ಭಾರತದ ಸಾಮರ್ಥ್ಯ ಮತ್ತೆ ವಿಶ್ವಮಾನ್ಯ : ಎಬಿವಿಪಿ ಜಿಲ್ಲಾ ಸಮಾವೇಶದಲ್ಲಿ ಬಾಲಕೃಷ್ಣ ಜಿ. – ಕಹಳೆ ನ್ಯೂಸ್
ಮಂಗಳೂರು: ಜ್ಞಾನ ಭೂಮಿ, ಧರ್ಮ ಭೂಮಿ, ಕರ್ಮಭೂಮಿಯಾಗಿದ್ದ ಭಾರತ 1,200 ವರ್ಷಗಳ ಕಾಲ ಪರಕೀಯರ ದಾಳಿಯಿಂದ ಸಂಪೂರ್ಣವಾಗಿ ತನ್ನತನವನ್ನು ಕಳೆದುಕೊಳ್ಳುವಂತಾಯಿತು. ಮೆಕಾಲೆ ಶಿಕ್ಷಣ ಪದ್ಧತಿ ಜಾರಿಗೊಳಿಸಿದ ಬ್ರಿಟಿಷರು ಇಲ್ಲಿನ ಜನರ ಮನಃಸ್ಥಿತಿಯನ್ನೇ ಬದಲಾಯಿಸುವಲ್ಲಿ ಯಶಸ್ವಿಯಾದರು. ಆದರೆ ಇಂದು ಮತ್ತೆ ವಿಶ್ವಕ್ಕೆ ಭಾರತ ಏನೆಂದು ತೋರಿಸಿಕೊಟ್ಟಿದ್ದೇವೆ ಎಂದು ಎಬಿವಿಪಿ ರಾಷ್ಟ್ರೀಯ ಸಹ ಸಂಘಟನ ಕಾರ್ಯದರ್ಶಿ ಬಾಲಕೃಷ್ಣ ಜಿ. ಹೇಳಿದರು. ಇಲ್ಲಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಬುಧವಾರ ಅಖೀಲ ಭಾರತೀಯ ವಿದ್ಯಾರ್ಥಿ...