ಸ್ಪೀಡ್ ಬೌಲಿಂಗ್‍ಗೆ ಬ್ಯಾಟ್ಸ್ ಮ್ಯಾನ್ ದವಡೆಯಿಂದ ಚಿಮ್ಮಿದ ರಕ್ತ; ಕ್ರಿಕೆಟ್ ಮೈದಾನದಲ್ಲಿ ಅವಘಡ – ಕಹಳೆ ನ್ಯೂಸ್
ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ ಅಲೆಕ್ಸ್ ಕ್ಯಾರಿ ಅವರು ಸ್ಪೀಡ್ ಬೌಲಿಂಗ್ ದಾಳಿಗೆ ಗಾಯಗೊಂಡಿರುವ ಘಟನೆ ನಡೆದಿದೆ. ಬರ್ಮಿಂಗ್ ಹ್ಯಾಮ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಂಗ್ಲೆಂಡ್ ನ ವೇಗಿ ಜೋಫ್ರಾ ಆರ್ಚರ್ ಎಸೆದ ಮಾರಕ ಚೆಂಡು ಕ್ಯಾರಿ ಮುಖಕ್ಕೆ ಬಡಿದ ಘಟನೆ ನಡೆಯಿತು. ಈ ವೇಳೆ ಕ್ಯಾರಿ ತಲೆಗೆ ಹಾಕಿದ್ದ ಹೆಲ್ಮೆಟ್ ಕಿತ್ತು ಬಂದಿತ್ತು. ಆರ್ಚರ್ 139 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಚೆಂಡನ್ನು...