“ಓಂ ನವ ನರಸಿಂಹ” ಇಂಗ್ಲಿಷ್ ಭಕ್ತಿಗೀತೆ ಎ2 ಭಕ್ತಿ ಸಾಗರ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆ-ಕಹಳೆ ನ್ಯೂಸ್
ಬೆಂಗಳೂರು :“ಓಂ ನವ ನರಸಿಂಹ" ಎಂಬ ಇಂಗ್ಲಿಷ್ ಭಕ್ತಿಗೀತೆಯನ್ನು ಎ2 ಭಕ್ತಿ ಸಾಗರ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇಂಗ್ಲಿಷ್‌ನಲ್ಲಿ ಬಿಡುಗಡೆಯಾದ ನರಸಿಂಹ ಸರಣಿಯ ಹಾಡುಗಳಲ್ಲಿ ಪ್ರಪಂಚದಲ್ಲೇ ಇದು ಮೊದಲನೆಯದು ಎಂಬುದು ವಿಶೇಷವಾಗಿದೆ. ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರ ನಿರ್ಮಾಪಕರಾದ ಪಿ. ಕೃಷ್ಣ ಪ್ರಸಾದ್ ಸಾರಥ್ಯದಲ್ಲಿ ಈ ಗೀತೆ ಮೂಡಿ ಬಂದಿದೆ. ದರ್ಶನ್ ನಾರಾಯಣ್ ಅವರ ಹಿನ್ನೆಲೆ ಗಾಯನವಿರುವ ಈ ಗೀತೆಯಲ್ಲಿ ಸ್ವಸ್ತಿಕ್ ಕಾರೇಕಡ್ ಅವರ ಸಂಗೀತ...