ಪ್ರತೀ ರವಿವಾರ ಸಂಜೆ ವಿಧಾನಸೌಧ ಆವರಣ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ -ಕಹಳೆ ನ್ಯೂಸ್
ಬೆಂಗಳೂರು: ಹಲವು ವರ್ಷಗಳಿಂದ ದೂರದಿಂದ ವಿಧಾನಸೌಧವನ್ನು ಕಣ್ತುಂಬಿಕೊಳ್ಳುತ್ತಿದ್ದ ನಾಡಿನ ಜನರಿಗೆ ಸಿಹಿ ಸುದ್ದಿ ನೀಡಲು ವಿಧಾನಸಭೆ ಕಾರ್ಯಾಲಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಪ್ರತೀ ರವಿವಾರ ಸಂಜೆ 4ರಿಂದ 7ರ ವರೆಗೆ ವಿಧಾನಸೌಧ ಆವರಣದೊಳಗೆ ಸಾರ್ವಜನಿಕರು ಮುಕ್ತವಾಗಿ ಪ್ರವೇಶಿಸುವ ಅವಕಾಶ ನೀಡಲು ಚಿಂತನೆ ನಡೆಸಿದೆ. ವಿಧಾನಸೌಧದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಆಯೋಜಿಸಿದ್ದ ಪುಸ್ತಕ ಮೇಳ ಯಶಸ್ವಿಯಾದ ಬೆನ್ನಲ್ಲೇ ಪ್ರೇರಣೆ ಪಡೆದಿರುವ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು, ವಾರಾಂತ್ಯದಲ್ಲಿ ವಿಧಾನಸೌಧ- ವಿಕಾಸ ಸೌಧ...