ಉಡುಪಿನಗರದಲ್ಲಿ ಮನೆಮನೆಗೆ ಶ್ರೀರಾಮ ಮಂತ್ರಾಕ್ಷತೆ ಅಭಿಯಾನಕ್ಕೆ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರಿಂದ ಚಾಲನೆ – ಕಹಳೆ ನ್ಯೂಸ್
ಉಡುಪಿ: ಅಯೋಧ್ಯಾ ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಜ. 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪೂರ್ವಭಾವಿಯಾಗಿ ದೇಶಾದ್ಯಂತ ವಿಶ್ವಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿವಿಧ ಪರಿವಾರ ಸಂಘಟನೆಗಳು ಭಾರತದಲ್ಲಿರುವ ಸಮಸ್ತ ಹಿಂದೂ ಮನೆಗಳಿಗೆ ಕರಪತ್ರ, ಅಯೋಧ್ಯೆ ರಾಮಮಂದಿರದ ಭಾವಚಿತ್ರ ಹಾಗೂ ರಾಮನ ಪವಿತ್ರ ಮಂತ್ರಾಕ್ಷತೆಯನ್ನು ಮನೆಮನೆಗಳಿಗೆ ಹಂಚುವ ಅಭಿಯಾನಕ್ಕೆ ಸೋಮವಾರ ಚಾಲನೆ ಲಭಿಸಿದೆ. ಮಂತ್ರಾಕ್ಷತೆ ಅಭಿಯಾನದ ಉಡುಪಿನಗರ ಘಟಕವು ನಗರವನ್ನು ಕೇಂದ್ರವಾಗಿರಿಸಿ ಕೊಂಡು...