ಕಾಂಗ್ರೆಸ್ ಶಾಸಕಾಂಗ ಪಕ್ಷ ಸೇರ್ಪಡೆ ಬದಲಿಗೆ ಬಾಹ್ಯ ಬೆಂಬಲ; ಕಾಂಗ್ರೆಸ್ ಸೇರ್ಪಡೆಯಿಂದ ಹಿಂದೆ ಸರಿದ ಶರತ್ ಬಚ್ಚೇಗೌಡ-ಕಹಳೆ ನ್ಯೂಸ್
ಬೆಂಗಳೂರು : ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬುದಕ್ಕೆ ಇಂದು ತೆರೆ ಬಿದ್ದಿದೆ. ಅವರು ಪಕ್ಷಕ್ಕೆ ಸೇರ್ಪಡೆಯಾಗುವುದಕ್ಕೆ ಬದಲಾಗಿ ಕಾಂಗ್ರೆಸ್ನ ಬೆಂಬಲ ಪಡೆದುಕೊಂಡಿದ್ದಾರೆ. ನಿಮ್ಮ ಶಾಸಕರು ಈಗಲೂ ನಾನು ಪಕ್ಷೇತರವಾಗಿಯೇ ಉಳಿತೀನಿ ಅಂತಿದ್ದಾರೆ. ಆದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಬೆಂಬಲ ಕೋರಿದ್ದಾರೆ, ನಾವು ಬೆಂಬಲ ನೀಡ್ತೇವೆ. ಈಗ ನಿಮ್ಮನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಳ್ಳಲು ಏನೆಲ್ಲಾ ಪಗಡೆ ಆಡಿದ್ದೀವಿ ಅಂತ ನನಗೆ ಹಾಗೂ ಸಿ.ಎಂ. ಲಿಂಗಪ್ಪನವರಿಗೆ ಗೊತ್ತು....