ಮಂಗಳೂರಿನಲ್ಲಿ ಮಾದಕ ದ್ರವ್ಯ ಸೇವನೆ ; ಪುತ್ತೂರು ನೂಜಿಬಾಳ್ತಿಲ ಬಾಂತಾಜೆ ನಿವಾಸಿ, ಪದವಿನಂಗಡಿ ನಿವಾಸಿಯ ಬಂಧನ – ಕಹಳೆ ನ್ಯೂಸ್
ಮಂಗಳೂರು, ಡಿ 20 : ಮಾದಕ ದ್ರವ್ಯ ಸೇವನೆ ಮಾಡಿದ ಆರೋಪದ ಮೇರೆಗೆ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಿನ ಪಾಂಡೇಶ್ವರ ಮತ್ತು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪದವಿನಂಗಡಿ ನಿವಾಸಿ ವೈಷ್ಣವ್ (24) ಹಾಗೂ ಪುತ್ತೂರು ನೂಜಿಬಾಳ್ತಿಲ ಬಾಂತಾಜೆ ನಿವಾಸಿ ರಿತೇಶ್ ಪಿ. (22) ಬಂಧಿತ ಆರೋಪಿಗಳು. ಮಾದಕ ದ್ರವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರದ ಕೇಂದ್ರ ಉಪ ವಿಭಾಗದಲ್ಲಿ ರಚಿಸಲ್ಪಟ್ಟ...