Monday, January 20, 2025

ಕ್ರೀಡೆ

ಕ್ರೀಡೆಸುದ್ದಿ

ಶಿಖರ್ ಧವನ್ ಸ್ಥಾನಕ್ಕೆ ಯುವ ಕ್ರಿಕೆಟಿಗ ರಿಷಭ್ ಪಂತ್ ಆಯ್ಕೆ ಅಂತಿಮ – ಕಹಳೆ ನ್ಯೂಸ್

ಗಾಯಾಳುವಾಗಿ ಮೂರು ಪಂದ್ಯಗಳಿಗೆ ಅಲಭ್ಯರಿರುವ ಸ್ಫೋಟಕ ಆರಂಭಿಕ ಬ್ಯಾಟ್ಸ್‍ಮನ್ ಶಿಖರ್ ಧವನ್ ಅವರಿಗೆ ಬದಲಿಯಾಗಿ 21ರ ಹರೆಯದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‍ಮನ್ ರಿಷಭ್ ಪಂತ್ ಭಾರತೀಯ ವಿಶ್ವಕಪ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಪಂತ್ ಅವರು ಕಳೆದೊಂದು ವರ್ಷದಿಂದ ಅತ್ಯುತ್ತಮ ಪಾರ್ಮ್‍ನಲ್ಲಿದ್ದ ಹೊರತಾಗಿಯೂ ವಿಶ್ವ ಕಪ್ ತಂಡದಿಂದ ಅವರನ್ನು ಕೈಬಿಟ್ಟದ್ದು ಭಾರೀ ಚರ್ಚೆ, ಟೀಕೆಗೆ ಕಾರಣವಾಗಿತ್ತು.ಇದೀಗ ಧವನ್ ಬದಲಿಗೆ ಪಂತ್‍ಗೆ ವಿಶ್ವಕಪ್ ಆಡಲು ಅವಕಾಶ ಸಿಕ್ಕಿರುವುದು ಪಂತ್ ಮತ್ತು ಅವರ ಅಭಿಮಾನಿಗಳಲ್ಲಿ...
ಕ್ರೀಡೆಸುದ್ದಿ

ಶಿಖರ್ ಧವನ್ ಮೂರು ವಾರ ವಿಶ್ವಕಪ್ ಆಡುವಂತಿಲ್ಲ!!- ಕಹಳೆ ನ್ಯೂಸ್

ಭಾರತ ಕ್ರಿಕೆಟ್ ತಂಡ ಮತ್ತು ಅಭಿಮಾನಿಗಳಿಗೆ ಭಾರೀ ಆಘಾತ ಎನ್ನುವಂತೆ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಗಾಯಾಳಾಗಿ ತಂಡದಿಂದ ಹೊರ ಬಿದ್ದಿದ್ದಾರೆ. ಭಾನುವಾರ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದ ಪಂದ್ಯದ ವೇಳೆ ಧವನ್ ಗಾಯಗೊಂಡಿದ್ದರು. ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಅವರು 117 ರನ್‍ಗಳಿಸಿ ಗೆಲುವಿನಲ್ಲಿ ಮಹತ್ವದ ಕೊಡುಗೆ ಸಲ್ಲಿಸಿದ್ದರು. ಧವನ್ ಅವರ ಹೆಬ್ಬೆರಳಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಮೂವರು ವಾರಗಳ ವಿಶ್ರಾಂತಿ ಅಗತ್ಯವಿರುವ ಹಿನ್ನಲೆಯಲ್ಲಿ ಆಡುವ...
ಕ್ರೀಡೆಸುದ್ದಿ

ಈ ಬಾರಿಯ ವಿಶ್ವಕಪ್ ಗೆದ್ದೇ ಗೆಲ್ತೀವಿ, ಅದನ್ನು ಭಾರತೀಯ ಯೋಧರಿಗೆ ಅರ್ಪಣೆ ಮಾಡ್ತೀವಿ: ವಿರಾಟ್ ಕೊಹ್ಲಿ

ಈ ಬಾರಿಯ ವಿಶ್ವಕಪ್ ನಾವು ಗೆದ್ದೇ ಗೆಲ್ತೀವಿ, ಇದನ್ನು ಭಾರತೀಯ ಯೋಧರಿಗೆ ಅರ್ಪಣೆ ಮಾಡ್ತೀವಿ ಅಂತಾ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ. ನಿನ್ನೆ ಭಾರತ ತಂಡದ ನಾಯಕ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡಿದ ಕೊಹ್ಲಿ, ಭಾರತದ ಯೋಧರಿಗಾಗಿ ನಾವು ಈ ಬಾರಿಯ ವಿಶ್ವಕಪ್‌ ಗೆಲ್ಲುತ್ತೇವೆ. ಇಂತಹ ಸಾಧನೆ ಮಾಡಲು ನಮಗೆ ಹಲವು ರೀತಿ ಸ್ಫೂರ್ತಿ ಸಿಗಬಹುದು. ಕೆಲವರು ತಮ್ಮ ಕುಟುಂಬದಿಂದ ಸ್ಫೂರ್ತಿ...
ಕ್ರೀಡೆಸುದ್ದಿ

ನಿವೃತ್ತಿಯಾಗಲು ಯುವರಾಜ್‍ಸಿಂಗ್ ಯೋಚನೆ!? – ಕಹಳೆ ನ್ಯೂಸ್

ಭಾರತದ ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸುವ ಯೋಜನೆಯಲ್ಲಿದ್ದಾರೆ ಎಂಬ ಸುದ್ದಿ ಈಗ ಹರಿದಾಡಲು ಆರಂಭವಾಗಿದೆ. ಆದರೆ ಈ ಬಗೆಗಿನ ಪ್ರಶ್ನೆಗೆ ಉತ್ತರಿಸಲು ಯುವರಾಜ್‍ಸಿಂಗ್ ಲಭ್ಯರಾಗಿಲ್ಲ. ಪ್ರಾಂಚೈಸಿಗಳು ಹೊಂದಿರುವ ಲೀಗ್‍ಗಳಲ್ಲಿ ಮುಂದುವರೆಯುವುದು ಅವರ ಯೋಜನೆ ಎನ್ನಲಾಗಿದೆ. ಯುವರಾಜ್ ಕೆಲವರಲ್ಲಿ ತಮ್ಮ ನಿವೃತ್ತಿ ಕುರಿತು ಅನೌಪಚಾರಿಕವಾಗಿ ಹೇಳಿಕೊಂಡಿದ್ದಾರೆ ಇದನ್ನು ಅವರು ಅಧಿಕೃತವಾಗಿ ಪ್ರಕಟಿಸಲೂಬಹುದು ಎಂದು ಬಿಸಿಸಿಐ ಅಧಿಕಾರಿಯೋಬ್ಬರು ಹೇಳಿದ್ದಾರೆ. 2011ರ ವಿಶ್ವಕಪ್ ವಿಜೇತ ಭಾರತ ತಂಡದ ಹೀರೋ...
ಕ್ರೀಡೆಸುದ್ದಿ

ಧೋನಿ ಇದ್ದರೆ 2023ರ ವಿಶ್ವಕಪ್‌ಗೆ ಕಮ್ ಬ್ಯಾಕ್ ಮಾಡುತ್ತೇನೆ: ಎಬಿಡಿ – ಕಹಳೆ ನ್ಯೂಸ್

ಬೆಂಗಳೂರು: ಅದಾಗಲೇ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರು ಎಂಎಸ್ ಧೋನಿ ಇದ್ದರೆ ನಾನು 2023ರ ವಿಶ್ವಕಪ್‌ಗೆ ಕಮ್ ಬ್ಯಾಕ್ ಮಾಡುತ್ತೇನೆ ಎಂದು ಹೇಳಿದ್ದಾರೆ. ನಿವೃತ್ತಿ ಘೋಷಣೆ ವೇಳೆ ನನಗೆ 2019ರ ವಿಶ್ವಕಪ್ ಆಡುವ ಆಸೆ ಇತ್ತು. ಆದರೆ 2023ರ ವಿಶ್ವಕಪ್‌ಗೆ ಬೇಕಾದರೆ ಕಮ್ ಬ್ಯಾಕ್ ಮಾಡುತ್ತೇನೆ. ಆದರೆ ಈ ವೇಳೆ ಧೋನಿ ಕೂಡ ಇರಬೇಕು ಎಂದಿದ್ದಾರೆ. ಆ ಮೂಲಕ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ...
ಕ್ರೀಡೆಸುದ್ದಿ

ಮಗನ ಆಟ ಮಿಸ್ ಮಾಡಿಕೊಂಡ ಹೆತ್ತವರು ಸಿನೆಮಾ ನೋಡಲು ಹೋಗಿದ್ದರಂತೆ..!- ಕಹಳೆ ನ್ಯೂಸ್

ಮುಂಬೈ: ಟೀಂ ಇಂಡಿಯಾ ಕಂಡಂತಹ ಅದ್ಭುತ ಫೀಲ್ಡರ್ ಗಳಲ್ಲಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕೂಡ ಒಬ್ಬರು. ಕ್ರಿಕೆಟ್ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಕೈಫ್‍ಗೆ ಆ ಒಂದು ಘಟನೆಯನ್ನು ಮಾತ್ರ ಇನ್ನೂ ಮರೆಯಲು ಸಾಧ್ಯವಾಗುತ್ತಿಲ್ಲವಂತೆ. 2002 ರಲ್ಲಿ ಕ್ರಿಕೆಟ್ ಕಾಶಿ ಲಾಡ್ರ್ಸ್‍ನಲ್ಲಿ ಇಂಗ್ಲೆಂಡ್ ವಿರುದ್ಧದ ನಾರ್ಥ್ ವೆಸ್ಟ್ ಸರಣಿಯಲ್ಲಿ ಅಂದಿನ ಕ್ಯಾಪ್ಟನ್ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಗೆಲುವನ್ನು ಸಂಭ್ರಮಿಸಿದ್ದು ಎಲ್ಲರಿಗೂ ಗೊತ್ತಿರೋದೆ. ಆದ್ರೆ ಆ ಪಂದ್ಯದಲ್ಲಿ...
ಕ್ರೀಡೆಸುದ್ದಿ

ಮಹಿಳೆಯರ ಐಪಿಎಲ್‍ನಲ್ಲಿ ಲೇಡಿ ಧೋನಿಯ ಕಮಾಲ್ – ಕಹಳೆ ನ್ಯೂಸ್

ಜೈಪುರ: ನಿನ್ನೆ ಜೈಪುರದಲ್ಲಿ ನಡೆದ ಲೇಡಿಸ್ ಸ್ಪೆಷಲ್ ಐಪಿಎಲ್ ಕ್ರಿಕೆಟ್ ಫೈನಲ್‍ನಲ್ಲಿ ಮಿಥಾಲಿ ರಾಜ್ ನೇತೃತ್ವದ ವೆಲೋಸಿಟಿ ಟೀಂ ವಿರುದ್ಧ ಸೂಪರ್ ನೋವಾಸ್ ತಂಡ ಭರ್ಜರಿ ಜಯ ದಾಖಲಿಸಿದೆ. ಕ್ಯಾಪ್ಟನ್ ಹರ್ಮನ್‍ಪ್ರೀತ್ 37 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ಸಮೇತ 51ರನ್ ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದ್ರು. ಸೀನಿಯರ್ ಮಿಥಾಲಿ ರಾಜ್‍ಗೆ ಟಕ್ಕರ್ ಕೊಟ್ಟ ಸೂಪರ್ ನೋವಾದ ಹರ್ಮನ್ ಪ್ರೀತ್ ಕೌರ್ ಈ ಪಂದ್ಯ ಮುಗಿಯುತ್ತಲೇ ಲೇಡಿ...
ಕ್ರೀಡೆಸುದ್ದಿ

ಯಾರಾಗಲಿದ್ದಾರೆ 4ನೇ ಬಾರಿ ಐಪಿಎಲ್ ಚಾಂಪಿಯನ್..!?- ಕಹಳೆ ನ್ಯೂಸ್

ಇಂದು ಐಪಿಎಲ್ 2019 ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಈ ಬಾರಿ ಫೈನಲ್‍ನಲ್ಲಿ ಸೆಣೆಸಾಟ ನಡೆಸುತ್ತಿರುವ ತಂಡಗಳು ಸಾಮಾನ್ಯ ತಂಡಗಳಲ್ಲ, ಬದಲಾಗಿ ಬರೋಬ್ಬರಿ 3 ಬಾರಿ ಐಪಿಎಲ್ ಟ್ರೋಫಿ ಎತ್ತಿದೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಉಭಯ ತಂಡಗಳು. ಆದರೆ ಇವರಿಬ್ಬರಲ್ಲಿ ಈ ತಂಡವೇ ಸುಲಭವಾಗಿ ಗೆಲುವು ಸಾಧಿಸಲಿದೆ ಎಂದು ಹೇಳಲು ಅಸಾಧ್ಯ. ಕಾರಣ ಈ ಬಾರಿಯ ಟೂರ್ನಿಮೆಂಟ್ ಆರಂಭದಲ್ಲಿ ಹಲವು ಪಂದ್ಯಗಳನ್ನು ಸೋತು, ಅಂಕ ಪಟ್ಟಿಯಲ್ಲಿ...
1 21 22 23 24 25 30
Page 23 of 30