ವರದಕ್ಷಿಣೆ ಕೊಡಲಿಲ್ಲವೆಂದು ಮಧ್ಯರಾತ್ರಿ ವರ ಪರಾರಿ-ಕಹಳೆ ನ್ಯೂಸ್
ಬೆಂಗಳೂರು: ವರದಕ್ಷಿಣೆ ಯಾಗಿ 50 ಲಕ್ಷ ರೂ. ನಗದು ಮತ್ತು ಐಷಾರಾಮಿ ಮರ್ಸಿಡಿಸ್ ಕಾರನ್ನು ನೀಡಲಿಲ್ಲ ಎಂಬ ಕಾರಣಕ್ಕೆ ವರ ಮತ್ತು ಆತನ ಕುಟುಂಬ ಸದಸ್ಯರು ರಾತೋರಾತ್ರಿ ಮದುವೆ ಮನೆಯಿಂದ ಪರಾರಿಯಾಗಿದ್ದಾರೆ. ವಧುವಿನ ತಂದೆ ಬಸಂತ್ ಕುಮಾರ್ ನೀಡಿರುವ ದೂರಿನ ಮೇರೆಗೆ ಉಪ್ಪಾರಪೇಟೆ ಠಾಣೆ ಪೊಲೀಸರು ಜಿಗಣಿ ಮೂಲದ ವರ ಪ್ರೇಮ್ ಚಂದ್ ಪಾವನಿ, ಆತನ ತಂದೆ ಶಿವಕುಮಾರ್ ಪಾವನಿ ಮತ್ತು ತಾಯಿ ರಾಧಾ ಪಾವನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರುದಾರರ...