Friday, November 22, 2024

ಬೆಂಗಳೂರು

ಬೆಂಗಳೂರು

ಗುಜರಾತ್ ನ ಮಾದರಿಯಲ್ಲಿ ವಿದ್ಯುತ್ ಉತ್ಪಾದಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ ಚಿತ್ರನಟ ಅನಿರುದ್ಧ – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದಲ್ಲಿ ತೆರೆದ ಕಾಲುವೆಗಳನ್ನು ಮುಚ್ಚಿ ಗುಜರಾತ್ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಮುಂದಾದ ಮಾದರಿಯಂತೆ ರಾಜ್ಯದಲ್ಲಿಯೂ ಸಹ ತೆರೆದ ಕಾಲುವೆಗಳನ್ನು ಮುಚ್ಚಬೇಕು ಎಂದು ಚಿತ್ರನಟ, ಜೊತೆಜೊತೆಯಲಿ ಖ್ಯಾತಿಯ ನಟ ಅನಿರುದ್ಧ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಗುಜರಾತ್ ರಾಜ್ಯದಲ್ಲಿ ತೆರದ ಕಾಲುವೆಗಳನ್ನು ಮುಚ್ಚಿ ಸೌರಫಲಕಗಳನ್ನು ಬಳಸಿ, ಎರಡೂ ಬದಿಯಲ್ಲಿ ಗೋಡೆಗಳನ್ನು ನಿರ್ಮಿಸಿ ವರ್ಟಿಕಲ್ ಗಾರ್ಡನಿಂಗ್‌ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿಯೂ ಸಹ ಅದೇ ಮಾದರಿಯಲ್ಲಿ ತೆರದ...
ಬೆಂಗಳೂರು

ಹಣ ಕಿತ್ಕೊಂಡು, ಚಿಕಿತ್ಸೆಯನ್ನೂ ನೀಡದೇ ನಡುರಸ್ತೆಯಲ್ಲಿ‌ ನನ್ನ ಅಜ್ಜಿನ ಸಾಯಿಸಿದ್ರು; ಮೈಸೂರಿನ ವೈದ್ಯರ ಬೇಜವಾಬ್ದಾರಿಗೆ ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಆಕ್ರೋಶ- ಕಹಳೆ ನ್ಯೂಸ್

ಬೆಂಗಳೂರು : ಕೊರೊನಾದಂತಹ ಸಂದರ್ಭದಲ್ಲಿ ಕೆಲ ವೈದ್ಯರು ಮೆರೆಯುತ್ತಿರುವ ಬೇಜವಾಬ್ದಾರಿ ವಿರುದ್ಧ ಕಿಡಿಕಾರಿರುವ ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ , ವೈದ್ಯರು ಸೂಕ್ತ ಸಮಯದಲ್ಲಿ ಸರಿಯಾದ ಬೆಡ್ ಮತ್ತು ಚಿಕಿತ್ಸೆ ನೀಡದೆ ನಮ್ಮ ಅಜ್ಜಿಯನ್ನು ಸಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿರುವ ಪ್ರಥಮ್, ಕೊರೊನಾ ಸಮಯದಲ್ಲಿ 2000 ಕ್ಕೂ ಹೆಚ್ಚು ಕುಟುಂಬ , ವೈದ್ಯರಿಗೆ ಪ್ರಾಮಾಣಿಕವಾಗಿ ಕಿಟ್ ತಲುಪಿಸಿದ ನನ್ನ ಕುಟುಂಬದ ಸ್ವಂತ...
ಬೆಂಗಳೂರು

ಕರ್ನಾಟಕದ ಮುಖ್ಯಮಂತ್ರಿಯಾಗಿ ಮುಂದಿನ ಎರಡೂವರೆ ವರ್ಷ ನಾನೇ ಇರುತ್ತೇನೆ; ಸಿಎಂ ಯಡಿಯೂರಪ್ಪ- ಕಹಳೆ ನ್ಯೂಸ್

ಬೆಂಗಳೂರು : ಕರ್ನಾಟಕದ ಮುಖ್ಯಮಂತ್ರಿಯಾಗಿ ಮುಂದಿನ ಎರಡೂವರೆ ವರ್ಷ ನಾನೇ ಇರುತ್ತೇನೆ, ಒಂದೂವರೆ ವರ್ಷ ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿದ್ದೇನೆ ಹಾಗಾಗಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೂಡ ಬಂದು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ. ನಾಯಕತ್ವ ಗೊಂದಲ ಕೇವಲ ಮಾಧ್ಯಮ ಸೃಷ್ಟಿಯಷ್ಟೆ, ಒಂದೆರಡು ಶಾಸಕರಲ್ಲಿ ಬೇಸರ ಇರಬಹುದು ಹಾಗಾಗಿ ಅವರೊಂದಿಗೆ ಮಾತನಾಡಿ ಸರಿಪಡಿಸಲಾಗುವುದು ಅದಕ್ಕಾಗಿಯೇ ಸಭೆ ಕೂಡ ಕರೆದಿದ್ದೇನೆ...
ಬೆಂಗಳೂರು

ಬೆಂಗಳೂರಿನಲ್ಲಿ ಇಂದು ‘ಮಧ್ಯಾಹ್ನ 12’ರಿಂದಲೇ ನಿಷೇಧಾಜ್ಞೆ ಜಾರಿ – ಕಮೀಷನರ್ ‘ಕಮಲ್ ಪಂತ್’ ಹೊಸ ಆದೇಶ – ಕಹಳೆ ನ್ಯೂಸ್

ಬೆಂಗಳೂರು : ಇಂದು ಮಧ್ಯಾಹ್ನದಿಂದಲೇ ಬೆಂಗಳೂರು ಲಾಕ್ ಆಗಲಿದೆ. ಇಂದು ಮಧ್ಯಾಹ್ನದಿಂದಲೇ ನಿಷೇಧಾಜ್ಞೆ ಜಾರಿ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೊಸ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಸಂಜೆ 6ರ ಬದಲು ಮಧ್ಯಾಹ್ನ 12ರಿಂದ ನಿಷೇಧಾಜ್ಞೆ ಬೆಂಗಳೂರಿನಲ್ಲಿ ಜಾರಿಯಾಗಲಿದೆ. ಈ ಸಂಬಂಧ ಹೊಸ ಆದೇಶ ಹೊರಡಿಸಿರುವಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, ಬೆಂಗಳೂರಿನಲ್ಲಿ ಇಂದು ಸಂಜೆ 6 ಗಂಟೆಯಿಂದ ನಿಷೇಧಾಜ್ಞೆ ಜಾರಿಗೊಳಿಸಿದ್ದರ ಬದಲಾಗಿ,...
ಬೆಂಗಳೂರು

ಪ್ರಥಮ ಮತ್ತು ದ್ವಿತೀಯ ಪಿಯುಸಿಯ ದಾಖಲಾತಿ ದಿನಾಂಕ ಜನವರಿ 8ರವರೆಗೆ ವಿಸ್ತರಣೆ-ಕಹಳೆ ನ್ಯೂಸ್

ಬೆಂಗಳೂರು : 2020-21ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ದಾಖಲಾಗಲು ದಿನಾಂಕ 24-12-2020 ಕೊನೆಯ ದಿನವಾಗಿತ್ತು. ಇಂತಹ ದಿನಾಂಕವನ್ನು ಇದೀಗ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಿನಾಂಕ 08-01-2021ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, 2020-21ನೇ ಶೈಕ್ಷಣಿಕ ಸಾಲಿಗೆ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರಥಮ ಹಾಗೂ ದ್ವಿತೀಯ ಪಿಯುಸಿಗೆ ದಿನಾಂಕ 24-12-2020ರವರೆಗೆ ವಿಸ್ತರಿಸಲಾಗಿದ್ದು, ವಿದ್ಯಾರ್ಥಿಗಳು ಮತ್ತು ಪೆÇೀಷಕರ ಮನವಿಯ ಮೇರೆಗೆ ಹಾಗೂ...
ಬೆಂಗಳೂರು

ಇಂದು ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ- ಕಹಳೆ ನ್ಯೂಸ್

ಬೆಂಗಳೂರು:ಇಂದು ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆಯೂ ನಡೆಯಲಿದೆ. 91 ಸಾವಿರಕ್ಕೂ ಹೆಚ್ಚು ಗ್ರಾಮೀಣ ಜನಪ್ರತಿನಿಧಿಗಳ ಭವಿಷ್ಯ ನಿರ್ಣಯವಾಗಲಿದೆ. ಎಲ್ಲ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಕ್ಕೆ ಮತ ಎಣಿಕೆ ಆರಂಭವಾಗಲಿದ್ದು, ಚುನಾವಣಾ ಆಯೋಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹಾಗೆಯೇ ಸಂಜೆ ವೇಳೆಗೆ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಅಂತಿಮ ಫಲಿತಾಂಶ ಹೊರಬೀಳಲಿದೆ. ದಕ್ಷಿಣ ಕನ್ನಡ 220ಗ್ರಾಮ ಪಂಚಾಯತ್ ನ ಒಟ್ಟು 3,131 ಸ್ಥಾನಗಳನ್ನು ವಿಭಜಿಸಿ 3 ಕ್ಷೇತ್ರಗಳಿಗೆ ಒಂದು ಟೇಬಲ್ ನಂತೆ...
ಬೆಂಗಳೂರು

ಜನವರಿ 1ರಿಂದ ಬಿಎಂಟಿಸಿ ಎಸಿ ಬಸ್‍ಗಳ ಟಿಕೆಟ್ ದರ ಇಳಿಕೆ-ಕಹಳೆ ನ್ಯೂಸ್

ಬೆಂಗಳೂರು : ಜನವರಿ 1 ರಿಂದ ಎಸಿ ಬಸ್‍ಗಳ ಟಿಕೆಟ್ ದರವನ್ನು ಕಡಿಮೆ ಮಾಡಲು ಬಿಎಂಟಿಸಿ ಮುಂದಾಗಿದ್ದು, ನಗರದಲ್ಲಿ 80 ಎಸಿ ಬಸ್‍ಗಳ ಸಂಚಾರ ಆರಂಭಿಸಿ, ಎಸಿ ಬಸ್‍ಗಳ ಟಿಕೆಟ್ ದರ ಕಡಿಮೆ ಮಾಡಿ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವುದು ಬಿಎಂಟಿಸಿ ಆಲೋಚನೆಯಾಗಿದೆ. ಇನ್ನು ಕೊರೊನಾ ಲಾಕ್‍ಡೌನ್ ಶುರುವಾದಾಗಿನಿಂದ ಸಾಮಾನ್ಯ ಬಸ್‍ಗಳು ಕೂಡ ಸ್ಥಗಿತಗೊಂಡಿದ್ದವು. ಎಸಿ ಬಸ್‍ಗಳಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಮತ್ತು ಟಿಕೆಟ್ ದರ ಹೆಚ್ಚಿರುವುದರಿಂದ...
ಬೆಂಗಳೂರು

ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್ 31 ರಿಂದ ಎರಡು ದಿನ ಮಳೆಯಾಗುವ ಸಾಧ್ಯತೆ;ಹವಾಮಾನ ಇಲಾಖೆ ಮುನ್ಸೂಚನೆ-ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್ 31 ರಿಂದ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಹಾಸನ, ಕೊಡಗು, ಮೈಸೂರು, ಮಂಡ್ಯ, ರಾಮನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇನ್ನು ರಾಜ್ಯಾದ್ಯಂತ ಚಳಿಯ ವಾತಾವರಣ ಮುಂದುವರೆದಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಭಾಗಶಃ ಮೋಡ ಕವಿದ...
1 103 104 105 106 107 113
Page 105 of 113