ಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷ ಆಪತ್ಕಾಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಹೇಗೆ ಆಚರಿಸುವುದು ? – ಕಹಳೆ ನ್ಯೂಸ್
ಪ್ರತಿ ವರ್ಷ ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬಹಳ ವಿಜೃಂಭಣೆಯಿ0ದ ಆಚರಿಸಲಾಗುತ್ತದೆ. ಆದರೆ ಈ ವರ್ಷ ಕೋರೋನಾ ಮಹಾಮಾರಿಯಿಂದ ಬಂದೆರಗಿರುವ ಆಪತ್ಕಾಲದಲ್ಲಿ ಒಟ್ಟಿಗೆ ಸೇರುವುದು ಸಮಂಜಸವಲ್ಲ. ಆದುದರಿಂದ ನಾವೆಲ್ಲರೂ ನಮ್ಮ ಮನೆಯಲ್ಲೇ ಇದ್ದು ಭಕ್ತಿ ಭಾವದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಹೇಗೆ ಆಚರಿಸಬಹುದು ಎಂದು ನೋಡೋಣ. 1. ಶ್ರೀಕೃಷ್ಣನಿಗೆ ಯಾವ ಸಮಯದಲ್ಲಿ ಪೂಜೆ ಮಾಡಬೇಡು ? ಶ್ರೀಕೃಷ್ಣನ ಜನ್ಮವು ಮಧ್ಯರಾತ್ರಿ 12 ಗಂಟೆಗೆ ಆಯಿತು. ಆದುದರಿಂದ ಅದಕ್ಕಿಂತ ಮೊದಲೇ ಪೂಜೆಯ...