Recent Posts

Sunday, April 27, 2025

ಕ್ರೀಡೆ

ಕ್ರೀಡೆ

ರಾಜ್ಯ ಅಮೇಚೂರ್ ಅಥ್ಲೆಟಿಕ್ಸ್ ನಲ್ಲಿ ಸಂತ ಫಿಲೋಮಿನಾಕ್ಕೆ 5 ಪದಕಗಳು – ಕಹಳೆ ನ್ಯೂಸ್

ಪುತ್ತೂರು: ಉಡುಪಿ ಜಿಲ್ಲಾ ಅಮೇಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಮತ್ತು ಕರ್ನಾಟಕ ರಾಜ್ಯ ಅಮೇಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಇವುಗಳ ಜಂಟಿ ಆಶ್ರಯದಲ್ಲಿ ಉಡುಪಿಯ ಅಜ್ಜರಕಾಡಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರಗಿದ ರಾಜ್ಯ ಜೂನಿಯರ್ ಅಮೇಚೂರ್ ಅಥ್ಲೆಟಿಕ್ ಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಪುತ್ತೂರಿನ ಸಂತ ಫಿಲೋಮಿನಾದ ವಿದ್ಯಾಥಿಗಳು ಒಟ್ಟು ಐದು ಪದಕಗಳನ್ನು ಜಯಿಸಿರುತ್ತಾರೆ. 20 ವರ್ಷದ ಒಳಗಿನ ವಯೋಮಿತಿಯಲ್ಲಿ ಪ್ರಥಮ ಕಲಾ ವಿಭಾಗದ ದೀಕ್ಷಿತ್ ಎಮ್ ಇವರು 10,000...
ಕ್ರೀಡೆ

ಎಂ.ಎಸ್ ಧೋನಿ ದಾಖಲೆ ಧೂಳಿಪಟ ಮಾಡುವ ಸನಿಹದಲ್ಲಿ ವಿರಾಟ್ ಕೊಹ್ಲಿ – ಕಹಳೆ ನ್ಯೂಸ್

ನವದೆಹಲಿ: ಕ್ರಿಕೆಟ್ ಇತಿಹಾಸದಲ್ಲಿನ ಹಲವು ದಾಖಲೆಗಳನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುರಿದು ನೂತನ ದಾಖಲೆಗಳನ್ನು ನಿರ್ಮಿಸುತ್ತಿದ್ದು ಇದೀಗ ಮಾಜಿ ನಾಯಕ ಎಂ.ಎಸ್ ಧೋನಿ ದಾಖಲೆ ಸರಿಗಟ್ಟುವ ಸನಿಹದಲ್ಲಿದ್ದಾರೆ. ಟೆಸ್ಟ್ ತಂಡದ ನಾಯಕನಾಗಿ ಎಂ.ಎಸ್ ಧೋನಿ 60 ಪಂದ್ಯಗಳಲ್ಲಿ 27 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರು. ಈ ದಾಖಲೆಯನ್ನು ಕೊಹ್ಲಿ ಮುರಿಯಲಿದ್ದಾರೆ. ಸದ್ಯ 30 ವರ್ಷದ ವಿರಾಟ್ ಕೊಹ್ಲಿ 46 ಪಂದ್ಯಗಳಲ್ಲೇ 26 ಪಂದ್ಯಗಳಲ್ಲಿ ಗೆಲುವು ಸಾಧಿಸಿ ದಾಖಲೆಯ ಸನಿಹದಲ್ಲಿದ್ದಾರೆ....
ಕ್ರೀಡೆ

15 ದಿನಗಳ ಸೇನಾ ಸೇವೆ ಪೂರೈಸಿ ಮನೆಗೆ ಮರಳಿದ ಧೋನಿ – ಕಹಳೆ ನ್ಯೂಸ್

ಲೇಹ್: ಪ್ಯಾರಾ ರೆಜಿಮೆಂಟ್‍ನಲ್ಲಿ ಸೇವೆ ಸಲ್ಲಿಸಲು ತೆರಳಿದ್ದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅದನ್ನು ಯಶಸ್ವಿಯಾಗಿ ಪೂರೈಸಿ ವಾಪಸ್ಸು ಬಂದಿದ್ದಾರೆ. ದೆಹಲಿಗೆ ತೆರಳುವ ಸಂದರ್ಭದಲ್ಲಿ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಹೊಂದಿರುವ ಧೋನಿ, ಲಡಾಖ್‍ನ ಲೇಹ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಧೋನಿ ಭಾರತೀಯ ಸೇನೆಯ 106 ಟಿಎ ಪ್ಯಾರಾ ಬೆಟಾಲಿಯನ್‍ನಲ್ಲಿ 15 ದಿನಗಳ ಕಾಲ ಸೇವೆ ಸಲ್ಲಿಸಿದರು. ಜುಲೈ 30ರಿಂದ ಸೇನಾ ಬೆಟಾಲಿಯನ್ ತರಬೇತಿ ಪಡೆಯುವ...
ಕ್ರೀಡೆ

ಕೊಹ್ಲಿ ಶತಕ, ಅಯ್ಯರ್ ಆಕರ್ಷಕ ಅರ್ಧಶತಕದೊಂದಿಗೆ ಭಾರತಕ್ಕೆ ಜಯ – ಕಹಳೆ ನ್ಯೂಸ್

ಪೋರ್ಟ್ ಆಫ್ ಸ್ಪೇನ್ : ನಾಯಕ ವಿರಾಟ್ ಕೊಹ್ಲಿ ಅವರ ಆಕರ್ಷಕ ಶತಕ (114 ) ಹಾಗೂ ಯುವ ಭರವಸೆಯ ಆಟಗಾರ ಶ್ರೇಯಸ್ ಅಯ್ಯರ್ ಅವರ 65 ರನ್‍ಗಳ ನೆರವಿಂದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲೂ ಮಳೆಯಿಂದಾಗಿ ಡಕ್ವರ್ತ್ ಲೂವಿಸ್ ನಿಯಮದಡಿಯಲ್ಲಿ ಆರು ವಿಕೆಟ್‍ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ಸರಣಿಯನ್ನು...
ಕ್ರೀಡೆ

ಆಲ್ ಇಂಡಿಯಾ ಹಾಕಿ: ಕರ್ನಾಟಕಕ್ಕೆ ಗೆಲುವು – ಕಹಳೆ ನ್ಯೂಸ್

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಕಪ್, ಆಲ್ ಇಂಡಿಯಾ ಹಾಕಿ ಟೂರ್ನಿಯಲ್ಲಿ ನಾಯಕ ನಿಕ್ಕಿನ್ ತಿಮ್ಮಯ್ಯ ನೇತೃತ್ವದ ಕರ್ನಾಟಕ ಹಾಕಿ ತಂಡ ಮೊದಲ ಗೆಲುವು ಸಾಧಿಸಿದೆ. ಸೋಮವಾರ ನಡೆದ ಪಂದ್ಯದಲ್ಲಿ ಕರ್ನಾಟಕ, ದೆಹಲಿಯ ಇಂಡಿಯನ್ ಏರ್ ಫೋರ್ಸ್ ತಂಡದ ವಿರುದ್ಧ 2-1 ಗೋಲುಗಳಿಂದ ಜಯ ಪಡೆಯಿತು. ಕರ್ನಾಟಕ ಪರ ನಿಕ್ಕಿನ್, ಸೋಮಯ್ಯ ಕೆ.ಪಿ. ಗೆಲುವು ಗಳಿಸಿದರು. ಏರ್ ಫೋರ್ಸ್ ಪರ ಆನಂದ್ ಲಾಕ್ರಾ  58ನೇ ನಿಮಿಷದಲ್ಲಿ ಗೋಲು ಬಾರಿಸಿ ಸೋಲಿನ...
ಕ್ರೀಡೆ

ಭಾರತ ಕ್ರಿಕೆಟ್ ತಂಡದ ಕೋಚ್: ಅಂತಿಮ ರೇಸ್‍ನಲ್ಲಿ ಆರು ಮಂದಿ – ಕಹಳೆ ನ್ಯೂಸ್

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಹುದ್ದೆಗೆ ಹಾಲಿ ಕೋಚ್ ರವಿಶಾಸ್ತ್ರಿ ಸೇರಿದಂತೆ ಆರು ಮಂದಿಯ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ನ್ಯೂಝಿಲೆಂಡ್‍ನ ಕೋಚ್ ಮೈಕ್ ಹಸ್ಸನ್, ಆಸ್ಟ್ರೇಲಿಯಾದ ಮಾಜಿ ಆಲ್‍ರೌಂಡರ್ ಮತ್ತು ಶ್ರೀಲಂಕಾ ಕೋಚ್ ಟಾಮ್ ಮೂಡಿ, ವೆಸ್ಟ್ಇಂಡೀಸ್‍ನ ಮಾಜಿ ಆಲ್‍ರೌಂಡರ್ ಹಾಗೂ ಅಪ್ಘಾನಿಸ್ತಾನ ಕೋಚ್ ಫಿಲ್ ಸಿಮನ್ಸ್, ಭಾರತ ತಂಡದ ಮಾಜಿ ವ್ಯವಸ್ಥಾಪಕ ಲಾಲ್‍ಚಂದ್ ರಜಪೂತ್, ಭಾರತ ತಂಡದ ಮಾಜಿ ಫೀಲ್ಡಿಂಗ್ ಕೋಚ್ ರಾಬಿನ್ ಸಿಂಗ್ ರೇಸ್‍ನಲ್ಲಿರುವ...
ಕ್ರೀಡೆ

ಅಂತಿಮ ಟಿ20: ಭಾರತಕ್ಕೆ ಏಳು ವಿಕೆಟ್ ಭರ್ಜರಿ ಜಯ, ಸರಣಿ ಕ್ಲೀನ್ ಸ್ವೀಪ್ – ಕಹಳೆ ನ್ಯೂಸ್

ಗಯಾನ: ಮಂಗಳವಾರ ಭಾರತ-ವೆಸ್ಟ್ ಇಂಡೀಸ್ ನಡುವೆ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಭಾರತ ಏಳು ವಿಕೆಟ್‍ಗಳಿಂದ ಗೆದ್ದಿದ್ದು ಸರಣಿಯನ್ನು 3-0 ಇಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ವಿಂಡೀಸ್ ನೀಡಿದ್ದ 147 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (59) ಹಾಗೂ ರಿಷಬ್ ಪಂತ್ (65) ಅವರ ಅದ್ಭುತ ಆಟದಿಂದ 19.1 ಓವರ್‍ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತ್ತು. ಕೊಹ್ಲಿ 37...
ಕ್ರೀಡೆ

ವಿಂಡೀಸ್ ವಿರುದ್ಧ ಮೊದಲ ಟಿ20: ಭಾರತಕ್ಕೆ 4 ವಿಕೆಟ್ ಭರ್ಜರಿ ಜಯ – ಕಹಳೆ ನ್ಯೂಸ್

ಫ್ಲೋರಿಡಾ: ಭಾರತ-ವೆಸ್ಟ್ ಇಂಡೀಸ್ ನಡುವಣ ಮೊದಲ ಟಿ20ನಲ್ಲಿ ಟೀಂ ಇಂಡಿಯಾ ನಾಲ್ಕು ವಿಕೆಟ್ ಗಳ ಗೆಲುವು ಸಾಧಿಸಿದೆ. ವಿಂಡೀಸ್ ಪಡೆ ಒಡ್ಡಿದ್ದ 96 ರನ್‍ಗಳ ಸುಲಭ ಗುರಿಯನ್ನು ಬೆನ್ನತ್ತಿದ ಭಾರತ 17.2 ಓವರ್‍ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದಂತಾಗಿದೆ. ಟೀಂ ಇಂಡಿಯಾ ಪರ ಖರ್ ಧವನ್ (1), ರೋಹಿತ್ ಶರ್ಮಾ(24), ನಾಯಕ ವಿರಾಟ್ ಕೊಹ್ಲಿ...
1 18 19 20 21 22 31
Page 20 of 31
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ