Sunday, January 19, 2025

ಬೆಂಗಳೂರು

ಬೆಂಗಳೂರುಸಿನಿಮಾಸುದ್ದಿ

ಮಾಜಿ ಸಿಎಂ ಜೊತೆ ನಟಿ ರಚಿತಾ ರಾಮ್ ಒಡನಾಟ : ಲಾಯರ್ ಜಗದೀಶ್ ಆರೋಪಕ್ಕೆ ಡಿಂಪಲ್‌ ಕ್ವೀನ್ ತಿರುಗೇಟು – ಕಹಳೆ ನ್ಯೂಸ್ 

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ಡಿಮ್ಯಾಂಡ್‌ನಲ್ಲಿ ಇರುವ ನಟಿ. ನಟಿ ರಚಿತಾ ರಾಮ್ ಅವರು ಸಾಕಷ್ಟು ಕಷ್ಟಗಳಿಂದ ಮೇಲೆ ಬಂದವರು. 750 ರೂಪಾಯಿ ಸಂಬಳದಿಂದ ಸಿನಿ ಲೋಕಕ್ಕೆ ಎಂಟ್ರಿಯಾಗಿದ್ದಾರೆ. ಸಾಕಷ್ಟು ಕಷ್ಟಗಳನ್ನ ಅನುಭವಿಸಿದ್ದು, ಇದೀಗ ದೊಡ್ಡ ಸ್ಟಾರ್‌ ನಟಿಯರಲ್ಲಿ ರಚಿತಾ ರಾಮ್‌ ಸಹ ಒಬ್ಬರಾಗಿದ್ದಾರೆ. ನಟಿ ರಚಿತಾ ರಾಮ್ ಸದ್ಯ ಡಿಮ್ಯಾಂಡ್‌ನಲ್ಲಿ ಇರುವ ನಟಿ. ಒಂದು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದು, ಲೇಡಿ...
ಕ್ರೈಮ್ಚಿಕ್ಕಮಂಗಳೂರುಬೆಂಗಳೂರುರಾಜ್ಯಸುದ್ದಿ

ಕಾಡಿನ ರಹಸ್ಯ ಸ್ಥಳದಲ್ಲಿ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿದ್ದಾರೆ ನಕ್ಸಲರು..! – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಶರಣಾದ ನಕ್ಸಲರು ಇನ್ನೂ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿಲ್ಲ. ಆಧುನಿಕ ಶಸ್ತ್ರಾಸ್ತ್ರಗಳನ್ನು  ಕಾಡಿನ ರಹಸ್ಯ ಸ್ಥಳದಲ್ಲಿ ಅಡಗಿಸಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಯಾವೊಬ್ಬ ನಕ್ಸಲರು ಕೂಡ ಆಯುಧಗಳನ್ನು ಪೊಲೀಸರಿಗೆ ನೀಡಿಲ್ಲ. ಮುಂದಿನ ವಾರ ಪೊಲೀಸರು ನಕ್ಸಲರ ವಶಕ್ಕೆ ಪಡೆಯಲಿದ್ದು ಬಳಿಕ ಅಡಗಿಸಿಟ್ಟ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಪೊಲೀಸರು 6 ಮಂದಿ ನಕ್ಸಲರನ್ನು ರಾಷ್ಟ್ರೀಯ ತನಿಖಾ ದಳದ (NIA) ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸುವ ಮೊದಲು ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ....
ದಕ್ಷಿಣ ಕನ್ನಡಪುತ್ತೂರುಬೆಂಗಳೂರುಸುದ್ದಿ

ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಹಾಗೂ ಭಟ್ ಬಯೋಟೆಕ್ ಬೆಂಗಳೂರು, ನವಚೇತನ ಹಿರಿಯ ನಾಗರಿಕರ ಬಡಾವಣೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಗೃಹೋದ್ಯಮ ಯಂತ್ರ ಹಸ್ತಾಂತರ – ಕಹಳೆ ನ್ಯೂಸ್

ಪುತ್ತೂರು  : ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಹಾಗೂ ಭಟ್ ಬಯೋಟೆಕ್ ಬೆಂಗಳೂರು, ನವಚೇತನ ಹಿರಿಯ ನಾಗರಿಕರ ಬಡಾವಣೆ ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ಕಲ್ಲರ್ಪೆ ನಿವಾಸಿ ಶ್ರೀಯುತ ರಾಮಪ್ರಸಾದ ಜಿ ಕೆ ಇವರಿಗೆ ಸುಮಾರು 1 ಲಕ್ಷ ಮೊತ್ತದ ದೀಪದ ಬತ್ತಿ ತಯಾರಿಸುವ ಸ್ವಯಂ ಚಾಲಿತ ಯಂತ್ರವನ್ನು ಉಚಿತವಾಗಿ ಹಸ್ತಾಂತರಿಸಲಾಯಿತು. ಶ್ರೀಯುತ ರಾಮಪ್ರಸಾದ ಜಿ ಕೆ ಇವರ ಅನಿರೀಕ್ಷಿತ ಅನಾರೋಗ್ಯದ ಕಾರಣದಿಂದಾಗಿ ದೈನಂದಿನ ಜೀವನ ನಡೆಸಲು ಕಷ್ಟಕರ ಪರಿಸ್ಥಿತಿ...
ದಕ್ಷಿಣ ಕನ್ನಡಬೆಂಗಳೂರುಮಂಗಳೂರುರಾಜ್ಯಸಂತಾಪಸುದ್ದಿ

ತೀವ್ರ ಅನಾರೋಗ್ಯದಿಂದ ಹಿರಿಯ ಸಾಹಿತಿ ನಾ.ಡಿಸೋಜ ವಿಧಿವಶ : ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸದ ಸರ್ಕಾರ- ಕಹಳೆ ನ್ಯೂಸ್

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ನೋರ್ಬೆರ್ಟ್ ಡಿಸೋಜ ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. 88 ವರ್ಷದ ಡಿಸೋಜ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ 7.50ಕ್ಕೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನೂ ಅವರ ನಿಧನದ ಗೌರವಾರ್ಥ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ರಾಜಕೀಯ ವ್ಯಕ್ತಿಗಳು ನಿಧನ ಹೊಂದಿದಾಗ ರಜೆ ಘೋಷಿಸುವ ಸರ್ಕಾರಗಳು, ಇಂತಹ...
ಆರೋಗ್ಯಬೆಂಗಳೂರುರಾಜ್ಯಸುದ್ದಿ

ಕರ್ನಾಟಕಕ್ಕೂ ಕಾಲಿಟ್ಟ `HMPV’ ವೈರಸ್ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ದೃಢ- ಕಹಳೆ ನ್ಯೂಸ್

ಬೆಂಗಳೂರು : ಚೀನಾದಲ್ಲಿ ಅಟ್ಟಹಾಸ ಮೆರೆಯುತ್ತಿರುವ HMPV ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದ್ದು, ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ ಮಗುವಿಗೆ ಜ್ವರ ಕಂಡು ಬಂದ ಹಿನ್ನೆಲೆಯಲ್ಲಿ ಮಗುವಿಗೆ ರಕ್ತ ಪರೀಕ್ಷೆ ಮಾಡಿಸಲಾಗಿದೆ. ಈ ವೇಳೆ ಸೋಂಕು ಇರುವುದು ದೃಢಪಟ್ಟಿದೆ. HMPV ಎಂದರೇನು..? 2001 ರಲ್ಲಿ ಪತ್ತೆಯಾದ ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (HMPV), ನ್ಯುಮೊವಿರಿಡೆ ಕುಟುಂಬಕ್ಕೆ ಸೇರಿದ್ದು, ಇದು...
ದಕ್ಷಿಣ ಕನ್ನಡಬೆಂಗಳೂರುಮಂಗಳೂರುಸುದ್ದಿ

ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾವಣೆ : ರೈಲ್ವೇ ಮಂಡಳಿಯ ಪ್ರಸ್ತಾವನೆಗೆ ಅಸಮ್ಮತಿ ಸೂಚಿಸಿದ ನೈಋತ್ಯ ರೈಲ್ವೇ ಮಂಡಳಿ-ಕಹಳೆ ನ್ಯೂಸ್

ಮಂಗಳೂರು: ಬೆಂಗಳೂರು -ಮೈಸೂರು – ಮಂಗಳೂರು ಸೆಂಟ್ರಲ್‌- ಮುರುಡೇಶ್ವರ ನಡುವೆ ಸಂಚರಿಸುತ್ತಿರುವ ಬೆಂಗಳೂರು – ಮುರುಡೇಶ್ವರ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾಯಿಸುವಂತೆ ರೈಲ್ವೇ ಮಂಡಳಿಯ ಪ್ರಸ್ತಾವನೆಗೆ ನೈಋತ್ಯ ರೈಲ್ವೇ ಮಂಡಳಿ ಅಸಮ್ಮತಿ ಸೂಚಿಸಿದೆ ಎಂದು ನೈರುತ್ಯ ರೈಲ್ವೇಯ ಅಧಿಕೃತ ಮೂಲಗಳು ತಿಳಿಸಿವೆ. ನಂ.16585/86 ರೈಲು ರಾತ್ರಿ 7.45ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಮಧ್ಯಾಹ್ನ 12.50ಕ್ಕೆ ಮುರುಡೇಶ್ವರ ತಲುಪುತ್ತಿದ್ದು,ಮಧ್ಯಾಹ್ನ 2.10ಕ್ಕೆ ಮುರುಡೇಶ್ವರ ದಿಂದ ಹೊರಟು ಮರುದಿನ ಬೆಳಗ್ಗೆ 7.15ಕ್ಕೆ ಮತ್ತೆ ಬೆಂಗಳೂರು...
ಬೆಂಗಳೂರುರಾಜ್ಯಸುದ್ದಿ

 ಪ್ರಯಾಣಿಕರ ಜೇಬಿಗೆ ಶೇ.15ರಷ್ಟು ಕತ್ತರಿ ಪ್ರಯೋಗ : ಮಧ್ಯರಾತ್ರಿಯಿಂದಲೇ KSRTC ಬಸ್‌ ಟಿಕೆಟ್‌ ಪರಿಷ್ಕೃತ ದರ ಜಾರಿ – ಕಹಳೆ ನ್ಯೂಸ್

ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ರಾಜ್ಯದ ನಾಲ್ಕು ನಿಗಮಗಳಲ್ಲಿ ಏರಿಕೆಯಾಗಿದ್ದ ಬಸ್ ದರ ಪ್ರಯಾಣ ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. ಶನಿವಾರ ಮಧ್ಯರಾತ್ರಿ 11 ಗಂಟೆಯಿಂದ ನೂತನ ದರ ಪರಿಷ್ಕರಣೆಯಾಗಿದ್ದು, ಭಾನುವಾರದಿಂದ ಹೊಸ ದರ ಜಾರಿಗೆ ಬರಲಿದೆ. ಕೆಎಸ್‌ಆರ್‌ಟಿಸಿ ಕಲ್ಯಾಣ ಕರ್ನಾಟಕ, ವಾಯುವ್ಯ ಮತ್ತು ಬಿಎಂಟಿಸಿಗಳಲ್ಲಿ ಭಾನುವಾರದಿಂದಲೇ ಹೊಸ ದರ ಅನ್ವಯವಾಗಲಿದ್ದು, ಪ್ರಯಾಣಿಕರ ಜೇಬಿಗೆ ಶೇ.15ರಷ್ಟು ಕತ್ತರಿ ಪ್ರಯೋಗವಾಗಲಿದೆ. ಹಾಲಿ ಇದ್ದ ದರಕ್ಕೆ 15% ಏರಿಕೆಯಾಗಲಿದ್ದು, ಶಕ್ತಿ ಯೋಜನೆಯಿಂದ ನಷ್ಟದಲ್ಲಿರುವ ಸಾರಿಗೆ ನಿಗಮಗಳನ್ನು ಲಾಭಕ್ಕಿಂತ...
ದಕ್ಷಿಣ ಕನ್ನಡಬೆಂಗಳೂರುಮಂಗಳೂರುಸಂತಾಪಸುದ್ದಿ

ಖ್ಯಾತ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಅವರಿಗೆ ಪಿತೃವಿಯೋಗ – ಕಹಳೆ ನ್ಯೂಸ್

ಪುತ್ತೂರು / ಬೆಂಗಳೂರು : ಕರ್ನಾಟಕದ ಉಚ್ಚ ನ್ಯಾಯಾಲಯದ ಖ್ಯಾತ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಅವರಿಗೆ ಪಿತೃವಿಯೋಗವಾಗಿದೆ. ಪ್ರಗತಿಪರ ಕೃಷಿಕರಾದ ಬಂಟ್ವಾಳ ತಾಲೂಕಿನ ಪಂಜಿಗದ್ದೆ, ಅಜರಾಮರ‌ ನಿವಾಸಿಯಾಗಿದ್ದ ಈಶ್ವರ ಭಟ್ ಮೈರ ( 74 ) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪುತ್ರ ಅರಣ್ ಶ್ಯಾಮ್, ಪುತ್ರಿ ಮಮತಾ ಹಾಗೂ ಪತ್ನಿ ಕುಸುಮಾ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಬಂಟ್ವಾಳ ತಾಲೂಕಿನ ಸ್ವ- ಗೃಹದಲ್ಲಿ ನಡೆಯಲಿದೆ. ಇಂದು (...
1 2 3 4 126
Page 2 of 126