Tuesday, March 25, 2025

ರಾಜ್ಯ

ಕ್ರೀಡೆಜಿಲ್ಲೆರಾಜ್ಯರಾಷ್ಟ್ರೀಯಸುದ್ದಿ

ಭಾರತದ ಗೆಲುವನ್ನು ಕುಣಿದು ಸಂಭ್ರಮಿಸಿದ ಕಪಿಲ್‌ದೇವ್,ಗವಾಸ್ಕರ್-ಕಹಳೆ ನ್ಯೂಸ್

ದುಬೈ: ಭಾನುವಾರ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಭಾರತ ತಂಡವು ಟ್ರೋಫಿ ಎತ್ತಿ ಹಿಡಿದಿದೆ. ಇದೂ ಸೇರಿ ಭಾರತವು ಈವರೆಗೆ 7 ಬಾರಿ ಐಸಿಸಿ ಟ್ರೋಫಿಗಳನ್ನು ಗೆದ್ದಿದೆ. ಹಾಲಿ, ಮಾಜಿ ಕ್ರಿಕೆಟಿಗರು ಈ ಸಂಭ್ರಮವನ್ನು ತಮ್ಮದೇ ಶೈಲಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. 1983ರಲ್ಲಿ ಭಾರತ ತಂಡ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಾಗ ಭಾರತ ತಂಡದಲ್ಲಿದ್ದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮತ್ತು ತಂಡದ ನಾಯಕತ್ವ...
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಲಾಂಗ್‌ ಹಿಡಿದು ಓಡಾಡುತ್ತಿದ್ದ ಕುಖ್ಯಾತ ಕಳ್ಳ ಸೇರಿ ಇಬ್ಬರ ಸೆರೆ -ಕಹಳೆ ನ್ಯೂಸ್

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಹೋಗುವಾಗ ಕೈಯಲ್ಲಿ ಲಾಂಗ್‌ ಹಿಡಿದು ಭಯ ಸೃಷ್ಟಿಸಿದ್ದ ಕುಖ್ಯಾತ ಕಳ್ಳ ಸೇರಿ ಇಬ್ಬರನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಸಂತನಗರದ ಜಲ್ಲಾ ಸಿದ್ದಿಕ್ಕಿ (36) ಮತ್ತು ಸಂತೋಷ್‌(26) ಬಂಧಿತರು. ಆರೋಪಿಗಳು ಮಾ.3ರ ರಾತ್ರಿ ಶಿವಾಜಿನಗದ ಬಂಬೂ ಬಜಾರ್‌ ರಸ್ತೆಯಲ್ಲಿ ಕೈಯಲ್ಲಿ ಲಾಂಗ್‌ ಹಿಡಿದು ದ್ವಿಚಕ್ರ ವಾಹನದಲ್ಲಿ ಆರೋಪಿಗಳು ಸುತ್ತಾಡುತ್ತಿದ್ದರು. ಈ ದೃಶ್ಯವನ್ನು ಮಹಿಳೆಯೊಬ್ಬರು ವಿಡಿಯೋ ಸೆರೆ ಹಿಡಿದಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ...
ಜಿಲ್ಲೆರಾಜ್ಯಸುದ್ದಿ

ಪ್ರವಾಸಿಗರ ಮೇಲೆ ಹಲ್ಲೆ ಕೇಸ್​; ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ-ಕಹಳೆ ನ್ಯೂಸ್

ಗಂಗಾವತಿ: ತಾಲ್ಲೂಕಿನ ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓಡಿಶಾ ಮೂಲದ ಬಿಬಾಶ್​ (26) ಎಂಬುವವರ ಮೃತದೇಹ ಶನಿವಾರ (ಮಾರ್ಚ್ 08) ಬೆಳಗ್ಗೆ ಪತ್ತೆಯಾಗಿದೆ. ಗಂಗಾವತಿ ತಾಲ್ಲೂಕಿನ ಸಾಣಾಪುರ ಕೆರೆ ಬಳಿ ಇರುವ ಜಂಗ್ಲಿಗೆ ತೆರಳುವ ಮಾರ್ಗದಲ್ಲಿ ಗುರುವಾರ (ಮಾರ್ಚ್ 06) ಪ್ರವಾಸಿಗರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕ ಬಿಬಾಶ್ ನಾಪತ್ತೆಯಾಗಿದ್ದರು. ತೀವ್ರ ಹುಡುಕಾಟ ಬಳಿಕ ಇಂದು (ಮಾರ್ಚ್ 08) ಬೆಳಗ್ಗೆ ಅವರ...
ಬೆಂಗಳೂರುರಾಜಕೀಯರಾಜ್ಯಸುದ್ದಿ

‘ಬಜೆಟ್ ಮೂಲಕ ಜನರ ಮೂಗಿಗೆ ತುಪ್ಪ ಸವರಲು ಹೊರಟ ಮುಖ್ಯಮಂತ್ರಿ’ ; ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕೆ – ಕಹಳೆ ನ್ಯೂಸ್

ಬೆಂಗಳೂರು, ಮಾ.07 : ಹಣಕಾಸು ಖಾತೆಯನ್ನು ಹೊತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ರಾಜ್ಯದ ಜನತೆಯ ನಿರೀಕ್ಷೆಯನ್ನು ಹುಸಿ ಮಾಡಿದೆ. ನಿಖರ ಭರವಸೆ ನೀಡುವ ಯೋಜನೆ ಹಾಗೂ ಅದಕ್ಕೆ ಅನುದಾನ ಪ್ರಕಟಿಸದೆ ಆಕರ್ಷಕ ಕಾರ್ಯಕ್ರಮಗಳನ್ನು ಘೋಷಿಸಿ, ಜನರ ಮೂಗಿಗೆ ತುಪ್ಪ ಸವರಲು ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ. ಬಜಟ್ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ಅಲ್ಪಸಂಖ್ಯಾತರ ಹೆಸರಿನಲ್ಲಿ...
ರಾಜ್ಯಸುದ್ದಿ

ಮಧ್ಯರಾತ್ರಿ ವಿದೇಶಿ ಪ್ರವಾಸಿಗರ ಮೇಲೆ ದಾಳಿ;ನಾಲ್ವರಿಗೆ ಗಾಯ, ಓರ್ವ ನಾಪತ್ತೆ-ಕಹಳೆ ನ್ಯೂಸ್

ಗಂಗಾವತಿ: ಮಧ್ಯರಾತ್ರಿ ವೇಳೆ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದ ವಿದೇಶಿ ಪ್ರವಾಸಿಗರ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿ ಲೈಂಗಿಕ ಮತ್ತು ದೈಹಿಕ ದಾಳಿ ಮಾಡಿದ ಪರಿಣಾಮ ಇಬ್ಬರು ವಿದೇಶಿ ಹಾಗೂ ಇಬ್ಬರು ದೇಶಿಯ ಪ್ರವಾಸಿಗರು ತೀವ್ರ ಗಾಯಗೊಂಡಿರುವ ಪ್ರಕರಣ ಗಂಗಾವತಿ ತಾಲೂಕಿನ ಸಾಣಾಪೂರ ಕೆರೆ(ಲೇಕ್) ಗಂಗಮ್ಮನ ಗುಡಿ ಹತ್ತಿರ ಗುರುವಾರ ಮಧ್ಯರಾತ್ರಿ ನಡೆದಿದೆ. ಇಸ್ರೇಲ್ ಮೂಲದ ನಾಮಾ(27), ಅಮೇರಿಕಾ ಮೂಲದ ಡ್ಯಾನಿಯೇಲ್(23) ಮಹಾರಾಷ್ಟ್ರದ ನಾಸಿಕ್ ಪಂಕಜ್(43) ಸ್ಥಳೀಯ ಆನೆಗೊಂದಿ...
ಬೆಂಗಳೂರುರಾಜ್ಯಸುದ್ದಿ

ದಾಖಲೆಯ 16ನೇ ಬಜೆಟ್‌ಗೆ ಸಿಎಂ ಸನ್ನದ್ಧ : 4 ಲಕ್ಷ ಕೋ. ರೂ. ಸಿದ್ದು ಬಜೆಟ್‌-ಕಹಳೆ ನ್ಯೂಸ್

ಬೆಂಗಳೂರು: “ಪಂಚ ಗ್ಯಾರಂಟಿ’ ಯೋಜನೆಗಳಿಂದಾಗಿ ರಾಜ್ಯದ ಅಭಿವೃದ್ಧಿ ತಾಳ ತಪ್ಪಿದೆ ಎಂಬ ಅಪಸ್ವರಗಳ ನಡುವೆಯೇ ವಿತ್ತ ಖಾತೆಯನ್ನು ತಮ್ಮಲ್ಲಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 16ನೇ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಬೆಳಗ್ಗೆ 10.15ಕ್ಕೆ ಮಂಡನೆಯಾಗಲಿರುವ 2025- 26ನೇ ಸಾಲಿನ ಬಜೆಟ್‌ ಹಲವು ನಿರೀಕ್ಷೆ, ಕುತೂಹಲಗಳನ್ನು ಸೃಷ್ಟಿಸಿದೆ. ವಿಶೇಷವಾಗಿ ಗ್ಯಾರಂಟಿ ಯೋಜನೆಗಳು, ವಿವಿಧ ಸಾಮಾಜಿಕ ಭದ್ರತೆ ಕಾರ್ಯಕ್ರಮಗಳ ಜತೆಗೆ ಅಭಿವೃದ್ಧಿ ಯೋಜನೆಗಳಿಗೆ ಬೇಡಿಕೆಗೆ ತಕ್ಕಂತೆ ಅನುದಾನ ನೀಡಿ ಅಭಿವೃದ್ಧಿ...
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ವರದಕ್ಷಿಣೆ ಕೊಡಲಿಲ್ಲವೆಂದು ಮಧ್ಯರಾತ್ರಿ ವರ ಪರಾರಿ-ಕಹಳೆ ನ್ಯೂಸ್

ಬೆಂಗಳೂರು: ವರದಕ್ಷಿಣೆ ಯಾಗಿ 50 ಲಕ್ಷ ರೂ. ನಗದು ಮತ್ತು ಐಷಾರಾಮಿ ಮರ್ಸಿಡಿಸ್‌ ಕಾರನ್ನು ನೀಡಲಿಲ್ಲ ಎಂಬ ಕಾರಣಕ್ಕೆ ವರ ಮತ್ತು ಆತನ ಕುಟುಂಬ ಸದಸ್ಯರು ರಾತೋರಾತ್ರಿ ಮದುವೆ ಮನೆಯಿಂದ ಪರಾರಿಯಾಗಿದ್ದಾರೆ. ವಧುವಿನ ತಂದೆ ಬಸಂತ್‌ ಕುಮಾರ್‌ ನೀಡಿರುವ ದೂರಿನ ಮೇರೆಗೆ ಉಪ್ಪಾರಪೇಟೆ ಠಾಣೆ ಪೊಲೀಸರು ಜಿಗಣಿ ಮೂಲದ ವರ ಪ್ರೇಮ್‌ ಚಂದ್‌ ಪಾವನಿ, ಆತನ ತಂದೆ ಶಿವಕುಮಾರ್‌ ಪಾವನಿ ಮತ್ತು ತಾಯಿ ರಾಧಾ ಪಾವನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರುದಾರರ...
ಜಿಲ್ಲೆಬೆಂಗಳೂರುರಾಜ್ಯ

ಪ್ರತೀ ರವಿವಾರ ಸಂಜೆ ವಿಧಾನಸೌಧ ಆವರಣ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ -ಕಹಳೆ ನ್ಯೂಸ್

ಬೆಂಗಳೂರು: ಹಲವು ವರ್ಷಗಳಿಂದ ದೂರದಿಂದ ವಿಧಾನಸೌಧವನ್ನು ಕಣ್ತುಂಬಿಕೊಳ್ಳುತ್ತಿದ್ದ ನಾಡಿನ ಜನರಿಗೆ ಸಿಹಿ ಸುದ್ದಿ ನೀಡಲು ವಿಧಾನಸಭೆ ಕಾರ್ಯಾಲಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಪ್ರತೀ ರವಿವಾರ ಸಂಜೆ 4ರಿಂದ 7ರ ವರೆಗೆ ವಿಧಾನಸೌಧ ಆವರಣದೊಳಗೆ ಸಾರ್ವಜನಿಕರು ಮುಕ್ತವಾಗಿ ಪ್ರವೇಶಿಸುವ ಅವಕಾಶ ನೀಡಲು ಚಿಂತನೆ ನಡೆಸಿದೆ. ವಿಧಾನಸೌಧದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಆಯೋಜಿಸಿದ್ದ ಪುಸ್ತಕ ಮೇಳ ಯಶಸ್ವಿಯಾದ ಬೆನ್ನಲ್ಲೇ ಪ್ರೇರಣೆ ಪಡೆದಿರುವ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರು, ವಾರಾಂತ್ಯದಲ್ಲಿ ವಿಧಾನಸೌಧ- ವಿಕಾಸ ಸೌಧ...
1 2 3 4 5 172
Page 3 of 172
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ