70ನೇ ವಯಸ್ಸಿನಲ್ಲಿ ಯುವತಿಯ ಸುಖದ ಆಸೆಗೆ ಹೋಗಿ 28 ಲಕ್ಷ ಕಳೆದುಕೊಂಡ ಅಜ್ಜ – ಕಹಳೆ ನ್ಯೂಸ್
ಮುಂಬೈ: ವಿಧವೆಯನ್ನು ಮದುವೆಯಾಗಲು ಯತ್ನಿಸಿ 70 ವರ್ಷದ ವೃದ್ಧರೊಬ್ಬರು 28 ಲಕ್ಷ ಮೌಲ್ಯದ ವಸ್ತುಗಳನ್ನು ಕಳೆದುಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಈ ಘಟನೆ 2019ರ ಅಗಸ್ಟ್ ನಲ್ಲಿ ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ಹಣವನ್ನು ಕಳೆದುಕೊಂಡ ವ್ಯಕ್ತಿಯನ್ನು ಮುಂಬೈನ ಬೊರಿವಾಲಿ ನಿವಾಸಿ ಎಂದು ಗುರುತಿಸಲಾಗಿದೆ. ಮೋಸ ಹೋದೆ ಎಂದು ಮಾನಸಿಕ ಖಿನ್ನತೆಗೆ ಒಳಗಾದ ವೃದ್ಧನಿಗೆ ಇತ್ತೀಚೆಗೆ ಹೃದಯಾಘಾತವಾಗಿದೆ. ಆ ನಂತರ ಈಗ ವೃದ್ಧ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ಈಗ ಬೆಳಕಿಗೆ...