ಸಾಗರ | ಕವಿ ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ‘ ಗುರುಪಾದಪದ್ಮ ಕವನ ಸರಣಿ – 10 ‘
ಸಾಗರವೇ ಶಿವ ಪಾಗರವೇ ಸಗರನ ನಗರವೇ ಭೂಶಿಕ | ಸಾಹಸಿಗೆ ಸುಲಭ ಸಹಜವು ಕಠಣವು ಸಂಸಾರ ಸಾಗರ || ಸಾಗರದಲೆಗಳು ಬಡಿದೆಬ್ಬಿಸುತಲಿವೆ ಹಳೆನೆನಪಿನ ಮಹಪೂರ | ವಿಶಾಲವಾದ ಅಂಬರದಾಚಿನ ಮೊಳೆಯುವ ನವಯುಗ ಚಿತ್ತಾರ || ಸೂರ್ಯರಶ್ಮಿಯು ಮೆಲುಕಾಡುತಲಿದೆ ಹೃದಯಂಗಳದ ಮಂಗಳ | ಚಂದಿರನ ಹೂನಗೆ ಮಲ್ಲಿಗೆ ತೆರದಲೆ ಸೆಳೆದೋಡಿವೆ ಕಂಗಳ || ಸಾಗರದೊಳು ಒಳಹುದುಗಿವೆ ಏನೋ ಹೊಳಹೊಳಪ ವಜ್ರಗಳು | ಹುಡುಕಾಡುತ ಒಳ ಒಳ ಹೋದರೆ ಮಿನುಗುವ ಮುತ್ತು ರತ್ನಗಳು...