ಬದಲಾವಣೆಯತ್ತ ಉಳ್ಳಾಲ – ಖಾದರ್ ಕೈಯಿಂದ ತಪ್ಪುತ್ತಾ ಕೈ ಭದ್ರಕೋಟೆ…!? ; ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ನಾಮಪತ್ರ ಸಲ್ಲಿಕೆ – ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಬಿಜೆಪಿ ಕಾರ್ಯಕರ್ತರು – ಕಹಳೆ ನ್ಯೂಸ್
ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಗುರುವಾರ ನಾಮ ಪತ್ರ ಸಲ್ಲಿಸಿದರು. ಸತೀಶ್ ಕುಂಪಲ ಅವರು ಕುಂಪಲದ ಶ್ರೀ ಬಾಲಕೃಷ್ಣ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮುನ್ನೂರು ದೆಕ್ಕಾಡು ಕೊರಗಜ್ಜನ ಕ್ಷೇತ್ರ, ಮಾಡೂರು ದೈವಸ್ಥಾನದಲ್ಲಿ ಪ್ರಾರ್ಥನೆ ನಡೆಸಿದ ಬಳಿಕ ಉಳ್ಳಾಲ ಅಬ್ಬಕ್ಕ ಸರ್ಕಲ್‍ನಲ್ಲಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ನಡೆಸಿದರು. ಬಳಿಕ ಉಳ್ಳಾಲದಲ್ಲಿ ನವ ಮಂಗಳೂರು ನಿರ್ಮಾತೃ ಶ್ರೀನಿವಾಸ ಮಲ್ಯ ಅವರ ಮನೆಗೆ ಭೇಟಿ ನೀಡಿದ ಬಳಿಕ...