕೆ ಎಂಬ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದ ಹೆಣ್ಣುಮಗಳೊಬ್ಬಳ ಈ ವಿಶಿಷ್ಠವಾದ ಸಾಧನೆ ಈ ಊರಿಗೆ ಒಂದು ಹೆಮ್ಮೆ ಮತ್ತು ತನ್ನೂರಿನ ಮುಂದಿನ ಪೀಳಿಗೆಗೆ ಒಂದು ಮಾದರಿ ಎಂದು ಗುರುತಿಸಿ ಕಾರ್ತಿಕೇಯ ಚಾರಿಟೆಬಲ್ ಟ್ರಸ್ಟ್ನ “ನಮ್ಮೂರ ಸಾಧಕಿ” ಗೌರವ ಸನ್ಮಾನ ನೀಡಿದೆ. ನವ ಬೆಂಗಳೂರು ಕ್ಲಬ್ ವತಿಯಿಂದ “ಸಾಧಕಿಯರಿಗೆ ಸನ್ಮಾನ 2019 ” ಪ್ರಶಸ್ತಿಯನ್ನು ಕೊಟ್ಟು ವಿಶೇಷ ಗೌರವ ನೀಡಿದ್ದಾರೆ.

ಇದೀಗ ಈಕೆ ಮಕ್ಕಳಿಗಾಗಿಯೂ, ಹಿರಿಯರಿಗಾಗಿಯೂ ಚಿತ್ರಕಲಾ ಶಿಬಿರವನ್ನೂ ಕೂಡ ಬೆಂಗಳೂರಿನಲ್ಲಿ ಏರ್ಪಡಿಸುತ್ತಾ ತನ್ನ ಕಲೆಯ ಮೇಲಿನ ಅಭಿಮಾನವನ್ನು ಅಭಿವ್ಯಕ್ತಿಗೊಳಿಸುತ್ತಿದ್ದಾರೆ. ಪತಿ ಗಣೇಶ ಪ್ರಸಾದ್ ಮತ್ತು ಪುತ್ರಿ ಆಕಾಂಕ್ಷಾಳ ಜೊತೆ ಸಂತೃಪ್ತ ಜೀವನ ನಡೆಸುತ್ತಾ ತಮ್ಮ ವಿಶಿಷ್ಟ ಸಾಧನೆಯನ್ನು ಮುಂದುವರಿಸಿದ್ದಾರೆ.