ರಸ್ತೆ ವಿಚಾರದಲ್ಲಿ ಗಲಾಟೆ ; ನಾನು ಕನ್ನಡಿಗ ಯಾವುದೇ ಪ್ರದೇಶದಲ್ಲೂ ಜಮೀನು ಖರೀದಿಸುವೆ ಎಂದ ನಟ ಯಶ್-ಕಹಳೆ ನ್ಯೂಸ್
ಬೆಂಗಳೂರು : ನಟ ಯಶ್ ಹಾಸನ ಜಿಲ್ಲೆಯಲ್ಲಿ ರಸ್ತೆ ವಿಚಾರಕ್ಕೆ ಸಂಬಂಧಿಸಿ ನಡೆದ ಗಲಾಟೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಹಾಸನದವನು. ಅದಕ್ಕಿಂತ ಮಿಗಿಲಾಗಿ ನಾನು ಕನ್ನಡಿಗ. ಯಾವುದೇ ಪ್ರದೇಶದಲ್ಲೂ ಜಮೀನು ಕೊಂಡುಕೊಳ್ತೀನಿ ಎಂದಿದ್ದಾರೆ. ಹಾಸನದ ತಿಮ್ಮಲಾಪುರದಲ್ಲಿ ಕೃಷಿ ಜಮೀನಿಗೆ ಕಾಂಪೌಂಡ್ ನಿರ್ಮಿಸುವಾಗ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿತ್ತು. ಯಶ್ ಪೋಷಕರು ಮತ್ತು ಗ್ರಾಮಸ್ಥರ ನಡುವೆ ಘರ್ಷಣೆಯುಂಟಾಗಿದ್ದು, ಈ ಸಂಬಂಧ ಸ್ವತಃ ಯಶ್ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಜಮೀನಿಗೆ ರಸ್ತೆ...