ಕುಡಿತ ಬಿಡುವಂತೆ ಬುದ್ಧಿವಾದ ಹೇಳಿದ ಅಪ್ಪನ ಕೊಂದು ಪರಾರಿಯಾಗಿದ್ದವನ ಸೆರೆ -ಕಹಳೆ ನ್ಯೂಸ್
ಬೆಂಗಳೂರು: ಮದ್ಯ ಸೇವಿಸದಂತೆ ಬುದ್ಧಿವಾದ ಹೇಳಿದ ತಂದೆಯನ್ನೇ ಕಬ್ಬಿಣದ ರಾಡ್‌ನಿಂದ ಹತ್ಯೆಗೈದಿದ್ದ ಪುತ್ರನನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಾಜಿನಗರ 4ನೇ ಬ್ಲಾಕ್ ನಿವಾಸಿ ರಘು (29) ಬಂಧಿತ ಆರೋಪಿ. ಈತ ಜ.10ರಂದು ತಂದೆ ಜಿ.ರಾಮಚಂದ್ರ (59) ಅವರ ಜೊತೆ ಜಗಳ ತೆಗೆದು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು...