Monday, November 25, 2024

ರಾಜ್ಯ

ಕೊಡಗುಮಡಿಕೇರಿರಾಜ್ಯಸುದ್ದಿ

ಕೊಡಗಿನ ರುದ್ರಗುಪ್ಪೆ ಕಾಫಿ ತೋಟದಲ್ಲಿ ಹುಲಿ ಮೃತದೇಹ ಪತ್ತೆ ; ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ, ಪರಿಶೀಲನೆ – ಕಹಳೆ ನ್ಯೂಸ್

ಮಡಿಕೇರಿ (ಜೂ.29): ದಕ್ಷಿಣ ಕೊಡಗಿನ ಬಿಟ್ಟಂಗಾಲ ಸಮೀಪದ 2ನೇ ರುದ್ರಗುಪ್ಪೆಯಲ್ಲಿ ಕಾಫಿ ತೋಟವೊಂದರಲ್ಲಿ ಹುಲಿ ಮೃತದೇಹ ಪತ್ತೆಯಾಗಿದೆ. ಎರಡು ದಿನಗಳ ಹಿಂದೆಯೇ ಈ ಹುಲಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. 2ನೇ ರುದ್ರಗುಪ್ಪೆಯ ತೋತೇರಿ ಬಳಿಯ ನಾಜಗೊಲ್ಲಿ ಎಂಬಲ್ಲಿನ ಕಾಫಿ ತೋಟವೊಂದರಲ್ಲಿ ಹುಲಿಯ ಮೃತದೇಹ ಮಂಗಳವಾರ ಸಂಜೆ ಕಂಡುಬಂದಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಕಳೆದ ಕೆಲವು ತಿಂಗಳುಗಳಿಂದ ಈ ಭಾಗದಲ್ಲಿ ಹುಲಿಯೊಂದು ಸಂಚರಿಸುತ್ತಾ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿತ್ತು. 2ನೇ ರುದ್ರಗುಪ್ಪೆಯ...
ಕ್ರೈಮ್ಬೆಂಗಳೂರುರಾಜ್ಯಸುದ್ದಿ

ಸಾಲ ಕಟ್ಟದ್ದಕ್ಕೆ ಮಹಿಳೆಯ ಬಟ್ಟೆ ಬಿಚ್ಚಿ ಮಾರಣಾಂತಿಕವಾಗಿ ಹಲ್ಲೆ ; ದೂರು ಸ್ವೀಕರಸಲು ಸರ್ಜಾಪುರ ಠಾಣೆಯ ಪೊಲೀಸರು ನಕಾರ – ಕಹಳೆ ನ್ಯೂಸ್

ಬೆಂಗಳೂರು(ಜೂ.29): ಕೊಟ್ಟ ಸಾಲ ಹಿಂತಿರುಗಿಸದ್ದಕ್ಕೆ ಮಹಿಳೆಯೊಬ್ಬರ ಬಟ್ಟೆಬಿಚ್ಚಿ ಅವಮಾನಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಬೆಂಗಳೂರು ನಗರ ಜಿಲ್ಲೆಯ ಅನೇಕಲ್‌ ತಾಲೂಕಿನ ಸರ್ಜಾಪುರ ವ್ಯಾಪ್ತಿಯ ದೊಮ್ಮಸಂದ್ರದಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ಘಟನೆ ನಡೆದು 2 ದಿನಗಳಾದರೂ ದೂರು ಸ್ವೀಕರಸಲು ಸರ್ಜಾಪುರ ಠಾಣೆಯ ಪೊಲೀಸರು ನಕಾರ ಮಾಡಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೊಶ ವ್ಯಕ್ತವಾದ ಬಳಿಕ ದೂರು ಸ್ವೀಕರಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ. ದೊಮ್ಮಸಂದ್ರ ವ್ಯಾಪ್ತಿಯ ನೆರಿಗಾ ಗ್ರಾಮದ ನಿವಾಸಿ ಸುಬ್ಬಾರೆಡ್ಡಿ ಅವರ ಪುತ್ರಿಯರಾದ...
ಕ್ರೈಮ್ರಾಜ್ಯಸುದ್ದಿ

” ನಿಮ್ಮದು ………. ಸೂಪರ್, ……….. ಮಾಡೋಣ ಬನ್ನಿ….! ” – ವಿದ್ಯಾರ್ಥಿ ತಾಯಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಶಿಕ್ಷಕ ಅಮಾನತು – ಕಹಳೆ ನ್ಯೂಸ್

ತುಮಕೂರು: ವಿದ್ಯಾರ್ಥಿ ತಾಯಿಗೆ ಅಶ್ಲೀಲ ಮೆಸೇಜ್‌ ಕಳುಹಿಸಿದ ಶಿಕ್ಷಕನನ್ನು ಅಮಾನತು ಮಾಡಿರುವ ಘಟನೆ ಮಧುಗಿರಿ ತಾಲ್ಲೂಕಿನ ದೊಡ್ಡಹಟ್ಟಿಯಲ್ಲಿ ನಡೆದಿದೆ. ದೊಡ್ಡಹಟ್ಟಿ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್‌ ಅಮಾನತುಗೊಂಡ ಶಿಕ್ಷಕ. ಈತ ವಿದ್ಯಾರ್ಥಿಗಳ ಪೋಷಕರ ಮೊಬೈಲ್‌ ಸಂಖ್ಯೆ ಪಡೆದು ಅಶ್ಲೀಲವಾಗಿ ಮೆಸೇಜ್‌ ಕಳುಹಿಸುತ್ತಿದ್ದ. ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳ ತಾಯಂದಿರ ನಂಬರ್‌ಗಳನ್ನು ಶಿಕ್ಷಕ ಪಡೆಯುತ್ತಿದ್ದ. ವಿದ್ಯಾರ್ಥಿಗಳ ತಾಯಂದಿರ ವಾಟ್ಸಪ್‌ಗೆ ಅಶ್ಲೀಲವಾಗಿ ಮೆಸೇಜ್ ಮಾಡಿ‌ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತಿದ್ದ ಗ್ರಾಮದ ಮಹಿಳೆಯರು ಶಿಕ್ಷಕ...
ದಕ್ಷಿಣ ಕನ್ನಡರಾಜ್ಯಸುದ್ದಿ

ದಕ್ಷತೆ ಮತ್ತು ಪ್ರಮಾಣಿಕತೆಗೆ ಹೆಸರಾಗಿದ್ದ ಮಂಗಳೂರು ಡಿಸಿಪಿ ಹರಿರಾಂ ಶಂಕರ್‌ ವರ್ಗಾವಣೆ ; ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ವರ್ಗಾವಣೆ – ಕಹಳೆ ನ್ಯೂಸ್

ಮಂಗಳೂರು, ಜೂ 27 : ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ  ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಹರಿರಾಂ ಶಂಕರ್‌ ಅವರನ್ನು ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ. ಕೇರಳದ ತ್ರಿಶೂರ್ ಮೂಲದ ಹರಿರಾಂ ಶಂಕರ್ 2017 ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಸೇವೆಯಲ್ಲಿದ್ದ ಇವರು ದಕ್ಷ , ಪ್ರಮಾಣಿಕ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದರು....
ಉಡುಪಿಕ್ರೈಮ್ರಾಜ್ಯಸುದ್ದಿ

ಮಂಗಳೂರಿನಿಂದ ಉಡುಪಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದ ಬಾಣಸಿಗ – ಕಹಳೆ ನ್ಯೂಸ್

ಉಡುಪಿ: ಮಂಗಳೂರು ಮೂಲದ ವ್ಯಕ್ತಿಯೊರ್ವ ಉಡುಪಿಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದು, ಸಮಾಜಸೇವಕರ ಸಮಯಪ್ರಜ್ಞೆಯಿಂದ ಬದುಕಿಸಿರುವ ಘಟನೆ ಬುಧವಾರ ನಡೆದಿದೆ. ಹೋಟೆಲಿನಲ್ಲಿ ಬಾಣಸಿಗರಾಗಿದ್ದ ಮಂಗಳೂರು ಮೂಲದ ವ್ಯಕ್ತಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಉಡುಪಿಯ ಖಾಸಗಿ ವಸತಿಗೃಹಗಳಲ್ಲಿ ಸ್ಥಳಾವಕಾಶ ಹುಡುಕುತ್ತಿದ್ದರು. ಈ ಬಗ್ಗೆ ವಿಷಯ ತಿಳಿದ ಉಡುಪಿಯ ಸಮಾಜಸೇವಕರು ವ್ಯಕ್ತಿಯನ್ನು ರಕ್ಷಿಸಿ, ಮನವೊಲಿಸಿ ಸಂಬಂಧಿಕರಿಗೆ ಹಸ್ತಾಂತರ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಸಮಾಜಸೇವಕರಾದ ಕೃಷ್ಣಮೂರ್ತಿ ಆಚಾರ್ಯ, ನಿತ್ಯಾನಂದ ಒಳಕಾಡು, ದೀಪಕ್, ಹರೀಶ್ ಅಮೀನ್ ಭಾಗಿಯಾಗಿದ್ದರು....
ಉಡುಪಿದಕ್ಷಿಣ ಕನ್ನಡರಾಜ್ಯಸುದ್ದಿ

ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆ..! 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯಾದ್ಯಂತ ಮುಂದಿನ 4 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ರಾಜ್ಯಾದ್ಯಂತ ಮಳೆಯಾಗುವ ಹಿನ್ನೆಲೆ 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಫೋಷಣೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಜೂನ್ 25 ರವರೆಗೆ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆಯಿದೆ. ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಹೆಚ್ಚು ಮಳೆಯಾಗುವ...
ದಕ್ಷಿಣ ಕನ್ನಡಪುತ್ತೂರುರಾಜಕೀಯರಾಜ್ಯಸುದ್ದಿ

ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ಪ್ರಕರಣ | ಮೆಲ್ಲ ಮೆಲ್ಲಗೆ ‘ ಮಲ್ಲಿ ‘ ಹೆಸರು ಮುನ್ನೆಲೆಗೆ…! ರೌಡಿ ಶೀಟರ್ ಪಟ್ಟಿಯಿಂದ ಮಲ್ಲಿ ನಾಟ್ ಔಟ್, ನೋ ಎಂದ ಹೈಕೋರ್ಟು..! – ಕಹಳೆ ನ್ಯೂಸ್

ಮಂಗಳೂರು/ ಪುತ್ತೂರು : ಭೂಗತ ಲೋಕದ ಮಾಜಿ ಡಾನ್, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕರಾದ ಪುತ್ತೂರು ಕೆಯ್ಯೂರಿನ ಎನ್. ಮುತ್ತಪ್ಪ ರೈಯವರ ಆಪ್ತರೂ, ಮುತ್ತಪ್ಪ ರೈಯವರ ಜೀವಿತದ ಕೊನೆಯ ಕಾಲದವರೆಗೂ ಅವರೊಂದಿಗೆ ಇದ್ದ ಗುಣರಂಜನ್ ಶೆಟ್ಟಿಯವರನ್ನು ಮುಗಿಸಲೇ ಬೇಕು ಎಂದು ಪಣ ತೊಟ್ಟಿರುವ ಗ್ಯಾಂಗ್ ಸ್ಟರ್ ಗಳು ಕೊಲೆಗೆ ಸಂಚು ರೂಪಿಸಿರುವುದನ್ನು ಪೊಲೀಸ್ ಅಧಿಕಾರಿಗಳು ಖಾತರಿ ಪಡಿಸಿದ್ದರು. ಬೆಂಗಳೂರಿನಲ್ಲಿ ಉದ್ಯಮಿಯಾಗಿ, ಸಮಾಜ ಸೇವಕನಾಗಿ, ಪರಿಸರವಾದಿಯಾಗಿ ಗುರುತಿಸಿಕೊಂಡಿರುವ ಗುಣರಂಜನ್ ಶೆಟ್ಟಿಯವರು ಈಗಾಗಲೇ ನಾಲ್ವರು...
ಆರೋಗ್ಯದಕ್ಷಿಣ ಕನ್ನಡಬೆಂಗಳೂರುರಾಜ್ಯಸುದ್ದಿ

ಸತತ 2ನೇ ದಿನ ಪಾಸಿಟಿವಿಟಿ ದರ ಏರಿಕೆ – ರಾಜ್ಯದಲ್ಲಿಂದು 463 ಮಂದಿಗೆ ಕೊರೊನಾ ; ಬೆಂಗಳೂರು ನಗರದಲ್ಲಿ 429, ದಕ್ಷಿಣ ಕನ್ನಡದಲ್ಲಿ 14 ಸೋಂಕು – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಸತತ 2ನೇ ದಿನ ಪಾಸಿಟಿವಿಟಿ ದರ ಏರಿಕೆಯಾಗಿದೆ. ನಿನ್ನೆ ಶೇ.2.07 ರಷ್ಟಿದ್ದ ಪಾಸಿಟಿವಿಟಿ ದರ ಇಂದು ಶೇ.2.15ಕ್ಕೆ ಏರಿಕೆಯಾಗಿದೆ. 463 ಹೊಸ ಸೋಂಕಿನ ಪ್ರಕರಣಗಳು ಕಂಡುಬಂದಿದ್ದು, ಬೆಂಗಳೂರು ನಗರದಲ್ಲೇ 429 ಪ್ರಕರಣಗಳು ವರದಿಯಾಗಿದೆ. ಇಂದು ಬೆಂಗಳೂರು ನಗರದಲ್ಲಿ 429 ಪ್ರಕರಣ ದಾಖಲಾಗಿದ್ದು, ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 3,651ಕ್ಕೆ ಏರಿಕೆ ಕಂಡಿದೆ. ರಾಜ್ಯದ ಇಂದಿನ ಪಾಸಿಟಿವಿಟಿ ರೇಟ್ ಶೇ. 2.15ಕ್ಕೆ ಏರಿಕೆ ಕಂಡಿದೆ. ಆದರೆ ಇಂದು...
1 101 102 103 104 105 154
Page 103 of 154