"ಅಮ್ಮ'' ಈ ಶಬ್ಧ ಬರಿ ಬಾಯಿಮಾತಿಗಲ್ಲ. ಕೇಳಿದರೆ ಅತ್ಯಂತ ಹೆಚ್ಚು ಖುಷಿ ಕೊಡುವ, ಮುದ ನೀಡುವ, ಅತೀ ಸಂತೋಷಕಾರಿಯಾದ, ವರ್ಣಿಸಲಾಗದಂತಹ ಪದವೆಂದರೆ ತಪ್ಪಾಗಲಾರದು. ಸಮಾಜದಲ್ಲಿ ಯಾರನ್ನು ಹೆಚ್ಚು ಪ್ರೀತಿಸುತ್ತೀರಿ ಎಂದು ಕೇಳಿದರೆ ಎಲ್ಲರೂ ಸಾಮಾನ್ಯವಾಗಿ ಅಮ್ಮ ಅಂತಾನೆ ಹೇಳುತ್ತಾರೆ. ಇದು ಸಹಜ ಕೂಡ. ಅಮ್ಮ ತನಗೆ ಎಷ್ಟು ಮಕ್ಕಳಿದ್ದರೂ ಕೂಡ ಅವರನ್ನು ಸಮಾನವಾಗಿ ನೋಡುತ್ತಾಳೆ. ಮಕ್ಕಳಿಗೆ ಒಳ್ಳೆ ಸಂಸ್ಕಾರ ಒಳ್ಳೆಯ ವಿಚಾರಗಳನ್ನು ತಿಳಿಸುವಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿರುತ್ತದೆ. ಅದು ಅವಳ...
ಅಮ್ಮ...... ನನ್ನ ಪುಟ್ಟ ಪ್ರಪಂಚದ ಮುದ್ದು ದೇವತೆ. ಆಕೆಯ ಆ ಮಡಿಲ ಬಿಸಿ ಅಪ್ಪುಗೆ ವಿವರಣೆಗೆ ಮೀರಿದ್ದಾಗಿದೆ. ನಾ ಅತ್ತಾಗ ತನ್ನ ಕಣ್ಣಲ್ಲೂ ಹನಿ ನೀರನ್ನ ತುಂಬಿಕೊಂಡವಳು. ನನ್ನ ತುಂಟಾಟವನ್ನ ಸಹಿಸಿಕೊಂಡು, ನಾ ಗುಮ್ಮ ಬಂತೆಂದು ಭಯ ಪಟ್ಟಾಗ ಹೆಗಲಲ್ಲಿ ಬಚ್ಚಿಟ್ಟು ಆಸರೆ ನೀಡಿದವಳು. ತುಂಟ ಮಾತುಗಳಿಂದ ಮುಖದಲ್ಲಿ ನಗುತರಿಸಿದ ಪ್ರೀತಿಯ ಜೀವ. ಪ್ರತಿ ಹೆಜ್ಜೆಯಲ್ಲಿಯು ನನ್ನೊಂದಿಗೆ ಜೊತೆಯಾಗಿ ಮುನ್ನಡೆಯುವ ಭರವಸೆಯ ಬೆಳಕು ಆಕೆ ಅವಳೆ ನನ್ನಾಕೆ ನನ್ನಮ್ಮ. ಕಂದನ...
ಸಿಂಹವನ್ನ ಸದಾ ಕೆದಕುತ್ತಾ ಇದ್ದರು ಸುಮ್ಮನೆ ಮಲಗಿದೆ ಅಂದರೆ ಅದಕ್ಕೆ ಭೇಟೆಯಾಡೋ ತಾಕತ್ತಿಲ್ಲ ಅಂತಲ್ಲ, ಹಾಗಂತ ಅಂದುಕೊಂಡರೆ ಅದಕ್ಕಿಂತ ಮುಠ್ಠಾಳ ಇನ್ನೊಬ್ಬನಿರೋದಿಲ್ಲ, ಎಲ್ಲವನ್ನು ಸಹಿಸಿಕೊಂಡು ಮುಷ್ಠಿ ಬಿಗಿ ಹಿಡಿದು ಒಮ್ಮೆಲೆ ಎದ್ದು ನಿಂತರೆ ಹಿಂಡೆ ಹಿಪ್ಪೆಯಾಗಿಸೋ ತಾಕಾತ್ತು ಈ ಸಿಂಹಕ್ಕಿದೆ. ಹಾಗೇ ನಮ್ಮ ಭಾರತಾಂಬೆಯ ಪುಣ್ಯದ ನೆಲದಲ್ಲಿ ಉಗ್ರರು ಅಟ್ಟಹಾಸ ಮೆರೆದರು, ಭಾರತ ಸುಮ್ಮನಿದೆ ಅಂದುಕೊಂಡು ಕಾಲು ಕೆರೆದುಕೊಂಡು ನಮ್ಮ ವೀರಸಿಂಹಗಳು ಸುದ್ದಿಗೆ ಬಂದರೆ ಉಗ್ರರ ಹೊಟ್ಟೆ ಬಗೆದು ಕರಳು...
" ವಿದ್ಯಾರ್ಥಿಗಳ ಉಜ್ವಲ ಭವಿಷ್ಯದೆಡೆಗೆ " ಡಿ.ವಿ.ಜಿ.ಯವರ ‘ಮಂಕುತಿಮ್ಮನ ಕಗ್ಗ’ದ ‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎಂಬ ಸಾಲಿನಂತೆ ಗ್ರಾಮೀಣ ಮತ್ತು ಹಿಂದುಳಿದ ತಾಲೂಕುಗಳ ವಿದಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ಹಿರಿಯರ ಆಶಯ ಹಾಗೂ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ, ಕಂಪ್ಯೂಟರ್ ಶಿಕ್ಷಣ, ಸಂಸ್ಕøತಿ-ದೇಶಪ್ರೇಮ ಬೆಳೆಸುವ ವಾತಾವರಣ ಮೊದಲಾದ ಹೊಸತನಗಳನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿರುವ ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜು, ಮೌಲ್ಯಾಧರಿತ...
ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ಜಗತ್ತಿನ ಅತಿ ದೊಡ್ಡ ಸ್ವಯಂಸೇವಾ ಸಂಘಟನೆಯೆಂದೇ ಕರೆಯಲ್ಪಡುತ್ತದೆ. ತನ್ನ ಸೇವಾ ಕಾರ್ಯಗಳಿಂದಲೇ ಕೋಟ್ಯಾಂತರ ಜನ ಸ್ವಯಂಸೇವಕರನ್ನ ಹೊಂದಿರುವ ಆರೆಸ್ಸೆಸ್ ದೇಶಕ್ಕೆ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಕೊಡುಗೆಯನ್ನ ನೀಡಿದೆ. 1925 ರಲ್ಲಿ ಕೇಶವ ಬಲಿರಾಮ್ ಹೆಡಗೆವಾರರಿಂದ ಸ್ಥಾಪಿತವಾದ ಆರೆಸ್ಸೆಸ್ ಈಗ ಇಡೀ ಜಗತ್ತಿನಾದ್ಯಂತ ತನ್ನ ಶಾಖೆಗಳನ್ನ ಹೊಂದಿದೆ. ಆರಸ್ಸೆಸ್ ಎಂದರೆ ದೇಶಭಕ್ತಿ, ರಾಷ್ಟ್ರಭಕ್ತಿ, ಹಿಂದುತ್ವದ ಬಗ್ಗೆ ಅಪಾರ ಕಾಳಜಿಯುಳ್ಳ ಹಾಗು ಸಾಮಾಜಿಕ ಸಂಘಟನೆಯೆಂಬುದು ಪ್ರತಿಯೊಬ್ಬರಿಗೂ ಗೊತ್ತಿರುವ...
ಆರೋಗ್ಯದ ಕಾಳಜಿ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಏಪ್ರಿಲ್ 7 ರಂದು 'ವಿಶ್ವ ಆರೋಗ್ಯ ದಿನ'ವೆಂದು ಆಚರಿಸುತ್ತದೆ. ಸಾರ್ವಜನಿಕರಿಗೆ ಆರೋಗ್ಯ ಮತ್ತು ಹಲವಾರು ಕೆಡುಕುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ನೈರ್ಮಲ್ಯ ಯುಕ್ತ ಸಮಾಜಕ್ಕೆ ಅಗತ್ಯವಾದ ಸ್ವಚ್ಛತಾ ಅಭ್ಯಾಸಗಳು ನೀರಿನ ಸಂರಕ್ಷಣೆ ಪರಿಸರ ಸ್ವಚ್ಛತೆ ಹಾಗೂ ಸೂಕ್ತ ಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿಗಳು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಬಿತ್ತನೆ ಮಾಡಲಾಗುತ್ತದೆ. ...