Friday, January 24, 2025

ರಾಜ್ಯ

ದಕ್ಷಿಣ ಕನ್ನಡರಾಜ್ಯಸಂತಾಪಸುದ್ದಿ

ಖ್ಯಾತ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ ಇನ್ನಿಲ್ಲ – ಕಹಳೆ ನ್ಯೂಸ್

ಮಂಗಳೂರು, ನ 30 : ಖ್ಯಾತ ಯಕ್ಷಗಾನ ಮತ್ತು ತಾಳೆ-ಮದ್ದಳೆ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ (88) ಅವರು ಅ. 30 ರ ಬುಧವಾರ ನಿಧನರಾಗಿದ್ದಾರೆ.ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934ನೇ ಮಾರ್ಚ್ 20ರಲ್ಲಿ ಕೇರಳ ರಾಜ್ಯದ ಕುಂಬಳೆಯಲ್ಲಿ ಜನಿಸಿದ್ದ ಇವರು, ಯಕ್ಷಗಾನದ ತೆಂಕತಿಟ್ಟು ಶೈಲಿಯ ಕಲಾವಿದರಾಗಿದ್ದ ಇವರು ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದರು.ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಹಾಗೂ...
ಕೊಡಗುಮಡಿಕೇರಿರಾಜ್ಯಸುದ್ದಿ

ಕೊಡಗಿನ ಪೊನ್ನಂಪೇಟೆಯಲ್ಲಿ ಹಿಂದೂ ವ್ಯಾಪಾರಿಗಳ ಸೋಗಿನಲ್ಲಿ ಬಂದ ಮುಸ್ಲಿಂ ವ್ಯಾಪಾರಿಗಳು ; ಹಿಂದೂಗಳ ನಕಲಿ ಆಧಾರ್ ಕಾರ್ಡ್​ ಬಳಸಿ, ವ್ಯಾಪಾರಕ್ಕೆ ಅನುಮತಿ ಪಡೆದ ಮುಸ್ಲಿಂ ವ್ಯಾಪಾರಿಗಳು..! ಹಿಂದೂ ಕಾರ್ಯಕರ್ತರು ಆಕ್ರೋಶ – ಕಹಳೆ ನ್ಯೂಸ್

ಕೊಡಗು: ರಾಜ್ಯ ವಿವಿಧೆಡೆ ಜಾತ್ರಾ ಮಹೋತ್ಸವಗಳು ಹತ್ತಿರುವಾಗುತ್ತಿದ್ದಂತೆ ಮತ್ತೆ ಧರ್ಮ ಸಂಘರ್ಷ ಆರಂಭವಾಗಿದೆ. ದೇವಾಲಯದ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬಾರು ಎಂದು ಹಿಂದೂಪರ ಸಂಘಟನೆಗಳಿಂದ ಆಗ್ರಹ ಕೇಳಿ ಬಂದಿತ್ತು. ಇದೀಗ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಹರಿಹರ ಸಬ್ರಹ್ಮಣ್ಯ ದೇವಾಲಯದ ಷಷ್ಠಿ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ವಹಿವಾಟುಗಳಲ್ಲಿ ಭಾಗಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಕೊಡಗಿನಲ್ಲಿ ಧರ್ಮಸಂಘರ್ಷ ಭುಗಿಲೆದ್ದಿದೆ. ಮುಸ್ಲಿಂ ವ್ಯಾಪಾರಿಗಳು ಹಿಂದೂ ವ್ಯಾಪಾರಿಗಳ ಸೋಗಿನಲ್ಲಿ ಬಂದು ವ್ಯಾಪರ...
ಉಡುಪಿದಕ್ಷಿಣ ಕನ್ನಡಬೆಂಗಳೂರುರಾಜಕೀಯರಾಜ್ಯಸುದ್ದಿ

ಹಿಜಾಬ್ ವಿವಾದ ಬೆನ್ನಲ್ಲೇ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರತ್ಯೇಕ ಮುಸ್ಲಿಂ ಹೆಣ್ಣುಮಕ್ಕಳ 10 ಕಾಲೇಜು ಸ್ಥಾಪನೆಗೆ ಮುಂದಾದ‌ ರಾಜ್ಯ ವಕ್ಫ್ ಬೋರ್ಡ್ ; ಸರಕಾರದ ಅನುಮೋದನೆ ಪ್ರಸ್ತಾಪ – ಕಹಳೆ ನ್ಯೂಸ್

ರಾಜ್ಯದಲ್ಲಿ 10 ಮುಸ್ಲಿಂ ಹೆಣ್ಣು ಮಕ್ಕಳ ಕಾಲೇಜು ಸ್ಥಾಪಿಸಲು ರಾಜ್ಯ ಸರಕಾರ ಮುಂದಾಗಿರುವ ಬಗ್ಗೆ ವರದಿಯಾಗಿದೆ. ದಕ್ಷಿಣ ಕನ್ನಡ,ಉಡುಪಿ ಕಲಬುರಗಿ,ಯಾದಗರಿ, ರಾಯಚೂರು ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳ 10 ಕಾಲೇಜುಗಳನ್ನು ಸ್ಥಾಪನೆಗೆ ಶೀಘ್ರವೇ ಕಾರ್ಯತಂತ್ರ ನಡೆಯಲಿದೆ ಎನ್ನಲಾಗಿದೆ. ರಾಜ್ಯ ವಕ್ಫ್ ಬೋರ್ಡ್ ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ 10 ಕಾಲೇಜುಗಳನ್ನು ಸ್ಥಾಪಿಸುವ ಪ್ರಸ್ತಾಪ ಸಲ್ಲಿಸಿತ್ತು.ಇದಕ್ಕೆ ಸರಕಾರದ ಅನುಮೋದನೆ ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರತಿ ಕಾಲೇಜಿಗೆ 2.5 ಕೋಟಿ...
ದಕ್ಷಿಣ ಕನ್ನಡರಾಜ್ಯಸುದ್ದಿ

ಮತ್ತೆ ಕ್ರೂಸ್‌ ಪ್ರವಾಸೋದ್ಯಮಕ್ಕೆ ಕಳೆ : 271 ಪ್ರವಾಸಿಗರನ್ನು ಹೊತ್ತ ಹಡಗು ಮಂಗಳೂರಿಗೆ ; ಯಕ್ಷಗಾನ, ಚೆಂಡೆ ವಾದನಗಳೊಂದಿಗೆ ಪ್ರವಾಸಿಗರ ಸ್ವಾಗತ – ಕಹಳೆ ನ್ಯೂಸ್

ಪಣಂಬೂರು: ಎರಡು ವರ್ಷ ಕೊರೊನಾ ಹೊಡೆತದಿಂದ ನಲುಗಿದ ಪ್ರವಾಸೋದ್ಯಮ ಚಟುವಟಿಕೆ ಮತ್ತೆ ಗರಿಗೆದರುವ ಲಕ್ಷಣ ಕಂಡು ಬಂದಿದೆ. ಸೋಮವಾರ ನವಮಂಗಳೂರು ಬಂದರಿಗೆ 271 ಪ್ರವಾಸಿಗರು ಮತ್ತು 373 ಮಂದಿ ಸಿಬಂದಿಯನ್ನು ಹೊತ್ತ ಎಂಎಸ್‌ ಯುರೋಪಾ 2 ಆಗಮಿಸಿತು. ಯಕ್ಷಗಾನ, ಚೆಂಡೆ ವಾದನಗಳೊಂದಿಗೆ ಪ್ರವಾಸಿಗರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಬಸ್‌ ಹಾಗೂ ಖಾಸಗೀ ಪ್ರವಾಸಿ ಕಾರು ಗಳಲ್ಲಿ ಪ್ರವಾಸಿಗರನ್ನು ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಚಾಪೆಲ್‌, ಕದ್ರಿ ದೇವಸ್ಥಾನ,...
ಬೆಂಗಳೂರುರಾಜಕೀಯರಾಜ್ಯಸುದ್ದಿ

ಸೈಲೆಂಟ್ ಸುನೀಲ್ ಬಿಜೆಪಿ ಸೇರ್ಪಡೆ ಅವಕಾಶವಿಲ್ಲ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ – ಕಹಳೆ ನ್ಯೂಸ್

ಬೆಂಗಳೂರು: ಸೈಲೆಂಟ್ ಸುನೀಲ್ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ. ಸೈಲೆಂಟ್ ಸುನೀಲ್ ನನ್ನು ಯಾವುದೇ ಕಾರಣಕ್ಕೆ ಪಕ್ಷಕ್ಕೆ ಸೇರಿಸುವುದಿಲ್ಲ. ಸೈಲೆಂಟ್ ಸುನೀಲ್ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಕೆಲವು ಪ್ರಮುಖರು ಭಾಗವಹಿಸಿದ ಕುರಿತು ಮಾಹಿತಿ ಪಡೆಯುತ್ತಿದ್ದೇನೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖಂಡರಿಂದ ವಿವರಣೆ ಕೇಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಪಕ್ಷದ ಪ್ರಮುಖರು ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಆಗದಂತೆ ನೋಡಿಕೊಳ್ಳಬೇಕು. ಎಲ್ಲ...
ಕ್ರೈಮ್ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ಬಿಜೆಪಿ ಯುವ ಮೋರ್ಚಾದ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇನ್ನೂ ಪತ್ತೆಯಾಗದ ನಾಲ್ವರು ಆರೋಪಿಳಿಗೆ ಕುಕ್ಕರ್‌ ಬಾಂಬ್ ಪ್ರಕರಣದ ಆರೋಪಿ ಶಾರೀಕ್‌ನೊಂದಿಗೆ ನಂಟು..? –  ಕಹಳೆ ನ್ಯೂಸ್

ಪುತ್ತೂರು, ನ 28 : ಬಿಜೆಪಿ ಯುವ ಮೋರ್ಚಾದ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಹಂತಕರಿಗೆ ನೆರವು ನೀಡಿದ ಆರೋಪದಲ್ಲಿ ಎನ್‌ಐಎ ಲುಕೌಟ್‌ ನೋಟಿಸ್‌ ಹೊರಡಿಸಿದ ನಾಲ್ವರು ಆರೋಪಿಗಳು ಇನ್ನೂ ಪತ್ತೆಯಾಗದಿದ್ದು, ಪೊಲೀಸರ ತಂಡ ಬೇರೆ ಬೇರೆ ಕಡೆಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಬೆಳ್ಳಾರೆ ನಿವಾಸಿಗಳಾದ ಮಹಮ್ಮದ್‌ ಮುಸ್ತಫಾ, ಸಿದ್ಧಿಕ್‌ ಯಾನೆ ಪೈಂಟರ್‌ ಸಿದ್ಧಿಕ್‌, ಸುಳ್ಯದ ಉಮ್ಮರ್‌ ಫಾರೂಕ್‌, ಮಡಿಕೇರಿಯ ತುಫೈಲ್‌ ಎಂ.ಎಚ್‌. ತಲೆಮರೆಸಿಕೊಂಡಿರುವ ಆರೋಪಿಗಳು.ಈ ನಾಲ್ವರು ಆರೋಪಿಗಳ ಪೈಕಿ ಮಡಿಕೇರಿಯ...
ದಕ್ಷಿಣ ಕನ್ನಡಬೆಳ್ತಂಗಡಿರಾಜ್ಯಸುದ್ದಿ

ಧರ್ಮಸ್ಥಳ ಮೇಳದ ತಿರುಗಾಟ ಆರಂಭ: ಸಂಜೆ 7ರಿಂದ ರಾತ್ರಿ 12 ಗಂಟೆಯ ವರೆಗೆ ಪ್ರದರ್ಶನ – ಕಹಳೆ ನ್ಯೂಸ್

ಬೆಳ್ತಂಗಡಿ: ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ವರ್ಷದ ತಿರುಗಾಟ ಶನಿವಾರ ಆರಂಭವಾಯಿತು. ಈಗಾಗಲೇ ಧರ್ಮಸ್ಥಳದಲ್ಲಿ ಸೇವಾಕರ್ತರ ವತಿಯಿಂದ ಕೆಲವು ಹರಕೆ ಬಯಲಾಟಗಳು ಪ್ರದರ್ಶನ ಗೊಂಡಿದ್ದು ಮುಂದೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತೀ ದಿನ ಸಂಜೆ 7ರಿಂದ ರಾತ್ರಿ 12 ಗಂಟೆಯ ವರೆಗೆ ಪ್ರದರ್ಶನ ನಡೆಯಲಿದೆ. 2023ರ ಮೇ 23ರ ವರೆಗೆ ಪ್ರದರ್ಶನದ ಬಳಿಕ 3 ದಿನ ಧರ್ಮಸ್ಥಳದಲ್ಲಿ ಸೇವಾ ಬಯಲಾಟದೊಂದಿಗೆ ತಿರುಗಾಟ ಕೊನೆಗೊಳ್ಳುತ್ತದೆ. ಧರ್ಮಾಧಿಕಾರಿ ಡಾ|...
ದಕ್ಷಿಣ ಕನ್ನಡಬಂಟ್ವಾಳರಾಜ್ಯಸುದ್ದಿ

2022-23ರ ಕಂಬಳ ಋತುವಿನ ಪ್ರಥಮ ಕಂಬಳ ಸಂಪನ್ನ ; ಕಕ್ಯಪದವು ಸತ್ಯ – ಧರ್ಮ ಜೋಡುಕರೆ ಕಂಬಳ ಕೂಟದ ಫಲಿತಾಂಶ –  ಕಹಳೆ ನ್ಯೂಸ್

ಪುಂಜಾಲಕಟ್ಟೆ: ಜಿಲ್ಲಾ ಕಂಬಳ ಸಮಿತಿಯಡಿ ಬರುವ 2022-23ರ ಕಂಬಳ ಋತುವಿನ ಪ್ರಥಮ ಕಂಬಳ ದಕ್ಷಿಣ ಕನ್ನಡ ಜಿಲ್ಲೆಯ ಕಕ್ಯಪದವಿನಲ್ಲಿ ಸಂಪನ್ನವಾಗಿದೆ. ಕಕ್ಯಪದವಿನ 10ನೇ ವರ್ಷದ “ಸತ್ಯ – ಧರ್ಮ” ಜೋಡುಕರೆ ಕಂಬಳ ಕೂಟ ಶನಿವಾರ ಮತ್ತು ರವಿವಾರ ನಡೆಯಿತು. ಕೂಟದಲ್ಲಿ ಒಟ್ಟು 214 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ 2 ಜೊತೆ, ಅಡ್ಡಹಲಗೆ ವಿಭಾಗದಲ್ಲಿ 9 ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 19 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ...
1 94 95 96 97 98 167
Page 96 of 167