ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ : ಭ್ರಷ್ಟ ಕುಬೇರರ ಅಕ್ರಮ ಆಸ್ತಿ ಕಂಡು ದಂಗಾದ ಅಧಿಕಾರಿಗಳು – ಕಹಳೆ ನ್ಯೂಸ್
ಬೆಂಗಳೂರು : ನಿನ್ನೆ ಬೆಳ್ಳಂ ಬೆಳಿಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದು, ಆದಾಯ ಮೀರಿ ಆಸ್ತಿ ಸಂಪಾದನೆ ಮಾಡಿದ ಆರೋಪ ಸಂಬಂಧ ರಾಜ್ಯದ ವಿವಿಧೆಡೆ 10 ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಸೇರಿ ಇತರೆ ಸ್ಥಳಗಳಲ್ಲಿ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಬರೋಬ್ಬರಿ 23.17 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ. ಲೋಕಾಯುಕ್ತ ಡಿಜಿ ಪ್ರಶಾಂತ್‌ಕುಮಾರ್ ಮಾರ್ಗದರ್ಶನದಲ್ಲಿ 200 ಪೊಲೀಸರನ್ನೊಳಗೊಂಡ 41 ಪ್ರತ್ಯೇಕ ತಂಡಗಳು ಬುಧವಾರ ಬೆಳ್ಳಂಬೆಳಗ್ಗೆ...