Wednesday, April 16, 2025

ಬೆಂಗಳೂರು

ಬೆಂಗಳೂರುಸುದ್ದಿ

ಮುಡಾ ಕೇಸಲ್ಲಿ ಸಿಎಂ ಸಿದ್ಧರಾಮಯ್ಯಗೆ ತಾತ್ಕಾಲಿಕ ರಿಲೀಫ್: ಬಿ-ರಿಪೋರ್ಟ್ ಬಗ್ಗೆ ಆದೇಶ ಸದ್ಯಕ್ಕಿಲ್ಲವೆಂದ ಕೋರ್ಟ್ – ಕಹಳೆ ನ್ಯೂಸ್

ಬೆಂಗಳೂರು: ಮುಡಾ ಹಗರಣ ಸಂಬಂಧ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದಂತ ಬಿ-ರಿಪೋರ್ಟ್ ಪ್ರಶ್ನಿಸಿದಂತ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ವಾದ-ಪ್ರತಿವಾದ ಆಲಿಸಿದಂತ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ಲೋಕಾಯುಕ್ತದಿಂದ ಸಲ್ಲಿಸಿರುವಂತ ಬಿ-ರಿಪೋರ್ಟ್ ಬಗ್ಗೆ ಆದೇಶವನ್ನು ಸದ್ಯಕ್ಕೆ ನೀಡುವುದಿಲ್ಲ. ತನಿಖೆ ಮುಂದುವರೆಯಲಿ ಎಂಬುದಾಗಿ ಆದೇಶದಲ್ಲಿ ತಿಳಿಸಿದ್ದಾರೆ. ಈ ಮೂಲಕ ಸಿಎಂ ಸಿದ್ಧರಾಮಯ್ಯಗೆ ಮುಡಾ ಕೇಸಲ್ಲಿ ತಾತ್ಕಾಲಿಕ ರಿಲೀಫ್ ನೀಡಿದ್ದಾರೆ. ಮುಡಾ ಹಗರಣ ಸಂಬಂಧ ಲೋಕಾಯುಕ್ತದಿಂದ ನ್ಯಾಯಾಲಯಕ್ಕೆ...
ಬೆಂಗಳೂರುಸಿನಿಮಾಸುದ್ದಿ

1.3 ಕೋಟಿ ಮೌಲ್ಯದ ಲಕ್ಷುರಿ ಕಾರು ಖರೀದಿಸಿದ ರಿಷಬ್ ಶೆಟ್ಟಿ – ಕಹಳೆ ನ್ಯೂಸ್

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. 1.3 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರನ್ನು ಅವರು ಖರೀದಿಸಿದ್ದಾರೆ. ಹೊಸ ಕಾರಿನ ಫೋಟೋಗಳು ವೈರಲ್ ಆಗ್ತಿವೆ. ‘ಕಾಂತಾರ’  ಸಕ್ಸಸ್ ಬಳಿಕ ರಿಷಬ್‌ಗೆ ಬೇಡಿಕೆ ಹೆಚ್ಚಾಗಿದೆ. ಕನ್ನಡ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಮನೆಗೆ ದುಬಾರಿ ಕಾರನ್ನು ಖರೀದಿಸಿ ತಂದಿದ್ದಾರೆ. 1.3 ಕೋಟಿ ರೂ. ಮೌಲ್ಯದ ಟೊಯೋಟಾ ವೆಲ್ ಫೈರ್ ಕಾರನ್ನು  ಕೊಂಡುಕೊಂಡಿದ್ದಾರೆ. ಹೊಸ...
ಬೆಂಗಳೂರುರಾಜ್ಯಸುದ್ದಿ

ರಾಜ್ಯದಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ : ಈ ಜಿಲ್ಲೆಗಳಿಗೆ `ರೆಡ್ ಅಲರ್ಟ್’ ಘೋಷಣೆ.!– ಕಹಳೆ ನ್ಯೂಸ್

ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೋಮವಾರ ಬೆಂಗಳೂರು ನಗರ ಸೇರಿದಂತೆ ಹಲವು ಕಡೆ ಮಳೆಯಾಗಿದೆ. ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಪ್ರಮುಖವಾಗಿ ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌ ಪುರದಲ್ಲಿ 4 ಸೆಂ.ಮೀ., ಧರ್ಮಸ್ಥಳದಲ್ಲಿ 3 ಸೆಂ.ಮೀ., ಚಿಕ್ಕಮಗಳೂರು ಜಿಲ್ಲೆಯ ಜಯಪುರ, ಮೈಸೂರು ಜಿಲ್ಲೆಯ ಸರಗೂರು, ಹಾವೇರಿಯಲ್ಲಿ ತಲಾ 1...
ಕೊಡಗುದಕ್ಷಿಣ ಕನ್ನಡಪುತ್ತೂರುಬೆಂಗಳೂರುಬೆಳ್ತಂಗಡಿಮಡಿಕೇರಿವಾಣಿಜ್ಯಸುದ್ದಿ

ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಹೊಸತನ ; ವಜ್ರಗಳ LGD ಟೆಸ್ಟಿಂಗ್ ಮಿಷನ್ – ಕಹಳೆ ನ್ಯೂಸ್

ಶುದ್ಧತೆಯ ವಿಚಾರ ಬಂದಾಗ ನಂಬಿಕೆಯೂ ಮುಖ್ಯ. ಅದಕ್ಕಾಗಿ, 8 ದಶಕಗಳಿಂದ ನಿಮ್ಮ ಎದುರಿನಲ್ಲಿ ಬೆಳೆದು ನಿಂತ ವಿಶ್ವಾಸದ ಚಿನ್ನಾಭರಣಗಳ ಮಳಿಗೆ ಈಗ ಉದ್ಯಮದ ಇತಿಹಾಸದಲ್ಲೇ ಗ್ರಾಹಕ ಸಮ್ಮುಖದಲ್ಲೇ, ಭಾರತದಲ್ಲೇ ಪ್ರಪ್ರಥಮ " ವಜ್ರದ ಮೂಲವನ್ನು ಗ್ರಾಹಕರಿಗೆ ತಿಳಿಸುವ" ಹೊಚ್ಚ ಹೊಸ ವಜ್ರ ಪರೀಕ್ಷಕಾ ಯಂತ್ರಗಳನ್ನು ಗ್ರಾಹಕ ಮುಖಿಯಾಗಿ ಪರಿಚಯಿಸುತ್ತಿದೆ . ಕೆಲವೊಮ್ಮೆ ವಜ್ರಾಭರಣಗಳ ತಯಾರಿಕೆಯಲ್ಲಿ ನೈಜ ಮತ್ತು ಲ್ಯಾಬ್ ನಲ್ಲಿ ತಯಾರಾದ ವಜ್ರಗಳು ಮಿಶ್ರವಾಗಿರುವ ಸಂಭವ ಇರುತ್ತದೆ. ಕಾಲಕ್ರಮೇಣ ಲ್ಯಾಬ್ನಲ್ಲಿ...
ಬೆಂಗಳೂರುಸಂತಾಪಸಿನಿಮಾಸುದ್ದಿ

ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ ನಿಧನ – ಕಹಳೆ ನ್ಯೂಸ್

ಬೆಂಗಳೂರು : ಕನ್ನಡದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ (76) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದ್ದಾರೆ. ಹಲವು ದಿನಗಳ ಕಾಲ ಅನಾರೋಗ್ಯದಿಂದ ಅವರು ಬಳಲುತ್ತಿದ್ದ ಜನಾರ್ಧನ್ ಅವರು ತಡರಾತ್ರಿ 2.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಸುಲ್ತಾನ್ ಪಾಳ್ಯದ ನಿವಾಸದಲ್ಲಿರುವ ಅವರ ನಿವಾಸದಲ್ಲಿ ಜನಾರ್ಧನ್ ಅವರ ಪಾರ್ಥೀವ ಶರೀರ ಇಡಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಧ್ಯಾಹ್ನ 3-4 ಗಂಟೆ ವೇಳೆಗೆ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬದ ಮೂಲಗಳಿಂದ...
ಜಿಲ್ಲೆದಕ್ಷಿಣ ಕನ್ನಡಬೆಂಗಳೂರುರಾಜ್ಯಸುದ್ದಿ

ಬೆಂಗಳೂರಿನಲ್ಲಿ ಆಕಸ್ಮಿಕ ಬೆಂಕಿ ಅವಘಡ: 20ಕ್ಕೂ ಅಧಿಕ ಶೆಡ್ ಭಸ್ಮ-ಕಹಳೆ ನ್ಯೂಸ್

ಬೆಂಗಳೂರು : ಬೆಂಗಳೂರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದ್ದು 20ಕ್ಕೂ ಹೆಚ್ಚು ಶೆಡ್‌ಗಳು ಸುಟ್ಟು ಭಸ್ಮವಾಗಿವೆ. ಕೂಲಿ ಕಾರ್ಮಿಕರು ವಾಸವಿದ್ದ ಶೆಡ್ಡುಗಳಿಗೆ ಕಳೆದ ದಿನ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಶೆಡ್ಡುಗಳು ಒಂದೊಂದಾಗಿ ಸುಟ್ಟು ಕರಕಲಾಗಿವೆ. ಹೌದು ಬೆಂಗಳೂರಿನ ವೀರಣ್ಣಪಾಳ್ಯ ಮುಖ್ಯ ರಸ್ತೆಯ ಬಳಿ ಈ ಘಟನೆ ನಡೆದಿದೆ. ಕೂಲಿ ಕಾರ್ಮಿಕರಿಗಾಗಿ ಆಟಿಕೆ ಫ್ಯಾಕ್ಟರಿಯೊಂದು ಈ ಶೆಡ್ಡುಗಳನ್ನು ನಿರ್ಮಾಣ ಮಾಡಿತ್ತು. ಸುಮಾರು 50 ಶೆಡ್ಡುಗಳಲ್ಲಿ 20ಕ್ಕೂ ಅಧಿಕ ಶೆಡ್‌ಗಳು ಬೆಂಕಿಗಾಹುತಿಯಾಗಿವೆ....
ಬೆಂಗಳೂರುರಾಜ್ಯಸುದ್ದಿ

ಕಾರ್ಮಿಕರಿಗೆ ಗುಡ್‌ ನ್ಯೂಸ್‌: ಕನಿಷ್ಠ ವೇತನ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ – ಕಹಳೆ ನ್ಯೂಸ್

ಬೆಂಗಳೂರು : ಕರ್ನಾಟಕ ರಾಜ್ಯದಾದ್ಯಂತ ಕನಿಷ್ಠ ವೇತನ ಕಾಯ್ದೆ 1948 ರ ಕಲಂ 5(1) (ಎ) ಹಾಗೂ 5(1) (ಬಿ) ರಡಿ ಇದುವರೆಗೂ 81 ಅನುಸೂಚಿತ ಉದ್ದಿಮೆಗಳಿಗೆ ಪ್ರತ್ಯೇಕವಾದ ವೇತನ ದರಗಳನ್ನು ನಿಗದಿಪಡಿಸಿ / ಪರಿಷ್ಕರಿಸಿ ಅಧಿಸೂಚನೆ ಹೊರಡಿಸಲಾಗುತ್ತಿತ್ತು. 2022-23ನೇ ಸಾಲಿನಲ್ಲಿ ವಿವಿಧ ಅನುಸೂಚಿತ ಉದ್ದಿಮೆಗಳಿಗೆ ಸಂಬಂಧಿಸಿದ ಒಟ್ಟು 34 ಅನುಸೂಚಿತ ಉದ್ದಿಮಗಳಿಗೆ ಸದರಿ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಕನಿಷ್ಠ ವೇತನಕ್ಕೆ ಹೆಚ್ಚುವರಿಯಾಗಿ ಶೇ. 5 ರಿಂದ 10 ರಷ್ಟು ಏರಿಕೆ...
ಬೆಂಗಳೂರುರಾಜಕೀಯರಾಜ್ಯಸುದ್ದಿ

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೈನಾರ್‌ ನಾಗೇಂದ್ರನ್‌ ಅವಿರೋಧ ಆಯ್ಕೆ – ಕಹಳೆ ನ್ಯೂಸ್

ಚೆನ್ನೈ: ತಮಿಳುನಾಡಿನ (Tamil Nadu) ತಿರುನಲ್ವೇಲಿ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕ ನೈನಾರ್ ನಾಗೇಂದ್ರನ್ (Nainar Nagendran) ಅವರು ಪಕ್ಷದ ರಾಜ್ಯಾಧ್ಯಕ್ಷ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ರಾಜ್ಯ ಉಪಾಧ್ಯಕ್ಷರಾಗಿರುವ ನಾಗೇಂದ್ರನ್ ಅವರು ಈ ಹಿಂದೆ ಎಐಎಡಿಎಂಕೆಯಲ್ಲಿದ್ದರು. ಟಿ.ನಗರದಲ್ಲಿರುವ ಬಿಜೆಪಿ ರಾಜ್ಯ ಪ್ರಧಾನ ಕಚೇರಿ ಕಮಲಾಲಯದಲ್ಲಿ ನಾಪಪತ್ರ ಸಲ್ಲಿಸಿದ ಮೊದಲ ಅಭ್ಯರ್ಥಿಯಾಗಿದ್ದಾರೆ. ಅವರ ನಾಮನಿರ್ದೇಶನವು ಪಕ್ಷದ ಹಾಲಿ ಅಧ್ಯಕ್ಷ ಕೆ.ಅಣ್ಣಾಮಲೈ, ಕೇಂದ್ರ ಸಚಿವ ಎಲ್.ಮುರುಗನ್, ಮಾಜಿ...
1 2 3 138
Page 1 of 138
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ