ಮಳೆಯೆಂಬ ಹಬ್ಬ : ಖುಷಿಯೂ-ಸಿಹಿಯೂ ತರುವ ಯುಗಾದಿಯಂತೆ- ಕಹಳೆ ನ್ಯೂಸ್
ಪ್ರತೀ ವರ್ಷ ಬರುತ್ತದೀ ಸಂತಸ ತರುವ ಮಳೆ. ರವಿಯ ಕ್ರೋದಕ್ಕೆ ಬಳಲಿ ಬೆಂಡಾಗಿದ್ದ ಇಳೆಗೆ ತಂಪು ಪಾನಿಯವನ್ನಿತ್ತು ಖುಷಿಯ ತರುತ್ತದೆ. ತೃಷೆಗೆ ಕಂದು ಬಣ್ಣಕ್ಕೆ ಬದಲಾಗಿದ್ದ ಗಿಡ ಮರದೆಲೆಗಳು ಮುತ್ತಿನ ಹನಿಯ ಚುಂಬನದಿಂದ ಹಸಿರಾಗಿ ನವಿಲಂತೆ ನಾಟ್ಯವಾಡಲು ಸಿದ್ದವಾಗಿದೆ. ಇತ್ತ ಮಳೆಯೇ ದೇವರೆಂದಿದ್ದ ಕರ್ಮಯೋಗಿ ನಾಟಿ ಮಾಡಲು ತಲೆಗೆ ಮುಂಡಾಸು ಸುತ್ತಿ ತಯಾರಾಗಿ ನಿಂತಿದ್ದಾನೆ. ಈಜಲು ನೀರಿಲ್ಲದೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವೆನೇನೋ ಎಂದು ಕಣ್ಹನಿ ಸುರಿಸುತ್ತಿದ್ದ ಮೀನು ಮರಳಿ ಸಹಜ...