ಇಡ್ಯ ಜನತಾ ಕಾಲೋನಿಯ ಮನೆಯೊಂದಕ್ಕೆ ನುಗ್ಗಿ ಕರಿಮಣಿ ಮತ್ತು ಮೊಬೈಲ್ ಕಳವು ಪ್ರಕರಣ ; ಆರೋಪಿ ಕೃಷ್ಣಾಪುರ 7 ನೇ ಬ್ಲಾಕ್ ನಿವಾಸಿ ಅಶ್ರಫ್ ಬಂಧನ – ಕಹಳೆ ನ್ಯೂಸ್
ಮಂಗಳೂರು, ಫೆ 04: ಜನತಾ ಕಾಲೋನಿಯ ಮನೆಯೊಂದಕ್ಕೆ ನುಗ್ಗಿ ಕರಿಮಣಿ ಮತ್ತು ಮೊಬೈಲ್ ಕಳವುಗೈದು ಪರಾರಿಯಾಗಿದ್ದ ಆರೋಪಿಯನ್ನು ಸುರತ್ಕಲ್ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತನನ್ನು ಕಾಟಿಪಳ್ಳದ ಕೃಷ್ಣಾಪುರ 7 ನೇ ಬ್ಲಾಕ್ ನಿವಾಸಿ ಅಶ್ರಫ್ (24) ಎಂದು ಗುರುತಿಸಲಾಗಿದೆ. ಇಡ್ಯ ಗ್ರಾಮದ ಜನತಾ ಕಾಲನಿಯ ಸರಕಾರಿ ಶಾಲೆಯ ಬಳಿಯ ನಿವಾಸಿ ಸುನೀತಾ ಎಂಬವರು ಜ.17ರಂದು ಅಪರಾಹ್ನ 3ರಿಂದ 4:30ರ ಮಧ್ಯೆ ಹೊರಗೆ ಹೋಗಿದ್ದ ವೇಳೆ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಆರೋಪಿ...