ಪುತ್ತೂರಿನಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆಟೋ ಚಾಲಕ ಮಹಮ್ಮದ್ ಸಫ್ಘಾನ್ ; ನೊಂದ ಮಹಿಳೆಯಿಂದ ದೂರು – ಕಹಳೆ ನ್ಯೂಸ್
ಪುತ್ತೂರು, ಮಾ 30 : ಆಟೋ ಚಾಲಕನೊಬ್ಬ ತನ್ನ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಕುಪಿನೋಪಿನಡ್ಕ ನಿವಾಸಿ ಮಹಮ್ಮದ್ ಸಫ್ಘಾನ್ ಅವರು ಪರಿಚಯದ ಮಹಿಳೆಯೊಬ್ಬರನ್ನು ಮಾತನಾಡಲು ಇದೆ ಎಂದು ಹೇಳಿ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋಗಿದ್ದಾನೆ. ದರ್ಬೆ ಹರ್ಷ ಇಲೆಕ್ಟ್ರಾನಿಕ್ಸ್ ಬಳಿ ತಲುಪುತ್ತಿದ್ದಂತೆ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದಾನೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು,ಜೀವ ಬೆದರಿಕೆಯೊಡ್ಡಿದ್ದಾನೆ. ಈ ಘಟನೆ ಕುರಿತು ನೊಂದ ಮಹಿಳೆ ನೀಡಿದ ದೂರಿನಂತೆ ಪುತ್ತೂರು...